ಡಾ. ಬಸವರಾಜ ಪೂಜಾರರಿಗೆ ಗು.ವಿ.ವಿ. ರಾಜ್ಯೋತ್ಸವ ಪ್ರಶಸ್ತಿ

ಕೊಪ್ಪಳ:೩೦ ಅ: ಗುಲಬರ್ಗಾ ವಿಶ್ವವಿದ್ಯಾಲಯವು ಕಲ್ಯಾಣ ಕರ್ನಾಟಕದ ಪ್ರತಿಭಾವಂತ ಮತ್ತು ವಿವಿಧ ಕ್ಷೇತ್ರಗಳ ಸಾಧಕರಿಗೆ ನಿಡುವ ೨೦೧೯ನೇ ವರ್ಷದ ಪ್ರಶಸ್ತಿಯನ್ನು ವಿಶ್ವವಿದ್ಯಾಲಯವು ಪ್ರಕಟಿಸಿದೆ. ಅದರಲ್ಲಿ ನಗರದ ಶ್ರೀ ಗವಿಸಿದ್ಧೇಶ್ವರ ಮಹಾವಿದ್ಯಾಲಯದ ಕನ್ನಡ ಪ್ರಾಧ್ಯಾಪಕರಾದ ಡಾ. ಬಸವರಾಜ ಪೂಜಾರರವರ ‘ಮೌನದೊಳಗಿನ ಮಾತು’ ಎಂಬ ಕವನ ಸಂಕಲನಕ್ಕೆ ಗುಲಬರ್ಗಾ ವಿಶ್ವವಿದ್ಯಾಲಯದ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ಈ ಪ್ರಶಸ್ತಿಯು ಐದು ಸಾವಿರ ರೂಪಾಯಿ ನಗದು ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. ಡಾ. ಬಸವರಾಜ ಪೂಜಾರರವರು ‘ಕೊಪ್ಪಳ ಜಿಲ್ಲೆಯ ಕೋಮುಸೌಹಾರ್ಧತ ತಾಣಗಳು’ ಎಂಬ ವಿಷಯದ ಮೇಲೆ ಪಿಹೆಚ್.ಡಿ. ಸಂಶೋಧನೆ ಮಾಡಿದ್ದಾರೆ. ಜೊತೆಗೆ ‘ಕೊಪ್ಪಳ ಜಿಲ್ಲೆಯ ಜನಪದೀಯ ಔಷಧಿಗಳು’ ಎಂಬ ಸ್ವತಂತ್ರ ಕೃತಿಯನ್ನು ಪ್ರಕಟಿಸಿದ್ದಾರೆ. ಅಲ್ಲದೆ ತುಂಗಾಲಹರಿ, ಗೋರಂಟ್ಲಿ ಎಂಬ ಕೃತಿಗಳನ್ನು ಸಂಪಾದಿಸಿ ಪ್ರಕಟಿಸಿದ್ದಾರೆ. ಡಾ. ಬಸವರಾಜ ಪೂಜಾರರವರ ಈ ಪ್ರಶಸ್ತಿಗೆ ಸಾಹಿತ್ಯ ಬಳಗ, ಮಿತ್ರ ಬಳಗ ಮತ್ತು ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ.

Please follow and like us:
error