ಜ.೧೬ ರಂದು ಕೊಪ್ಪಳ ಜಿಲ್ಲೆ ಗ್ಯಾಸೆಟಿಯರ್ ಸಲಹಾ ಸಮಿತಿ ಸಭೆ


ಕೊಪ್ಪಳ : ಕೊಪ್ಪಳ ಜಿಲ್ಲೆಯ ಕುಷ್ಟಗಿ, ಯಲಬುರ್ಗಾ, ಕೊಪ್ಪಳ ಮತ್ತು ಗಂಗಾವತಿ ತಾಲ್ಲೂಕು ಗ್ಯಾಸೆಟಿಯರ್‌ಗಳ ಸಲಹಾ ಸಮಿತಿ ಸಭೆಯನ್ನು ಸ್ಥಳೀಯ ಉಪವಿಭಾಗಾಧಿಕಾರಿಗಳ ಕಚೇರಿ ನ್ಯಾಯಾಲಯ ಸಭಾಂಗಣದಲ್ಲಿ ಜ.೧೬ ರಂದು ಬೆ.೧೧ ಗಂಟೆಗೆ ಏರ್ಪಡಿಸಲಾಗಿದೆ. ಸಭೆಯ ಅಧ್ಯಕ್ಷತೆಯನ್ನು ಸರ್ಕಾರದ ಕಾರ್ಯದರ್ಶಿಗಳು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಇವರು ವಹಿಸಲಿದ್ದಾರೆ.
ಗಂಗಾವತಿ ತಾಲೂಕು ಗ್ಯಾಸೆಟಿಯರ್ ಕರಡು ಪ್ರತಿಯನ್ನು ಡಾ.ಶರಣಬಸಪ್ಪ ಕೋಲ್ಕಾರ್, ಕೊಪ್ಪಳ. ಡಾ.ಸಿದ್ಲಿಂಗಪ್ಪ ಕೊಟ್ನೇಕಲ್, ಕುಷ್ಟಗಿ ಮತ್ತು ಯಲಬುರ್ಗಾ ತಾಲೂಕುಗಳ ಕರಡು ಪ್ರತಿಯನ್ನು ಡಾ. ರವಿ ಚವ್ಹಾಣ ಅವರುಗಳು ತಯಾರಿಸಲು ಗ್ಯಾಸೆಟಿಯರ್ ಇಲಾಖೆ ಅನುಮೊದನೆ ನೀಡಿತ್ತು.
ಜಿಲ್ಲೆಯ ತಾಲೂಕು ಗ್ಯಾಸೆಟಿಯರ್‌ಗಳ ಪರಿಶೀಲನೆಗಾಗಿ ಪ್ರೊ.ಅಲ್ಲಮಪ್ರಭು ಬೆಟ್ಟದೂರು, ಬಸವರಾಜ ಆಕಳವಾಡಿ, ಡಾ.ಕೆ.ಬಿ.ಬ್ಯಾಳಿ ಹಾಗೂ ಗಂಗಾವತಿಯ ಪ್ರೊ.ಬಿ.ಸಿ.ಐಗೋಳ ಇವರನ್ನು ಪರಿಶೀಲನಾ ಸಮಿತಿಯ ಸದಸ್ಯರನ್ನಾಗಿ ಸರಕಾರ ನೆಮಕ ಮಾಡಿದೆ. ಗ್ಯಾಸಟಿಯರ್ ಸಲಹಾ ಸಮಿತಿಯ ಸದಸ್ಯರು ಸದರಿ ಸಭೆಯಲ್ಲಿ ಪಾಲ್ಗೊಂಡು ತಮ್ಮ ಅಮೂಲ್ಯ ಸಲಹೆ ಸೂಚನೆಗಳನ್ನು ನೀಡುವುದರ ಮೂಲಕ ನಾಲ್ಕೂ ತಾಲ್ಲೂಕುಗಳ ಗ್ಯಾಸೆಟಿಯರ್‌ಗಳು ಸಮಗ್ರವಾಗಿ ಪ್ರಕಟಗೊಳ್ಳಲು ಸಹಕರಿಸಬೇಕೆಂದು ಕರ್ನಾಟಕ ಗ್ಯಾಸೆಟಿಯರ್ ಇಲಾಖೆಯ ಮುಖ್ಯ ಸಂಪಾದಕ ಬೆಟ್ಟೇಗೌಡ  ತಿಳಿಸಿದ್ದಾರೆ.

Please follow and like us:
error