ಕೊಪ್ಪಳ  22 ಪಾಜಿಟಿವ್ ಕೇಸ್ ಗಳ ಟ್ರಾವೆಲ್ ಹಿಸ್ಟರಿ ಏನು ಗೊತ್ತಾ?

ಕೊಪ್ಪಳ : ಜಿಲ್ಲೆಯಲ್ಲಿ ಇಂದು 22 ಕೊರೊನಾ ಸೋಂಕು ದೃಢಪಟ್ಟಿವೆ .ಕುಷ್ಟಗಿ ತಾಲ್ಲೂಕಿನ ನಂದಾಪುರದ 32 ವರ್ಷದ ವ್ಯಕ್ತಿಗೆ ಹಾಗೂ 40 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದ್ದು, ಜಿಲ್ಲೆಯಲ್ಲಿಯೇ ಪ್ರಯಾಣ ಮಾಡಿದ ಹಿನ್ನೆಲೆ ಹೊಂದಿದ್ದಾರೆ. ತಾಲ್ಲೂಕಿನ ಚಿಕ್ಕಬನ್ನಿಗೋಳ ಗ್ರಾಮದ 3 ವರ್ಷದ ಬಾಲಕಿಗೆ ಸೋಂಕು ದೃಢ ಪಟ್ಟಿದ್ದು, ಈಕೆಗೆ ಯಾವುದೇ ಪ್ರಯಾಣ ಹಿನ್ನೆಲೆ ಇರುವುದಿಲ್ಲ. ಸೋಂಕಿನ ಲಕ್ಷಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಪರೀಕ್ಷೆಗೆ ಒಳಪಡಿಸಿದಾಗ ಸೋಂಕು ದೃಢಪಟ್ಟಿದೆ.
ಗಂಗಾವತಿ ತಾಲ್ಲೂಕಿನ ಶ್ರೀರಾಮನಗರದ 19 ವರ್ಷದ ಯುವತಿ ಮತ್ತು 18 ವರ್ಷದ ಯುವಕನಿಗೆ ಸೋಂಕು ದೃಢಪಟ್ಟಿದೆ. ಇವರು ಜೂನ್ 16 ರಂದು ಆಂಧ್ರಪ್ರದೇಶದಿಂದ ಗ್ರಾಮ್ಕಕೆ ಆಗಮಿಸಿದ್ದಾರೆ. ಶ್ರೀರಾಮನಗರದ 45 ವರ್ಷದ ವ್ಯಕ್ತಿ ದೃಢಪಟ್ಟಿದ್ದು, ಇವರು ಜೂನ್ 16 ರಂದು ಆಂಧ್ರದ ವಿಜಯವಾಡದಿಂದ ಗ್ರಾಮಕ್ಕೆ ಆಗಮಿಸಿದ್ದಾರೆ. ಶ್ರೀರಾಮನಗರದ 6 ವರ್ಷದ ಬಾಲಕ ಮತ್ತು 37 ವರ್ಷದ ವ್ಯಕ್ತಿಯಲ್ಲಿ ಸೋಂಕು ದೃಢಪಟ್ಟಿದ್ದು, ಇವರು ಜೂನ್ 18 ರಂದು ಆಂಧ್ರದ ಪೂರ್ವ ಗೋದಾವರಿಯಿಂದ ಗ್ರಾಮಕ್ಕೆ ಮರಳಿದ್ದಾರೆ ಇವರಲ್ಲಿ ಯಾವುದೇ ಸೋಂಕಿನ ಲಕ್ಷಣಗಳು ಕಂಡುಬರದಿದ್ದರೂ ಪರೀಕ್ಷೆಗೆ ಒಳಪಡಿಸಿದಾಗ ಸೋಂಕು ದೃಢಪಟ್ಟಿದೆ.
ಗಂಗಾವತಿ ತಾಲ್ಲೂಕಿನ ಕಾರಟಗಿಯ 23 ವರ್ಷದ ಮಹಿಳೆಯಲ್ಲಿ ಸೋಂಕು ದೃಢಪಟ್ಟಿದ್ದು, ಇವರು ಜೂನ್ 19 ರಂದು ದೆಹಲಿಯಿಂದ ಪಟ್ಟಣಕ್ಕೆ ಆಗಮಿಸಿದ್ದಾರೆ. ತಾಲ್ಲೂಕಿನ ಅಡವಿಬಾವಿಯ 42 ವರ್ಷದ ಮಹಿಳೆಯಲ್ಲಿ ಸೋಂಕು ದೃಢಪಟ್ಟಿದ್ದು, ಇವರು ಜೂನ್ 26 ರಂದು ಒರಿಸ್ಸಾದಿಂದ ಗ್ರಾಮಕ್ಕೆ ಆಗಮಿಸಿದ್ದಾರೆ. ಗಂಗಾವತಿಯ 18 ವರ್ಷದ ಯುವತಿಗೆ ಸೋಂಕು ದೃಢಪಟ್ಟಿದ್ದು, ಇವರು ಯಾವುದೇ ಪ್ರಯಾಣ ಹಿನ್ನೆಲೆಯನ್ನು ಹೊಂದಿಲ್ಲ. ತಾಲ್ಲೂಕಿನ ಮರಳಿ ಗ್ರಾಮದ 56 ವರ್ಷದ ವ್ಯಕ್ತಿಗೆ ಸೋಂಕು ದೃಢಪಟ್ಟಿದ್ದು, ಇವರು ಸೋಂಕಿತರ ಸಂಪರ್ಕದಲ್ಲಿದ್ದವರಾಗಿದ್ದಾರೆ.
ಯಲಬುರ್ಗಾದ ತಳಕಲ್‌ನ 34 ವರ್ಷದ ವ್ಯಕ್ತಿಗೆ ಸೋಂಕು ದೃಢಪಟ್ಟಿದ್ದು, ಇವರು ಕೆಪಿಎಲ್-41 ರ ಪ್ರಾಥಮಿಕ ಸಂಪರ್ಕಿತರಾಗಿರುತ್ತಾರೆ. ಚಿಕ್ಕೇನಕೊಪ್ಪದ 25 ವರ್ಷದ ವ್ಯಕ್ತಿಗೆ ಸೋಂಕು ದೃಢಪಟ್ಟಿದ್ದು, ಇವರು ಜೂನ್ 5 ರಂದು ಯಾದಗಿರಿಯಿಂದ ಗ್ರಾಮಕ್ಕೆ ಆಗಮಿಸಿದ್ದಾರೆ. ಗೊರ್ಲೆಕೊಪ್ಪದ 12 ವರ್ಷದ ಬಾಲಕನಿಗೆ ಸೋಂಕು ದೃಢಪಟ್ಟಿದ್ದು, ಇವರು ಇಳಕಲ್‌ನಿಂದ ಗ್ರಾಮಕ್ಕೆ ಆಗಮಿಸಿದ್ದಾರೆ. ಯಡ್ಡೋಣಿಯ 55 ವರ್ಷದ ವ್ಯಕ್ತಿಗೆ ಸೋಂಕು ದೃಢಪಟ್ಟಿದ್ದು, ಇವರು ಯಾವುದೇ ಪ್ರಯಾಣ ಹಿನ್ನೆಲೆಯನ್ನು ಹೊಂದಿಲ್ಲ. ಸೋಂಕಿನ ಲಕ್ಷಣಗಳು ಕಂಡುಬಂದ ಹಿನ್ನೆಲೆಯಲ್ಲಿ ಪರೀಕ್ಷೆಗೆ ಒಳಪಡಿಸಿದಾಗ ಸೋಂಕು ದೃಢಪಟ್ಟಿದೆ.
ಕೊಪ್ಪಳ ತಾಲ್ಲೂಕಿನ ಹಿರೇಬಗನಾಳ ಗ್ರಾಮದ 31 ವರ್ಷದ ವ್ಯಕ್ತಿಗೆ ಸೋಂಕು ದೃಢಪಟ್ಟಿದ್ದು, ಇವರು ಒರಿಸ್ಸಾದಿಂದ ಗ್ರಾಮಕ್ಕೆ ಆಗಮಿಸಿದ್ದಾರೆ. ಗಬ್ಬೂರಿನ 25 ವರ್ಷದ ಮಹಿಳೆ ಹಾಗೂ 2 ವರ್ಷದ ಬಾಲಕಿಗೆ ಸೋಂಕು ದೃಢಪಟ್ಟಿದ್ದು, ಇವರು ಬಳ್ಳಾರಿಯಿಂದ ಗ್ರಾಮಕ್ಕೆ ಆಗಮಿಸಿದ್ದಾರೆ. ಹುಲಿಗಿಯ 55 ವರ್ಷ ಹಾಗೂ 30 ವರ್ಷದ ಮಹಿಳೆಯರಲ್ಲಿ ಸೋಂಕು ದೃಢಪಟ್ಟಿದ್ದು, ಇವರು ಪಿ-8057 ರ ಸಂಪರ್ಕಿತರಾಗಿದ್ದಾರೆ. ಹೊಸಲಿಂಗಾಪುರದ 31 ವರ್ಷದ ಮಹಿಳೆಯಲ್ಲಿ ಸೋಂಕು ದೃಢಪಟ್ಟಿದ್ದು, ಇವರು ಪಿ-8056 ನ ಸಂಪರ್ಕಿತರಾಗಿದ್ದಾರೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

Please follow and like us:
error