ಜ್ಯುನಿಯರ್ ಲೈನ್‌ಮೆನ್/ಸ್ಟೇಷನ್‌ಅಟೆಂಡೆಂಟ್ ಹುದ್ದೆ : ಐಟಿಐ ಮತ್ತು ಐಟಿಸಿ ಪರಿಗಣಿಸುವಂತೆ ಒತ್ತಾಯಿಸಿ ಪ್ರತಿಭಟನೆ

ರಾಜ್ಯದ ವಿವಿಧ ವಿದ್ಯುತ್ ನಿಗಮಗಳಲ್ಲಿ ಜ್ಯುನಿಯರ್ ಲೈನ್‌ಮೆನ್/ಸ್ಟೇಷನ್‌ಅಟೆಂಡೆಂಟ್ ಹುದ್ದೆಗಳಿಗೆ ನೇಮಕ ಮಾಡುವಾಗ ವಿದ್ಯಾರ್ಹತೆ ಎಸ್‌ಎಸ್‌ಎಲ್‌ಸಿ ಬದಲು ಐಟಿಐ ಮತ್ತು ಐಟಿಸಿ ಪರಿಗಣಿಸುವಂತೆ ಒತ್ತಾಯಿಸಿ ಪ್ರತಿಭಟನೆ

ರಾಜ್ಯದಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ಐಟಿಐ ಕೋರ್ಸ್ ಮುಗಿಸಿ ಉದ್ಯೋಗದ ಹುಡುಕಾಟದಲ್ಲಿದ್ದಾರೆ. ೬೦ ರಿಂದ ೮೦ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಐಟಿಐ ನಂತರ ಇಂಡಸ್ಟ್ರಿಯಲ್ ಟ್ರೈನಿಂಗ್ ಸೆಂಟರ್‌ಗಳಿಂದಲೂ ಕೌಶಲ್ಯ ತರಭೇತಿ ಪಡೆದಿದ್ದು ಉದ್ಯೋಗದ ನಿರೀಕ್ಷೆಯಲ್ಲಿದ್ದಾರೆ. ಇಂತಹ ಸಮಯದಲ್ಲಿ ಸರ್ಕಾರವು ರಾಜ್ಯದ ವಿವಿಧ ವಿದ್ಯುತ್ ನಿಗಮಗಳಲ್ಲಿ ಜ್ಯುನಿಯರ್ ಲೈನ್‌ಮೆನ್/ಸ್ಟೇಷನ್, ಅಟೆಂಡೆಂಟ್ ಹುದ್ದೆಗಳಿಗೆ ಅರ್ಜಿಕರೆದಿದ್ದು, ವಿದ್ಯಾರ್ಹತೆಯನ್ನು ಎಸ್‌ಎಸ್‌ಎಲ್‌ಸಿ ಎಂದು ನಿಗಧಿ ಮಾಡಿದೆ. ಎರಡು ವರ್ಷಗಳ ಹಿಂದೆ ಇದೇ ಹುದ್ದೆಗಳಿಗೆ ಅರ್ಜಿ ಕರೆದಿದ್ದಾಗ ವಿದ್ಯಾರ್ಹತೆಯನ್ನು ಎಸ್‌ಎಸ್‌ಎಲ್‌ಸಿ ಬದಲು ಐಟಿಐ ಮತ್ತು ಐಟಿಸಿ ಎಂದು ನಿಗಧಿ ಮಾಡಿತ್ತು. ಆಗ ಕೌಶಲ್ಯ ಪಡೆದ ಅರ್ಹರಿಗೆ ಉದ್ಯೋಗ ಲಭಿಸುತ್ತಿತ್ತು. ಆದರೆ ಈಗ ಕೇವಲ ೨,೦೦೦ ಹುದ್ದೆಗಳಿಗೆ ಲಕ್ಷಾಂತರ ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಮಾಡಿದವರೂ ಸಹ ಅರ್ಜಿ ಸಲ್ಲಿಸುತ್ತಿದ್ದು ತೀವ್ರ ಪೈಪೋಟಿಯಿಂದಾಗಿ ನಮಗೆ ಉದ್ಯೋಗ ಸಿಗುವುದು ಮರೀಚಿಕೆಯಂತಾಗಿದೆ, ಹಾಗಾಗಿ ಈ ಅನ್ಯಾಯವನ್ನು ನಾವು ಬಲವಾಗಿ ಖಂಡಿಸುತ್ತೇವೆ ಮತ್ತು ವಿದ್ಯಾರ್ಹತೆ ಎಸ್‌ಎಸ್‌ಎಲ್‌ಸಿ ಬದಲು ಐಟಿಐ ಮತ್ತು ಐಟಿಸಿ ಪರಿಗಣಿಸುವಂತೆ ಒತ್ತಾಯಿಸುತ್ತೇವೆ.
ಜ್ಯುನಿಯರ್ ಲೈನ್‌ಮೆನ್/ಸ್ಟೇಷನ್ ಅಟೆಂಡೆಂಟ್ ಹುದ್ದೆಗಳು ಬಹಳ ಅಪಾಯಕಾರಿಯಾದ ಸೂಕ್ಷ್ಮ ಹುದ್ದೆಗಳಾಗಿವೆ. ಇಂತಹ ಹುದ್ದೆಗಳಿಗೆ ಏನೂ ತರಬೇತಿ ಇಲ್ಲದ ಎಸ್‌ಎಸಎಲ್‌ಸಿ ವಿದ್ಯಾರ್ಥಿಗಳನ್ನೂ ಆಯ್ಕೆ ಮಾಡುವುದರಿಂದ ಅವರಿಗೆ ಪ್ರಾಣಾಪಾಯವಾಗಿದೆ. ಇದನ್ನು ಸರ್ಕಾರ ಅರ್ಥ ಮಾಡಿಕೊಳ್ಳಬೇಕು. ಜೊತೆಗೆ ಐಟಿಐ ಮತ್ತು ಐಟಿಸಿ ಮುಗಿಸಿ ಮತ್ತು ಅಗಾಧ ಕೌಶಲ್ಯ ಹೊಂದಿರುವ ವಿದ್ಯಾರ್ಥಿಗಳಿಗೆ ಮೋಸ ಮಾಡದಂತೆ ಹೆಚ್ಚಿನ ಸಂಖ್ಯೆಯ ಕಾಯಂ ಹುದ್ದೆಗಳನ್ನು ತುಂಬಿಕೊಳ್ಳಬೇಕೆಂದು ಆಗ್ರಹಿಸುತ್ತೇವೆ. ಅಭ್ಯರ್ಥಿಗಳ ನೇಮಕಾತಿಯ ಸಂದರ್ಭದಲ್ಲಿಯೂ ಕೂಡ ಯಾವುದೇ ತಾರತಮ್ಮೆವಿಲ್ಲದೆ ನೇರ ನೇಮಕಾತಿ ಮಾಡಿಕೊಳ್ಳಬೇಕೆಂದು ಒತ್ತಾಯಿಸುತ್ತೇವೆ.

ನಮ್ಮ ಹಕ್ಕೊತ್ತಾಯಗಳು
೧. ರಾಜ್ಯದ ವಿವಿಧ ವಿದ್ಯುತ್ ನಿಗಮಗಳಲ್ಲಿ ಜ್ಯುನಿಯರ್ ಲೈನ್‌ಮೆನ್/ಸ್ಟೇಷನ್‌ಅಟೆಂಡೆಂಟ್ ಹುದ್ದೆಗಳಿಗೆ ನೇಮಕ ಮಾಡುವಾಗ ವಿದ್ಯಾರ್ಹತೆ ಎಸ್‌ಎಸ್‌ಎಲ್‌ಸಿ ಬದಲು ಐಟಿಐ ಮತ್ತು ಐಟಿಸಿ ಪರಿಗಣಿಸಬೇಕು. ಈಗ ಇರುವ ಎಸ್‌ಎಸ್‌ಎಲ್‌ಸಿ ವಿದ್ಯಾರ್ಹತೆ ಪದ್ಧತಿಯನ್ನು ರದ್ದು ಮಾಡಬೇಕು.
೨. ಹೆಚ್ಚಿನ ಸಂಖ್ಯೆಯ ಕಾಯಂ ಹುದ್ದೆಗಳನ್ನು ಭರ್ತಿ ಮಾಡಬೇಕು. ಯಾವುದೇ ಕಾರಣಕ್ಕೂ ಆಧುನಿಕ ಜೀತಪದ್ಧತಿಯಾದ ಗುತ್ತಿಗೆ ಆಧಾರದಲ್ಲಿ ನೇಮಕಾತಿ ಮಾಡಿಕೊಳ್ಳಬಾರದು.
೩. ರಾಜ್ಯದಲ್ಲಿ ವಿವಿಧ ವಿದ್ಯುತ್ ನಿಗಮಗಳಲ್ಲಿ ಮತ್ತು ಕಾರ್ಖಾನೆಗಳಲ್ಲಿ / ಕಂಪನಿಗಳಲ್ಲಿ ಕೆಲಸ ಮಾಡಲು ಸಾಕಾಗುವಷ್ಟು ಅಭ್ಯರ್ಥಿಗಳಿದ್ದಾರೆ. ಹಾಗಾಗಿ ರಾಜ್ಯದ ಎಲ್ಲಾ ಐಟಿಐ ಮತ್ತು ಐಟಿಸಿ ಕಾಲೇಜುಗಳನ್ನು ಮುಚ್ಚಬೇಕು. ಇದರಿಂದ ಸುಮ್ಮನೇ ೨-೩ ವರ್ಷ ವ್ಯರ್ಥವಾಗಿ ತರಬೇತಿ ಪಡೆದು ಭಾರಿ ನಿರುದ್ಯೋಗಿಗಳಾಗುವುದನ್ನು ತಡೆಗಟ್ಟಬಹುದು.
೪. ಕಲಂ ೩೭೧ (ಜೆ) ಅಡಿಯಲ್ಲಿ ಬರುವ ಹೈದ್ರಾಬಾದ ಕರ್ನಾಟಕ ಪ್ರದೇಶದಲ್ಲಿ ಹೆಚ್ಚು ಹೆಚ್ಚು ಕಾರ್ಖಾನೆಗಳನ್ನು ಸ್ಥಾಪಿಸಿ ಈ ಭಾಗದ ನಿರೋದ್ಯಗವನ್ನು ನಿವಾರಣೆ ಮಾಡಬೇಕು.
೫. ಎಲ್ಲಾ ಐ.ಟಿ.ಐ ವಿದ್ಯಾರ್ಥಿಗಳಿಗೆ ಬೆಸಿಗೆ ರಜೆ ಕೊಡಬೇಕು.
೬. ಎಲ್ಲಾ ಐ.ಟಿ.ಐ ವಿದ್ಯಾರ್ಥಿಗಳಿಗಾಗಿ ವೃತ್ತಿಪರ ವಸತಿನಿಲಯಗಳನ್ನು ಪ್ರಾರಂಭಿಸಬೇಕು.
ಇಷ್ಟು ಹಕ್ಕೊತ್ತಾಯಗಳನ್ನು ಸರ್ಕಾರ ಕೂಡಲೇ ಈಡೇರಿಸಬೇಕೆಂದು ಒತ್ತಾಯಿಸುತ್ತೇವೆ. ಇಲ್ಲದಿದ್ದಲ್ಲಿ ಅನಿವಾರ್ಯವಾಗಿ ತೀವ್ರರೀತಿಯ ಪ್ರತಿಭಟನೆ ನಡೆಸುತೇವೆಂದು ಈ ಮೂಲಕ ತಿಳಿಸುತ್ತಿದ್ದೇವೆ.

ಐಟಿಐ ಮತ್ತು ಐಟಿಸಿ ವಿದ್ಯಾರ್ಥಿಗಳ ಸಮಸ್ಯಗಳ ಕುರಿತು ಕೊಪ್ಪಳ ಬಸವೇಶ್ವರ ವೃತ್ತದಿಂದ ಡಿಸಿ ಕಛೇರಿ ವರಿಗೆ ಪ್ರತಿಭಟನೆ ಮೆರವಣಿ ನಡೆಸಲಾಯಿತು.
ಈ ಪ್ರತಿಭಟನೆಯಲ್ಲಿ ನೊರಾರು ವಿದ್ಯಾರ್ಥಿಗಳು ಭಾಗವಹಿಸಿದರು.ಮುಖ್ಯಮಂತ್ರಿಗಳಿಗೆ ಜಿಲ್ಲಾಧಿಕಾರಿಗಳ ಮುಖಾಂತರ ಮನವಿ ಸಲ್ಲಿಸಲಾಯಿತು. ಈ ಪ್ರತಿಭಟನೆಯಲ್ಲಿ ನೊರಾರು ವಿದ್ಯಾರ್ಥಿಗಳು ಭಾಗವಹಿಸಿದರು. ಸಂತೋಷ ಎಚ್ ಎಂ ,ಗುರುಬಸವ, ರಾಜಶೇಖರ್, ಸಲೀಂ,ಸಂತೋಷ ಕುಮಾರ್
ಇಸ್ಮಲ್,ಅರುಣ್ ಕುಮಾರ್

Please follow and like us:
error