ಜಿಲ್ಲೆಯ 8 ಜನ ಪೊಲೀಸರಿಗೆ , ಈಶಾನ್ಯ ಸಾರಿಗೆಯ ಕೊಪ್ಪಳ ವಿಭಾಗದಲ್ಲಿ 10 ಜನರಿಗೆ ಪಾಸಿಟಿವ್!

Kannadanet NEWS  ಕೊಪ್ಪಳ: ಕೋವಿಡ್-19ನ ಎರಡನೇ ಅಲೆ ವ್ಯಾಪಕವಾಗುತ್ತಿದ್ದು, ಕೊಪ್ಪಳ ಜಿಲ್ಲೆಯ 8 ಜನ ಪೊಲೀಸರಿಗೂ ವಕ್ಕರಿಸಿದೆ.

ಈ ಕುರಿತು ಮಾಹಿತಿ ನೀಡಿದ ಎಸ್‌ಪಿ ಟಿ.ಶ್ರೀಧರ್, ಜಿಲ್ಲೆಯ ಸುಮಾರು 1100 ಪೊಲೀಸರಿಗೆ ವ್ಯಾಕ್ಸಿನ್ ಹಾಕಿಸಲಾಗಿದ್ದು, ಕೋವಿಡ್-19 ಪರೀಕ್ಷೆ ಸಹ ಮಾಡಲಾಗಿದೆ. 8 ಜನ ಪೊಲೀಸರಲ್ಲಿ ಕೊರೊನಾ ಪಾಸಿಟಿವ್ ಪತ್ತೆಯಾಗಿದ್ದು, ಅವರನ್ನು ಐಸೋಲೇಷನ್‌ನಲ್ಲಿ ಇಡಲಾಗಿದೆ. ಕುಕನೂರಿನ 5, ಕೊಪ್ಪಳ ಡಿಆರ್‌ನ ಇಬ್ಬರು ಹಾಗೂ ಗಂಗಾವತಿ ನಗರ ಠಾಣೆಯ ಒಬ್ಬ ಪೊಲೀಸರಿಗೆ ಕೊರೊನಾ ಪಾಸಿಟಿವ್ ಆಗಿದ್ದು, ಸೋಮವಾರವೇ ಠಾಣೆಗಳನ್ನು ಸ್ಯಾನಿಟೈಜ್ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಈಶಾನ್ಯ ಸಾರಿಗೆಯ ಕೊಪ್ಪಳ ವಿಭಾಗದಲ್ಲಿ 10 ಜನರಿಗೆ ಪಾಸಿಟಿವ್!

ಕೊರೊನಾ ಹೆಮ್ಮಾರಿ ಎಲ್ಲೆಡೆ ಕಬಂಧಬಾಹು ಚಾಚುತ್ತಲಿದೆ. ದುಡಿಮೆಗಾಗಿ ಹೊರಗೆ ಸಂಚರಿಸುವ ಬಹುತೇಕರನ್ನು ಕೋವಿಡ್-19 ಬಿಡುತ್ತಿಲ್ಲ. ಈಶಾನ್ಯ ಸಾರಿಗೆಯ ಕೊಪ್ಪಳ ವಿಭಾಗದಲ್ಲಿ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ 10 ಜನರಿಗೆ ಸದ್ಯ ಕೊರೊನಾ ಪಾಸಿಟಿವ್ ದೃಢಪಟ್ಟಿದೆ.

ಈಶಾನ್ಯ ಸಾರಿಗೆಯ ಕೊಪ್ಪಳ ವಿಭಾಗದಲ್ಲಿ ಸುಮಾರು 19 ಸಾವಿರ ಜನರು ವಿವಿಧ ಹುದ್ದೆಗಳಲ್ಲಿ ಕಾರ್ಯ‌ನಿರ್ವಹಿಸುತ್ತಿದ್ದು ಈಗಾಗಲೇ 398 ಜನರು‌ ಕೋವಿಡ್-19 ಪರೀಕ್ಷೆ ಮಾಡಿಸಿಕೊಂಡಿದ್ದಾರೆ. ಇವರಲ್ಲಿ 10 ಜನರಿಗೆ ಕೋವಿಡ್-19 ದೃಢವಾಗಿದ್ದು, ಐಸೋಲೇಷನ್‌ನಲ್ಲಿದ್ದಾರೆ. ನೌಕರರ ಮುಷ್ಕರದ ಹಿನ್ನೆಲೆಯಲ್ಲಿ ಪಾಸಿಟಿವ್ ಆಗಿರುವ ಎಲ್ಲರೂ ಬಹುತೇಕ 15 ದಿನಗಳಿಂದ ಇತರ ಸಿಬ್ಬಂದಿಯೊಂದಿಗೆ ಸಂಪರ್ಕದಲ್ಲಿ ಇರಲಿಲ್ಲ. ಆದ್ದರಿಂದ ಇತರ ಸಿಬ್ಬಂದಿ ಆತಂಕಪಡುವ ಅಗತ್ಯ ಇಲ್ಲ. ಪಾಸಿಟಿವ್ ಆಗಿರುವ ಹತ್ತು ಜನರಲ್ಲಿ ಒಬ್ಬರು ಮಾತ್ರ ವಿಭಾಗೀಯ ಕಚೇರಿಯಲ್ಲಿ‌ ಕೆಲಸ ಮಾಡುತ್ತಿದ್ದು, ಅವರ ಕಾರ್ಯಸ್ಥಾನದ ಕೊಠಡಿಯನ್ನು ಸ್ಯಾನಿಟೈಜ್ ಮಾಡಲಾಗಿದೆ. ಏಪ್ರಿಲ್ 28ರಿಂದ ರಾಜ್ಯಾದ್ಯಂತ ಲಾಕ್‌ಡೌನ್ ಜಾರಿಯಾಗಿದ್ದು ಎಲ್ಲ ಸಿಬ್ಬಂದಿ ಕಡ್ಡಾಯವಾಗಿ ಕೋವಿಡ್-19 ಪರೀಕ್ಷೆ ಮಾಡಿಸಿಕೊಳ್ಳಲು ಸೂಚಿಸಲಾಗಿದೆ ಎಂದು ಈಶಾನ್ಯ ಸಾರಿಗೆಯ ಕೊಪ್ಪಳದ ವಿಭಾಗೀಯ‌ ನಿಯಂತ್ರಣಾಧಿಕಾರಿ ಎಂ.ಎ.ಮುಲ್ಲಾ  ತಿಳಿಸಿದರು.

Please follow and like us:
error