ಜ. 6ರವರೆಗೆ ಆನೆಕಾಲುರೋಗ ನಿವಾರಣೆಗೆ ಜಾಗೃತಿ ಕಾರ್ಯಕ್ರಮ : ಡಿಸಿ ಚಾಲನೆ


ಕೊಪ್ಪಳ,   ಕೊಪ್ಪಳ ಜಿಲ್ಲಾ ಆರೋಗ್ಯ ಮತ್ತ ಕುಟುಂಬ ಕಲ್ಯಾಣ ಇಲಾಖೆಯ ಆಶ್ರಯದಲ್ಲಿ ನಗರದ ಜಿಲ್ಲಾಡಳಿತ ಭವನದಲ್ಲಿ ನಡೆದ ಆನೆಕಾಲು ರೋಗದ ನಿವಾರಣೆಗಾಗಿ ಸಾಮೂಹಿಕ ಮಾತ್ರೆ ನುಂಗಿಸುವ ( focal MDA   ) ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಆನೆಕಾಲು ರೋಗದ ಮಾತ್ರೆ ಸೇವಿಸುವ ಮೂಲಕ ಸೋಮವಾರ(ಡಿ.28) ಚಾಲನೆ ನೀಡಿದರು.
ಬಳಿಕ ಮಾತನಾಡಿ, ರಾಷ್ಟಿçÃಯ ಆನೆಕಾಲು ರೋಗ ನಿವಾರಣಾ ಕಾರ್ಯಕ್ರಮದ ಅಡಿಯಲ್ಲಿ ಕೊಪ್ಪಳ ಜಿಲ್ಲೆಯ ವಿವಿಧ 13 ಗ್ರಾಮಗಳಲ್ಲಿ (ಕೊಪ್ಪಳ ತಾಲೂಕಿನ ಕಿನ್ನಾಳ, ಯಲಬುರ್ಗಾ ತಾಲುಕಿನ ಬಂಡಿಹಾಳ, ಗಂಗಾವತಿ ತಾಲೂಕಿನ ಆನೆಗುಂದಿ, ಹೊಸಕೇರ, ನವಲಿ & ಗಂಗಾವತಿ ಪಟ್ಟಣ, ಕುಷ್ಟಗಿ ತಾಲೂಕಿನ ತಾವರಗೇರಾ, ಹಿರೆಮನ್ನಾಪುರ, ಸಾಸ್ವಿಹಾಳ, ನೀರ್ಲಕೊಪ್ಪ, ಹನುಮಸಾಗರ, ಹೂಲಗೇರ ಹಾಗೂ ಕುಷ್ಟಗಿ ಪಟ್ಟಣಗಳಲ್ಲಿ ಆನೆಕಾಲು ರೋಗದ ನಿವಾರಣೆಗೆ “ಸಾಮೂಹಿಕ ಮಾತ್ರೆ ನುಂಗಿಸುವ” ( focal MDA  ) ಕಾರ್ಯವನ್ನು ಇಂದಿನಿAದ (ಡಿ.28) 2021ರ ಜನವರಿ. 06 ರವರೆಗೆ ಹಮ್ಮಿಕೊಳ್ಳಲಾಗಿದ್ದು, ಸಾರ್ವಜನಿಕ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಆರೋಗ್ಯ ಇಲಾಖೆಯವರು (ಆಶಾ/ಆರೋಗ್ಯ ಸಹಾಯಕರು) ಮನೆ ಮನೆಗೆ ಬಂದು ಉಚಿತವಾಗಿ ನೀಡುವ ಡಿ.ಇ.ಸಿ & ಆಲ್ಬೆಂಡಜೊಲ್  (Albendazole    ) ಮಾತ್ರೆಗಳನ್ನು ತಪ್ಪದೇ ಸೇವಿಸಿ ಆನೆಕಾಲು ರೋಗದಿಂದ ಮುಕ್ತರಾಗಲು ಜನ ಸಮುದಾಯಕ್ಕೆ ಕರೆ ನೀಡಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಘುನಂದನ್‌ಮೂರ್ತಿ ಸ್ವತಃ ಮಾತ್ರೆಗಳನ್ನು ಸೇವಿಸಿ ಮಾತನಾಡಿ, ಆನೆಕಾಲು ರೋಗದ ಸಾಮೂಹಿಕ ಮಾತ್ರೆ ನುಂಗಿಸುವ ಕಾರ್ಯಕ್ರಮಕ್ಕೆ ಜನಸಮುದಾಯವೂ ಕೂಡಾ ಸಹಕಾರ ನೀಡಿಬೇಕು. ಮಾತ್ರೆಗಳನ್ನು ಕಡ್ಡಾಯವಾಗಿ ಸೇವಿಸಿ ಆನೆಕಾಲು ರೋಗದಿಂದ ಮುಕ್ತರಾಗಬೇಕು ಎಂದು ಮನವಿ ಮಾಡಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಲಿಂಗರಾಜು. ಟಿ. ಅವರು ಮಾತನಾಡಿ, ಆರೋಗ್ಯ ಇಲಾಖೆಯವರು ನೀಡುವ ಆನೆಕಾಲು ರೋಗ ನಿವಾರಕ ಮಾತ್ರೆಗಳು ಅತ್ಯಂತ ಸುರಕ್ಷಿತವಾಗಿದ್ದು ಯಾವುದೇ ತೀವೃತರನಾದ ಅಡ್ಡ ಪರಿಣಾಮಗಳು ಇರುವುದಿಲ್ಲ. ಸದರಿ ಮಾತ್ರೆಗಳನ್ನು ಆ ಗ್ರಾಮಗಳಲ್ಲಿರುವ ಪ್ರತಿಯೊಬ್ಬರು (ಎರಡು ವರ್ಷದೊಳಗಿನ ಮಕ್ಕಳು, ಗರ್ಬಿಣಿ ಸ್ತಿçÃಯರು ಹಾಗೂ ತೀವೃತರನಾದ ರೋಗಗಳಿಂದ ಬಳಲುವ ವ್ಯಕ್ತಿಗಳನ್ನು ಹೊರತುಪಡಿಸಿ) ಎಲ್ಲರೂ ಸೇವಿಸಿ ಆನೆಕಾಲು ರೋಗದಿಂದ ಪಾರಾಗಲು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡರು.  ಹಾಗೂ ಆನೆಕಾಲು ರೋಗದ ಲಕ್ಷಣಗಳು, ಜನ ರೋಗ ಪೀಡಿತರಾದರೇ ಅನುಭವಿಸುವ ತೊಂದರೆಗಳು ಹಾಗೂ ಚಿಕಿತ್ಸೆ ಮತ್ತು ನಿಯಂತ್ರಣ ಕ್ರಮಗಳ ಬಗ್ಗೆ ವಿವರಿಸಿದರು.
ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿ ಡಾ. ಬಿ.ಜಂಬಯ್ಯ ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆ ಮಾತನಾಡಿ, ಕಾರ್ಯಕ್ರಮ ಹಮ್ಮಿಕೊಳ್ಳಲಾದ 13 ಗ್ರಾಮಗಳ ಒಟ್ಟು 2,07,154 ಜನಸಂಖ್ಯೆಯಲ್ಲಿ ಅರ್ಹ 1,90,582 ಜನರಿಗೆ ಮಾತ್ರೆ ನುಂಗಿಸುವ ಗುರಿಯನ್ನು ಹೊಂದಿದ್ದು, ಎಲ್ಲಾ ಅರ್ಹ ಫಲಾನುಭವಿಗಳು ಮಾತ್ರೆಗಳನ್ನು ಕಡ್ಡಾಯವಾಗಿ ಸೇವಿಸಲು ಕೋರಿದರು.
ಆನೆಕಾಲು ರೋಗ ಒಂದು ಭಯಂಕರ ರೋಗವಾಗಿದ್ದು, ಒಮ್ಮೆ ಈ ರೋಗದಿಂದ ಪೀಡಿತರಾದರೇ  ಈ ರೋಗವನ್ನು ವಾಸಿಮಾಡಲು ಸಾಧ್ಯವಿಲ್ಲ. ಸಾಮೂಹಿಕ ಮಾತ್ರೆ ನುಂಗಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವ ಕೊಪ್ಪಳ ಜಿಲ್ಲೆಯ ಆಯ್ದ 13  ಗ್ರಾಮಗಳಲ್ಲಿ ವಾಸಿಸುವ ವ್ಯಕ್ತಿಗಳು ಮೇಲ್ನೋಟಕ್ಕೆ ಆರೋಗ್ಯವಂತರಾಗಿ ಕಂಡರೂ ಸಹ ಅವರುಗಳ ದೇಹದಲ್ಲಿ ಈ ರೋಗವನ್ನು ಉಂಟುಮಾಡುವ ರೋಗಾಣುಗಳು ಇರುವ ಸಾಧ್ಯತೆ ಅಧಿಕವಾಗಿರುತ್ತದೆ. ಆನೆಕಾಲು ರೋಗವು ಕ್ಯುಲೆಕ್ಸ್ ಜಾತಿಯ ಸೋಂಕಿತ ಸೊಳ್ಳೆಯ ಕಚ್ಚುವಿಕೆಯಿಂದ ಹರಡುತ್ತದೆ. ಸೋಂಕಿತ ಸೊಳ್ಳೆ ಕಚ್ಚಿದ 6 ರಿಂದ 8 ವರ್ಷಗಳ ನಂತರ ಕಾಲುಗಳು, ಕೈಗಳು, ವೃಷಣಗಳು ಅಥವಾ ಸ್ತನಗಳು ದಪ್ಪವಾಗುವುದರ ಮೂಲಕ ಲಕ್ಷಣಗಳು ಕಾಣಿಸಿಕೊಳ್ಳುವುದರಿಂದ ರೋಗವನ್ನು ಶೀಘ್ರವಾಗಿ ಪತ್ತೆ ಹಚ್ಚಲು ಸಾ ದ್ಯವಾಗುವುದಿಲ್ಲ. ಕಾರಣ 13 ಗ್ರಾಮಗಳಲ್ಲಿರುವ ಎಲ್ಲಾ ಸಾರ್ವಜನಿಕರು ಆರೋಗ್ಯ ಇಲಾಖೆಯವರು ನೀಡುವ ಮಾತ್ರೆಗಳನ್ನು ಕಡ್ಡಾಯವಾಗಿ ಸೇವಿಸಿ ಅನೆಕಾಲು ರೋಗ ಮುಕ್ತ ಸಮಾಜವನ್ನು ನಿರ್ಮಿಸುವಲ್ಲಿ ಸಹಕರಿಸಬೇಕು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ರವೀಂದ್ರ, ಜಿಲ್ಲಾ ಕುಷ್ಟರೋಗ ನಿರ್ಮೂಲನಾ ಅಧಿಕಾರಿ ಇರ್ಪಾನ್ ಬೇಗಂ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ, ಜಿಲ್ಲಾ ವಿ.ಬಿ.ಡಿ ಸಲಹೆಗಾರ ಕೆ. ರಮೇಶ್, ವಲಯ ಕೀಟಶಾಸ್ತç ಸಲಹೆಗಾರ ಜೆತುಲಾಲ್ ಪವಾರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಿಬ್ಬಂದಿ ಇದ್ದರು.
(ಫೋಟೋ ಕಳುಹಿಸಿದೆ)

Please follow and like us:
error