ಟಿಕ್ ಟಾಕ್  ಲವ್ ಸ್ಟೋರಿ : ನಕಲಿ ಎಂಎಲ್ ಎ ಮಗನಿಂದ ಯುವತಿಗೆ ಮೋಸ

Kannadanet NEWS, ಕೊಪ್ಪಳ : ತಾನು ಶಾಸಕನ ಪುತ್ರ ಎಂದು ಹೇಳಿಕೊಂಡು ಟಿಕ್ ಟಾಕ್ ನಲ್ಲಿ ಪರಿಚಯವಾದ ಯುವಕನೊಬ್ಬ ಯುವತಿಯನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾನೆ. ಅಷ್ಟಕ್ಕೆ ಸುಮ್ಮನಾಗದೆ ಆಕೆಯೊಂದಿಗೆ ಕಳೆದ ಖಾಸಗಿ ಕ್ಷಣಗಳ ಫೋಟೊ ಮತ್ತು ವಿಡಿಯೋ ತೋರಿಸಿ ಬ್ಲಾಕ್ ಮೇಲ್ ಮಾಡಿರುವ ಆರೋಪಿ ಜೈಲು ಪಾಲಾಗಿದ್ದಾನೆ.ಎಂಎಲ್​ಎ ಮಗ ಎಂದು ನಂಬಿಸಿ ಯುವತಿಯನ್ನು ಮರಳು ಮಾಡಿ, ಅವಳನ್ನು ಲೈಂಗಿಕವಾಗಿ ಬಳಸಿಕೊಂಡಿದ್ದ ಯುವಕನನ್ನು ಬಂಧಿಸಲಾಗಿದೆ.

ಯುವತಿಯೊಂದಿಗಿನ ಖಾಸಗಿ ಕ್ಷಣಗಳ ವಿಡಿಯೋ ಪಾಲಕರ ಮೊಬೈಲ್​ಗೆ ಹಾಕಿ, ಹಣ ಕೀಳಲು ಯತ್ನಿಸಿದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.

ಕಲಬುರಗಿ ಜಿಲ್ಲೆ ಚಿತ್ತಾಪೂರ ತಾಲೂಕಿನ ಬಾಗೋಡಿಯ  ಮಹ್ಮದ್ ಚಾಂದ್ ಪಾಷಾ ಅಲಿಯಾಸ್ ಚಂದು ಪಾಟೀಲ್ ಬಂಧಿತ ಯುವಕ. ಆರೋಪಿಯು ತಾನು ಶಾಸಕ ಅಭಯ ಪಾಟೀಲ್  ಮಗ, ಚಂದು ಪಾಟೀಲ್ ಎಂದು ಹೇಳಿಕೊಂಡು ಯುವತಿಯನ್ನು ಪರಿಚಯ ಮಾಡಿಕೊಂಡು, ಮದುವೆ ಆಗುವುದಾಗಿ ನಂಬಿಸಿದ್ದಾನೆ.  ಸಿಂಧನೂರು ಮೂಲದ ಯುವತಿ ತಾವರಗೇರಾ ಅಜ್ಜಿ ಮನೆಯಲ್ಲಿದ್ದಳು. ಯುವಕನೊಂದಿಗೆ ಟಿಕ್​ಟಾಕ್ ಮೂಲಕ ಪರಿಚಯವಾಗಿದ್ದಳು. ಈತ  ಪೀಡಿಸಿದ್ದಾನೆ.

ಯುವಕನ ಮಾತಿಗೆ ಮರುಳಾಗಿ ಕಳೆದ ಮಾರ್ಚ್​ನಲ್ಲಿ ಗೋವಾದಲ್ಲಿ ಬೀಚ್ ಸುತ್ತಾಡಿದ್ದು, ಆಕೆಯನ್ನು ಲೈಂಗಿಕವಾಗಿ ಸಹ ಬಳಸಿಕೊಂಡಿದ್ದಾನೆ. ಈ ಎಲ್ಲವನ್ನು ಫೋಟೋ, ವಿಡಿಯೋ ಮಾಡಿಕೊಂಡಿದ್ದ ಯುವಕ, ಯುವತಿಯ ಪಾಲಕರಿಗೆ ಕಳುಹಿಸಿ 9 ಲಕ್ಷ ರೂ. ಬೇಡಿಕೆ ಇಟ್ಟಿದ್ದಾನೆ.

ಈ ಹಿನ್ನೆಲೆಯಲ್ಲಿ ಯುವತಿ ಪಾಲಕರ ತಾವರಗೇರಾ ಪೊಲೀಸ್ ಠಾಣೆಗೆ ನೀಡಿದ ದೂರಿನ‌ ಮೇರೆಗೆ ಆರೋಪಿ  ನನ್ನು ವಶಕ್ಕೆ ತೆಗೆದುಕೊಂಡು ಕುಷ್ಟಗಿಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿ ಹೆಚ್ಚುವರಿ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿ ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ಕುಷ್ಟಗಿ ಸಿಪಿಐ ನಿಂಗಪ್ಪ ರುದ್ರಪ್ಪಗೋಳ ತಿಳಿಸಿದ್ದಾರೆ

Please follow and like us:
error