ಜಿಲ್ಲೆಯನ್ನು ಕ್ಷಯ ರೋಗ ಮುಕ್ತವನ್ನಾಗಿಸಿ : ರಾಘವೇಂದ್ರ ಹಿಟ್ನಾಳ ಸೂಚನೆ

ಸಿಬಿನಾಟ್ ಮೊಬೈಲ್ ವೈದ್ಯಕೀಯ ವಾಹನಕ್ಕೆ ಚಾಲನೆ

ಕೊಪ್ಪಳ ನ.   ಕೊಪ್ಪಳ ಜಿಲ್ಲೆಯಲ್ಲಿ ಕ್ಷಯ ರೋಗ ಪತ್ತೆ ಮಾಡಿಸಿ, ಇದಕ್ಕೆ ನಿಗದಿದ ಸಮಯದೊಳಗೆ ಸೂಕ್ತ ಚಿಕಿತ್ಸೆ ನೀಡಿ ಜಿಲ್ಲೆಯನ್ನು ಕ್ಷಯ ರೋಗ ಮುಕ್ತವನ್ನಾಗಿಸಿ ಎಂದು ಶಾಸಕ ರಾಘವೇಂದ್ರ ಹಿಟ್ನಾಳ ಅವರು ಅಧಿಕಾರಿಗಲಿಗೆ ಸೂಚನೆ ನೀಡಿದರು.
ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕ್ಷಯ ರೋಗ ನಿಯಂತ್ರಣಾಧಿಕಾರಿಗಳ ಕಾರ್ಯಾಲಯ ಇವರ ಸಹಯೋಗದಲ್ಲಿ ಇಂದಿನಿAದ (ನ.18) ಜಿಲ್ಲೆಯಾದ್ಯಂತ ಹಮ್ಮಿಕೊಳ್ಳಲಾದ ಕ್ಷಯ ರೋಗ ಪತ್ತೆ ಹಾಗೂ ಮುಕ್ತ ಅಭಿಯಾನಕ್ಕೆ ಸೋಮವಾರದಂದು ಹಿಟ್ನಾಳ್ ಗ್ರಾಮದಲ್ಲಿ ಚಾಲನೆ ನೀಡಿದರು.
ಸಿಬಿನಾಟ್ ಪರೀಕ್ಷೆಗೆ ಸರಕಾರ ಪ್ರತಿ ರೋಗಿಗೆ 1500-2000 ರೂಪಾಯಿ ಖರ್ಚು ಮಾಡುತ್ತಿದ್ದು, ಕ್ಷಯ ಪತ್ತೆ ಮಾಡಲು ಸಿಬಿನಾಟ್ ಅತೀ ಸೂಕ್ಷö್ಮ ಸಾಧನವಾಗಿದೆ.  ಜಿಲ್ಲೆಯಲ್ಲಿ ಸರಕಾರಿ ಆಸ್ಪತ್ರೆಯಲ್ಲಿ ಮಾತ್ರ ಈ ಸೌಲಭ್ಯ ಇರುತ್ತದೆ.  ಆದ್ದರಿಂದ ಕ್ಷಯ ಪತ್ತೆ ವಿಳಂಬವಾಗಿ ಬೇರೆಯವರಿಗೆ ಹರಡುವ ರೋಗವಾದ್ದರಿಂದ ಮೊದಲ ಹಂತದಲ್ಲಿ ಪತ್ತೆ ಮಾಡಿ ಪೂರ್ಣ ಪ್ರಮಾಣದ ಚಿಕಿತ್ಸೆ ನೀಡಿದಲ್ಲಿ ಸಂಪೂರ್ಣ ಗುಣಮುಖವಾಗುತ್ತಾರೆ.  ಜಿಲ್ಲೆಯಲ್ಲಿ ಇದುವರೆಗೂ ಸರಕಾರಿ ವಲಯದಲ್ಲಿ 2252 ಕ್ಷಯರೋಗಿಗಳನ್ನು ಮತ್ತು ಖಾಸಗಿ ವಲಯದಲ್ಲಿ 236 ಕ್ಷಯರೋಗಿಗಳನ್ನು ಪತ್ತೆ ಮಾಡಲಾಗಿದೆ. ಆದರೂ ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಲ್ಲಿ ಸುಮಾರು 159 ರೋಗಿಗಳು ಕ್ಷಯದಿಂದ ಮರಣ ಹೊಂದಿದ್ದಾರೆ.  ಇದಕ್ಕೆ ಮುಖ್ಯ ಕಾರಣ ವಿಳಂಬವಾಗಿ ಪತ್ತೆಯಾಗುತ್ತಿರುವುದು ಹಾಗೂ ಸಹವ್ಯಾಧಿಗಳಾದ ಹೆಚ್.ಐ.ವಿ., ಅಪೌಷ್ಟೀಕತೆ, ತಂಬಾಕು ಸೇವನೆ, ಮದ್ಯಪಾನ ಮಾಡುವವಲ್ಲಿ ಮರಣ ಪ್ರಮಾಣ ಹೆಚ್ಚಾಗಿರುತ್ತದೆ ಎಂದರು.
ಜಿಲ್ಲಾ ಕ್ಷಯ ರೋಗ ನಿಯಂತ್ರಣಾಧಿಕಾರಿ ಡಾ. ಮಹೇಶ ಎಂ.ಜಿ. ಮಾತನಾಡಿ, ಜಿಲ್ಲೆಯಲ್ಲಿ ಸಿಬಿನಾಟ್ ಮೊಬೈಲ್ ವೈದ್ಯಕೀಯ ವಾಹನವು ಇಂದಿನಿAದ (ನ. 18 ರಿಂದ) 2020 ರ ಜನವರಿ. 01 ರವರೆಗೆ ಸಂಚರಿಸುವುದರ ಮೂಲಕ ಕ್ಷಯ ಮುಕ್ತ ಅಭಿಯಾನ ಹಾಗೂ “ನಮ್ಮ ನಡೆ  ಕ್ಷಯ ಪತ್ತೆ ಕಡೆ” ಎನ್ನುವ ಘೋಷ ವಾಕ್ಯದೊಂದಿಗೆ ಕ್ಷಯ ರೋಗ ಪತ್ತೆ ಅಭಿಯಾನ ನಡೆಯಲಿದೆ.  ಸಿಬಿನಾಟ್ ವಾಹನವನ್ನು ಜಿಲ್ಲೆಯ ಎಲ್ಲಾ ಸಂಶಯಾಸ್ಪದ ಕ್ಷಯರೋಗದ ಲಕ್ಷಣಗಳಾದ ಕೆಮ್ಮು, ಜ್ವರ, ತೂಕ ಕಡಿಮೆ, ಸಂಜೆ ಮತ್ತು ರಾತ್ರಿಯ ವೇಳೆ ಬೆವರು, ಇಂತಹ ಪರಿಣಾಮಗಳು ಕಂಡುಬAದಲ್ಲಿ ಕ್ಷಯ ರೋಗ ಪತ್ತೆ ಮಾಡಿಸಿಕೊಂಡು ಸೂಕ್ತ ಚಿಕಿತ್ಸೆ ಪಡೆಯಬೇಕು.  ಈ ನಿಟ್ಟಿನಲ್ಲಿ ಜಿಲ್ಲೆಯಾದ್ಯಂತ ಕ್ಷಯ ರೋಗ ಪತ್ತೆ ಹಾಗೂ ಮುಕ್ತ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ತಾಲ್ಲೂಕ ಪಂಚಾಯತಿ ಅಧ್ಯಕ್ಷ ಬಾಲಚಂದ್ರನ್, ಜಿಲ್ಲಾ ಪಂಚಾಯತಿ ಸದಸ್ಯ ವೆಂಕಟೇಶ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ರಾಮಾಂಜನೇಯ, ವೈದ್ಯಾಧಿಕಾರಿ ಡಾ. ಮಂಜುಳಾ,  ಡಾ ಮಹೇಶ ಉಮಚಗಿ, ಹಿಟ್ನಾಳ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗಳು ಮತ್ತು ಹಿಟ್ನಾಳ್ ಗ್ರಾಮದ ಮುಂಖಡರುಗಳು ಭಾಗವಹಿಸಿದ್ದರು.

Please follow and like us:
error