ಜ್ಞಾನ ಬಂಧು ಹಿರಿಯ ಪ್ರಾಥಮಿಕ ಶಾಲೆಗೆ ಸಿ.ಬಿ.ಎಸ್.ಇ. ಮಾನ್ಯತೆ

Kannadanet ಭಾಗ್ಯನಗರ ಪಟ್ಟಣದಲ್ಲಿಯ ಜ್ಞಾನ ಬಂಧು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಂಸ್ಥೆಯಅಧ್ಯಕ್ಷರು ಹಾಗೂ ಶಿಕ್ಷಕವೃಂದ ಶಾಲೆಗೆಸಿ.ಬಿ.ಎಸ್.ಇ. ಮಾನ್ಯತೆ ಪಡೆದ ನಿಮಿತ್ಯ ಸಿಹಿ ಹಂಚಿ ಸಂಭ್ರಮಿಸಿದರು.

ಈ ಸಂದರ್ಭದಲ್ಲಿ ಸಂಸ್ಥೆಯಅಧ್ಯಕ್ಷರಾದದಾನಪ್ಪ. ಜಿ. ಕವಲೂರು ಮಾತನಾಡಿಸತತ ೩ ವರ್ಷದ ಫಲವಾಗಿ ನಮ್ಮ ಶಾಲೆಗೆ ಸಿ.ಬಿ.ಎಸ್.ಇ. ಮಾನ್ಯತೆ ಸಿಕ್ಕಿರುವುದು ನಮ್ಮ ಆಡಳಿತ ಮಂಡಳಿ, ಶಿಕ್ಷಕವೃಂದ ಹಾಗೂ ಪಾಲಕರಲ್ಲಿಅತ್ಯಂತ ಸಂತೋಷದ ವಿಷಯವಾಗಿರುತ್ತದೆ. ಈ ಯಶಸ್ವಿಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳನ್ನು ಹೇಳುತ್ತೇನೆ ಮಾನ್ಯತೆ ಪಡೆದ ನಂತರ ನಮ್ಮ ಶಾಲೆಯನ್ನು ಶೈಕ್ಷಣಿಕವಾಗಿಉತ್ತಮ ಪಡಿಸುವಲ್ಲಿ ನಮ್ಮ ನಿಮ್ಮೆಲ್ಲರಜವಬ್ದಾರಿ ಹೆಚ್ಚಿರುತ್ತದೆ ಆ ನಿಟ್ಟಿನಲ್ಲಿ ಸಿ.ಬಿ.ಎಸ್.ಇ. ಮಾನ್ಯತಾ ನಿಯಮಗಳ ಅಡಿಯಲ್ಲಿ ನಾವೆಲ್ಲರೂ ಪ್ರಾಮಾಣಿಕವಾಗಿ ಕೆಲಸ ಮಾಡಬೇಕಾಗಿದೆಜೊತೆಗೆತಾವೆಲ್ಲರುಶಾಲಾ ಅಭಿವೃದ್ದಿಗಾಗಿಸಹಕಾರವನ್ನು ನೀಡಬೇಕೆಂದು ಹೇಳಿದರು.

ಈ ಸಂದರ್ಭದಲ್ಲಿ ಶಾಲೆಯ ಪ್ರಾಂಶುಪಾಲರು, ಮುಖ್ಯೋಪಾಧ್ಯಾರು, ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿ ಉಪಸ್ಥಿತರಿದ್ದರು.

Please follow and like us:
error