ಜಿಲ್ಲೆಯ 351 ಆಕ್ರಮ ಮದ್ಯ ಮರಾಟ ಅಂಗಡಿಗಳ ಮೇಲೆ ದಾಳಿ : ಡಿ.ಸಿ


ಕೊಪ್ಪಳ ಏ. : ಜಿಲ್ಲೆಯಲ್ಲಿ ಕೋವಿಡ್-19 ತಡೆಗಟ್ಟುವ ಹಿನ್ನಲೆಯಲ್ಲಿ, ಎಲ್ಲಾ ಮದ್ಯದಂಗಡಿಗಳನ್ನು ನಿಷೇಧ ಮಾಡಲಾಗಿದ್ದು, ಆದರೂ ಜಿಲ್ಲೆಯಲ್ಲಿ ಅಕ್ರಮವಾಗಿ ನಡೆಯುತ್ತಿರುವ ಮದ್ಯ ಮಾರಾಟ ತಡೆಗಟ್ಟಲು ಜಿಲ್ಲಾಡಳಿತ ಯಶಸ್ವಿಯಾಗಿದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ತಿಳಿಸಿದ್ದಾರೆ.
ಈ ಹಿನ್ನಲೆಯಲ್ಲಿ ಮಾ.03 ರಿಂದ ಏ.29 ರವರೆಗೆ 351 ದಾಳಿಗಳು ಮಾಡಿದ್ದು, ಒಟ್ಟು-48 ಘೋರ ಮೊಕದ್ದಮೆಗಳನ್ನು ದಾಖಲಿಸಿ. ಭಾ.ತ.ಮ-6741.730 ಲೀಟರ್, ಬಿಯರ್-5415.340 ಲೀಟರ್, ಕಳ್ಳಭಟ್ಟಿ-93.250 ಲೀಟರ್, ಬೆಲ್ಲದಕೊಳೆ-900 ಲೀಟರ್ ಹಾಗೂ 24 ದ್ವಿಚಕ್ರ ವಾಹನಗಳನ್ನು ಜಪ್ತುಪಡಿಸಿಕೊಂಡು, 7 ಜನ ಆರೋಪಿಗಳನ್ನು ಬಂಧಿಸಲಾಗಿದೆ.
ಪ್ರಸ್ತುತ ಕಾರಟಗಿ ತಾಲೂಕಿನ ಮರ್ಲಾನಹಳ್ಳಿ ಗ್ರಾಮದ ಚಾಂದಿನಿ ರೆಸಿಡೆನ್ಸಿ ಸಿಎಲ್-7 ಮತ್ತು ಸಿದ್ದಾಪುರ ಗ್ರಾಮದ ಸಿಎಲ್-2 ವಿರುದ್ಧ ಮೊಕದ್ದಮೆಗಳನ್ನು ದಾಖಲಿಸಿ 2 ಸನ್ನದ್ದುಗಳನ್ನು ಮುಂದಿನ ಆದೇಶದವರೆಗೆ ಅಮಾನತುಪಡಿಸಲಾಗಿರುತ್ತದೆ. ಜಿಲ್ಲೆಯಲ್ಲಿ ಈವರೆಗೂ ಒಟ್ಟು-11 ವಿವಿಧ ಸನ್ನದ್ದುಗಳನ್ನು ಮುಂದಿನ ಆದೇಶದವರೆಗೆ ಅಮಾನತುಗೊಳಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Please follow and like us:
error