ಡಾ.ಸತೀಶಕುಮಾರ ಅವರಿಂದ ಕಬಡ್ಡಿ ಪಂದ್ಯಕ್ಕೆ ಚಾಲನೆ

ಕೊಪ್ಪಳ  : ಕೊಪ್ಪಳ ನಗರದಲ್ಲಿ ನಡೆಯುತ್ತಿರುವ ೩೦ ನೇ ರಾ

ಜ್ಯಮಟ್ಟದ ಪುರುಷರ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಕ್ಕೆ ಸಾರ್ವಜನಿಕ ಗ್ರಂಥಾಲಯ ಇಲಾಖೆ ನಿರ್ದೇಶಕ ಡಾ,ಸತೀಶಕುಮಾರ ಹೊಸಮನಿ ಅವರಿಂದ ಚಾಲನೆ
ಜೈ ಭೀಮ್ ಯೂಥ್ ಸ್ಪೋರ್ಟ್ಸ ಕ್ಲಬ್ ಕೊಪ್ಪಳ ಇವರು ನಡೆಸುತ್ತಿರುವ ರಾಜ್ಯಮಟ್ಟದ ಪುರುಷರ ಹೊನಲು ಬೆಳಕಿನ ಕಬಡ್ಡಿ ಹೇಮಗುಡ್ಡ ಹಾಗೂ ಹರಪನಹಳ್ಳಿ ತಾಲೂಕಿನ ಯಲ್ಲಾಪೂರ ಗ್ರಾಮದ ತಂಡದ ಪಂದ್ಯಕ್ಕೆ ನಾಣ್ಯ ಚಿಮ್ಮುವ ಮೂಲಕ ಚಾಲನೆ ನೀಡಿದರು. ನಂತರ ಎರಡು ತಂಡದ ಆಟಗಾರರಿಗೆ ಹಾರೈಸಿ, ಕಬಡ್ಡಿ ಪಂದ್ಯ ವೀಕ್ಷಿಸಿದರು.
ಈ ಸಂದರ್ಭದಲ್ಲಿ ಡಾ.ಸತೀಶಕುಮಾರ ಹೊಸಮನಿಯವರನ್ನು ಜೈ ಭೀಮ್ ಯೂಥ್ ಸ್ಪೋರ್ಟ್ಸ ಕ್ಲಬ್ ಕೊಪ್ಪಳ ವತಿಯಿಂದ ಸನ್ಮಾನಿಸಲಾಯಿತು. ಈ ಸಮಯದಲ್ಲಿ ಜಗದೀಶ ಚಲವಾದಿ, ಮಹಾವೀರ ಅಳ್ಳಳ್ಳಿ, ಮಂಜುನಾಥ ಆರೆಂಟನೂರ, ಹನುಮಂತಪ್ಪ ಬಂಗಾಳಿಗಿಡ, ಮುತ್ತುರಾಜ ಬೆಲ್ಲದ,ನಾಗರಾಜನಾಯಕ ಡಿ.ಡೊಳ್ಳಿನ, ಉಪಸ್ಥಿತರಿದ್ದರು.

Please follow and like us:
error