ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಡಾ. ಪುರಾಣಿಕ್ ಆಯ್ಕೆ

ಕೊಪ್ಪಳ: ಜಿಲ್ಲೆಯ ಹನುಮಸಾಗರದಲ್ಲಿ ನಡೆಯಲಿರುವ ಕೊಪ್ಪಳ ಜಿಲ್ಲಾ ೧೨ನೇ ಸಾಹಿತ್ಯ ಸಮ್ಮೆಳನದ ಸರ್ವಾಧ್ಯಕ್ಷರನ್ನಾಗಿ ಹಿರಿಯಸಾಹಿತಿ ಹಾಗೂ ಅಂತರಾಷ್ಟ್ರೀಯ ಕನ್ನಡದ ಸೇವಕ ಡಾ.ಉದಯ ಶಂಕರ ಪ್ರರಾಣಿಕ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಕೊಪ್ಪಳದಲ್ಲಿ ರವಿವಾರದಂದು ಜರುಗಿದ ಜಿಲ್ಲಾ ಕಾಸಾಪ ಕಾರ್ಯಕಾರಣಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.ಕಳೆದ ಬಾರಿ ಯಲಬುರ್ಗಾ ಹಾಗೂ ಕೊಪ್ಪಳ ತಾಲೂಕಿನಲ್ಲಿ ಜಿಲ್ಲಾ ಸಮ್ಮೆಳನಗಳನ್ನ ನಡೆಸಿದ್ದು, ಈ ಬಾರಿ ಕುಷ್ಟಗಿ ತಾಲೂಕಿನ ಹನುಮಸಾಗರದಲ್ಲಿ ಅಲ್ಲಿಯ ಸಾಹಿತಿಗಳ ಆಶಯದಂತೆ ನಡೆಸಲು ತಿರ್ಮಾನಿಸಲಾಯಿತು.ಸಮ್ಮೇಳನದ ಸರ್ವಾಧ್ಯಕ್ಷ ಸ್ಥಾನಕ್ಕೆ ಹಿರಿಯ ಸಾಹಿತಿಗಳಾದ ಅಲ್ಲಮಪ್ರಬು ಬೆಟ್ಟದೂರ, ಸಾವಿತ್ರಿ ಮುಜುಮದಾರ, ಅಲ್ಲಾಗಿರಿರಾಜ, ಶರಣಪ್ಪ ಎನ್. ಮೆಟ್ರಿ, ಡಾ.ಉದಯ ಶಂಕರ ಪ್ರರಾಣಿಕ, ಶರಣಪ್ಪ ಬಾಚಲಿಪೂರ ಇತರರ ಹೆಸರುಗಳು ಚರ್ಚೆಗೆ ಬಂದಿದ್ದವು.ಪ್ರರಾಣಿಕ್ ಕುಟುಂಬ ಈ ನಾಡಿಗೆ ಸಾಹಿತ್ಯ ಸೇವೆಯನ್ನು ಪರಿಗಣಿಸಿ ಈ ತೀರ್ಮಾನಕೈಗೊಳ್ಳಲಾಯಿತು. ಡಾ, ಸಿದ್ದಯ್ಯ ಪುರಾಣಿಕ ಅವರ ಸಹೋದರ ಅನ್ನದಾನಯ್ಯ ಪುರಾಣಿಕ್ ಅವರ ಸಪುತ್ರರಾಗಿರುವ ಅವರು, ಕನ್ನಡದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಕುರಿತು ಸುಮಾರು ೨೭೦೦ ಪುಸ್ತಕಗಳನ್ನು ಬರೆದಿದ್ದಾರೆ. ಇವರ ಕನ್ನಡ ಸೇವೆಯನ್ನು ಸ್ಮರಿಸಿ ಅವರಿಗೆ ಗೌರವ ನೀಡಲಾಯಿತು.ಡಾ.ಉದಯ ಪ್ರರಾಣಿಕ ಅವರು ಹೆಸರನ್ನು ಗಂಗಾವತಿ ಕಸಾಪ ಅಧ್ಯಕ್ಷ ಎಸ್.ಬಿ.ಗೊಂಡಬಾಳ ಸೂಚಿಸಿದರು. ಕುಷ್ಟಗಿ ಅಧ್ಯಕ್ಷ ಉಮೇಶ ಹಿರೇಮಠ ಅನುಮೊದಿಸಿರು.
ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾ ಕಸಾಪ ಅಧ್ಯಕ್ಷ ರಾಜಶೇಖರ ಅಂಗಡಿ ವಹಿಸಿದ್ದರು, ಜಿಲ್ಲಾ ಗೌರವ ಕಾರ್ಯದರ್ಶಗಳಾದ ಬಸವರಡ್ಡಿ ಆಡೂರ, ರವೀಂದ್ರ ಬಾಕಳೆ, ಕೋಶಾಧ್ಯಕ್ಷ ಸಂತೋಷ ದೇಶಪಾಡೆ, ಕೊಪ್ಪಳ ತಾಲೂಕ ಕಸಾಪ ಅಧ್ಯಕ್ಷ ಚೆನ್ನಪ್ಪ ಕಡ್ಡಿಪುಡಿ, ಕನಕಗಿರಿ ಅಧ್ಯಕ್ಷ ಮಹೆಬೂಬ, ಯಲಬುರ್ಗಾ ತಾಲೂಕ ಅಧ್ಯಕ್ಷ ದೇವೆಂದ್ರಪ್ಪ ಜಿರ್ಲಿ, ಕುಕನೂರು ತಾಲೂಕ ಅಧ್ಯಕ್ಷ ಲಕ್ಷ್ಮಣ ಹಿರೇಮನಿ,ಸಂಘ ಸಂಸ್ಥೆ ಪ್ರತಿನಿಧಿ ವಿಜಯಲಕ್ಷ್ಮಿ ಮೇಲಿನಮನಿ,ಕಾರಟಗಿ ಅಧ್ಯಕ್ಷ ಚನ್ನಬಸಪ್ಪ ವಕ್ಕಳದ ಸೇರಿದಂತೆ ಇತರರು ಇದ್ದರು.

Please follow and like us:
error