fbpx

ಜಿಲ್ಲೆಯಲ್ಲಿ ವಾಡಿಕೆಗಿಂತ ಹೆಚ್ಚು ಮಳೆ: ಎಂ.ಪಿ.ಮಾರುತಿ


ಕೊಪ್ಪಳ,  : ಜಿಲ್ಲೆಯಲ್ಲಿ ವಾಡಿಕೆ ಮಳೆ 525 ಮಿ.ಮೀ ಇದ್ದು 736 ಮಿ.ಮೀ ವಾಸ್ತವಿಕವಾಗಿ ಶೇ.40 ರಷ್ಟು ಹೆಚ್ಚಿನ ಮಳೆ ಆಗಿದೆ ಎಂದು ಅಪರ ಜಿಲ್ಲಾಧಿಕಾರಿ ಎಂ.ಪಿ.ಮಾರುತಿ ಅವರು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಕಳೆದ 2 ದಿನಗಳಲ್ಲಿ ಧಾರಾಕಾರವಾಗಿ ಮಳೆ ಆಗುತ್ತಿದ್ದು , 11 ಅಕ್ಟೋಬರ್ 2020 ರಲ್ಲಿ ಜಿಲ್ಲೆಯ ವಾಡಿಕೆ ಮಳೆ 5 ಮಿ.ಮೀ ಇದ್ದು, 36 ಮಿ.ಮೀ ಹೆಚ್ಚಿನ ಮಳೆ ಆಗಿರುತ್ತದೆ . ಕೊಪ್ಪಳ-54 ಮಿ.ಮೀ, ಕುಕನೂರು-50 ಮಿ.ಮೀ, ಕುಷ್ಟಗಿ ತಾಲೂಕಿನಲ್ಲಿ 35 ಮಿ.ಮೀ ಮಳೆ ಆಗಿರುತ್ತದೆ. ಅಕ್ಟೋಬರ್ ಮಾಹೆಯಲ್ಲಿ ಇಲ್ಲಿಯವರೆಗೆ ವಾಡಿಕೆ ಮಳೆ 60 ಮಿ.ಮೀ ಇದ್ದು, 82 ಮಿ.ಮೀ ವಾಸ್ತವಿಕವಾಗಿ ಹೆಚ್ಚಿನ ಮಳೆ ಆಗಿರುತ್ತದೆ.
ಕಳೆದ ಕೆಲವು ದಿನಗಳಲ್ಲಿ ಹೆಚ್ಚಿನ ಮಳೆಯಾಗುತ್ತಿರುವುದರಿಂದ ಸುಮಾರು 140 ಹೆಕ್ಟೇರ್ ಕೃಷಿ ಬೆಳೆಗಳಾದ ಮೆಕ್ಕೆಜೋಳ, ಹತ್ತಿ, ಭತ್ತ ಹಾನಿಯಾಗಿರುತ್ತದೆ ಹಾಗೂ ತೋಟಗಾರಿಕೆಯ 830 ಹೆಕ್ಟರ್ ಬೆಳೆ ಅಂದರೆ ಬಾಳೆ, ಮೆಣಸಿನಕಾಯಿ ಹಾಗೂ ಈರುಳ್ಳಿ ಬೆಳೆಗಳು ಹಾನಿಯಾಗಿರುತ್ತವೆ. ಸುಮಾರು ರೂ. 4.50 ಕೋಟಿ ಹಾನಿಯಾಗಿದೆ ಎಂದು ಅಂದಾಜಿಸಲಾಗಿದ್ದು, ಹಾನಿಯಾಗಿರುವ ಬೆಳೆ ಹಾನಿಯ ಜಂಟಿ ಸಮೀಕ್ಷೆ ಕಾರ್ಯ ಕೈಗೊಳ್ಳಲಾಗುತ್ತಿದೆ. ನಷ್ಟದ ವಿವರವನ್ನು ಪರಿಹಾರ ತಂತ್ರಾAಶದಲ್ಲಿ ದಾಖಲಿಸಲಾಗುತ್ತಿದೆ. ಕಳೆದ 2-3 ದಿನಗಳಲ್ಲಿ ಕುಕನೂರು-90, ಕೊಪ್ಪಳ-20 ಮತ್ತು ಉಳಿದ ತಾಲೂಕಿನಲ್ಲಿ 30 ಮನೆಗಳು ಸೇರಿದಂತೆ ಒಟ್ಟು 140 ಕಚ್ಚಾ ಮನೆಗಳು ಭಾಗಶಃ ಹಾನಿಯಾಗಿದ್ದು, ಅಂದಾಜು ರೂ. 1.40 ಕೋಟಿ ನಷ್ಟವಾಗಿರುತ್ತದೆ.
ಇದುವರೆಗೂ ಜಿಲ್ಲೆಯಲ್ಲಿ 744 ಮನೆಗಳಿಗೆ ರೂ. 23 ಲಕ್ಷ ಪರಿಹಾರ ಪಾವತಿಸಲಾಗಿರುತ್ತದೆ. ಮುಂದುವರೆದು ಜಿಲ್ಲೆಯಲ್ಲಿ ಕೊಪ್ಪಳ ತಾಲೂಕಿನ ಕೋಳೂರು ಗ್ರಾಮದ ಬ್ರಿಡ್ಜ್ ಕಂ ಬ್ಯಾರೇಜ್ ಹಾನಿಯಾಗಿದ್ದು, ಅಂದಾಜು ರೂ. 4 ಕೋಟಿ ಹಾನಿಯಾಗಿರುತ್ತದೆ ಮತ್ತು ಕುಷ್ಟಗಿ ತಾಲೂಕಿನ ಚಿಕ್ಕಹೆಸರೂರು-ಮುಗದಲ್-ಮುಂಡರಗಿ ರಾಜ್ಯ ಹೆದ್ದಾರಿ 129 ಕಿ.ಮೀ ನಿಂದ 150 ಕಿ.ಮೀ ರಸ್ತೆಯ ಪಕ್ಕದ ಹಳ್ಳದ ತಡೆಗೋಡೆ ಹಾನಿಯಾಗಿದ್ದು, ಅಂದಾಜು ರೂ. 1.10 ಕೋಟಿ ಹಾನಿಯಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Please follow and like us:
error
error: Content is protected !!