ಜ. 19 ರಂದು “ಒಂದೇ ಭಾರತ ಒಂದೇ ತುರ್ತು ಕರೆ ಸಂಖ್ಯೆ ಲೋಕಾರ್ಪಣೆ : ಎಸ್.ಪಿ ಟಿ.ಶ್ರೀಧರ

ಕೊಪ್ಪಳ ಜಿಲ್ಲೆಗೆ ಬಂದಾಗಿನಿಂದಲೂ ಟ್ರಾಪಿಕ್ ವ್ಯವಸ್ಥೆ ಕುರಿತು ಸಾಕಷ್ಟು ಆಸಕ್ತಿ ವಹಿಸಿ ಕೆಲಸ ಮಾಡುತ್ತಿರುವ ಎಸ್ಪಿ ಟಿ.ಶ‍್ರೀಧರ  ಮತ್ತೊಂದು ಜನಮುಖಿ ಕಾರ್ಯಕ್ಕೆ ಕೈ ಹಾಕಿದ್ಧಾರೆ.

ಕೊಪ್ಪಳ.: ಕೊಪ್ಪಳ ಜಿಲ್ಲಾ ಪೊಲೀಸ್ ವತಿಯಿಂದ “ಒಂದೇ ಭಾರತ ಒಂದೇ ತುರ್ತು ಕರೆ ಸಂಖ್ಯೆ 112” ಜ. 19 ರಂದು ಲೋಕಾರ್ಪಣೆಗೊಳ್ಳಲಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಶ್ರೀಧರ್ ಅವರು ತಿಳಿಸಿದ್ದಾರೆ.
ಕೊಪ್ಪಳ ಜಿಲ್ಲೆಯಲ್ಲಿ ಒಂದೇ ಭಾರತ ಒಂದೇ ತುರ್ತು ಕರೆ ಸಂಖ್ಯೆ 112 ತುರ್ತು ಸ್ಪಂದನಾ ಸಹಾಯ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ. ಸಾರ್ವಜನಿಕರು, ಮಹಿಳೆಯರು, ನೊಂದವರು, ಹಿರಿಯ ನಾಗರಿಕರು ತಮ್ಮ ತುರ್ತು ಸಂದರ್ಭದಲ್ಲಿ 112 ಸಂಖ್ಯೆಗೆ ಕರೆ ಮಾಡಿ ಸಹಾಯ ಪಡೆಯಬಹುದಾಗಿದೆ.

ತುರ್ತು ಕರೆ ಬಳಕೆ ವಿಧಾನ;
ತುರ್ತು ಕರೆ ಸಂಖ್ಯೆ 112 ನ್ನು ಬಳಕೆ ಮಾಡುವ ವಿಧಾನ ಇಂತಿದೆ. ಯಾವುದೇ ಮೊಬೈಲ್ ಫೋನ್ ಅಥವಾ ಸ್ಥಿರ ದೂರವಾಣಿಯಿಂದ 112 ಸಂಖ್ಯೆಗೆ ಕರೆ ಮಡುವುದರ ಮೂಲಕ, 112 ಸಂಖ್ಯೆಗೆ ಸಂದೇಶ (ಎಸ್.ಎಮ್.ಎಸ್) ರವಾನಿಸುವುದು, 112 ವೆಬ್ ಪೋರ್ಟ್ ಲ್ ( www.ka.ners.in ) ಮೂಲಕ ಸಹಾಯ ಕೋರಬಹುದು, ಮೊಬೈಲ್ ಫೋನ್‌ನಲ್ಲಿ 112 ಇಂಡಿಯಾ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ಎಸ್.ಓ.ಎಸ್ ( SOS) ಸೇವೆ ಬಳಕೆ ಮಾಡುವುದರ ಮೂಲಕ ಹಾಗೂ ಇ-ಮೇಲ್ ಐಡಿ ers

s112ktk@ksp.gov.in ಗೆ ಸಂದೇಶ ಕಳುಹಿಸುವುದರ ಮೂಲಕ ಸಹಾಯ ಪಡೆಯಬಹುದಾಗಿದೆ.
Emergency Response Support System (ERSS-112) ಕರ್ತವ್ಯಕ್ಕೆ ಒಟ್ಟ್ಟು 7 ತುರ್ತು ಸ್ಪಂದನಾ ವಾಹನಗಳನ್ನು ನಿಯೋಜಿಸಲಾಗಿದ್ದು, ಪ್ರತಿ ವಾಹನದಲ್ಲಿ 3 ಜನ ಅಧಿಕಾರಿ/ ಸಿಬ್ಬಂದಿಯವರು (24*7) ಕರ್ತವ್ಯ ನಿರ್ವಹಿಸುವರು. ಸಾರ್ವಜನಿಕರು ತುರ್ತು ಸಂದರ್ಭದಲ್ಲಿ 112 ಸಂಖ್ಯೆಗೆ ಕರೆ ಮಾಡಿ ಸಹಾಯ ಪಡೆದುಕೊಳ್ಳಲು  ತಿಳಿಸಿದ್ದಾರೆ.

Please follow and like us:
error