ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ವಿವರ

ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಜಿಲ್ಲಾ ಶಾಖೆ ವತಿಯಿಂದ ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಜ. ೧೯ ಮತ್ತು ೨೦ ರಂದು ಏರ್ಪಡಿಸಲಾಗಿದ್ದು, ಅಥ್ಲೆಟಿಕ್ಸ್, ಗುಂಪು ಆಟಗಳು ಸೇರಿದಂತೆ ಹಲವು ಬಗೆಯ ಸ್ಪರ್ದೆಗಳು ಹಾಗು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.
ಕೊಪ್ಪಳ ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಮಂತ್ರಿಗಳಾದ ಬಸವರಾಜ ರಾಯರಡ್ಡಿ ಅವರು ಕ್ರೀಡಾಕೂಟದ ಉದ್ಘಾಟನೆ ನೆರೆವೇರಿಸುವರು. ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಕ್ರೀಡಾ ಜ್ಯೋತಿ ಬೆಳಗಿಸುವರು. ಸಂಸದ ಕರಡಿ ಸಂಗಣ್ಣ ಹಾಗೂ ಜಿಲ್ಲೆಯ ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರು, ಜಿ.ಪಂ., ತಾ.ಪಂ., ನಗರಸಭೆಗಳ ಅಧ್ಯಕ್ಷರು, ಉಪಾಧ್ಯಕ್ಷರುಗಳು, ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಅನೇಕರು ಪಾಲ್ಗೊಳ್ಳಲಿದ್ದಾರೆ. ಜ. ೧೯ ರಂದು ಬೆಳಿಗ್ಗೆ ೧೦-೩೦ ಗಂಟೆಗೆ ಕಾರ್ಯಕ್ರಮ ಉದ್ಘಾಟನೆ ಯಾಗಲಿದ್ದು, ಜಿಲ್ಲೆಯ ನೌಕರ ಕ್ರೀಡಾಪಡುಗಳು ಅಂದು ಬೆಳಿಗ್ಗೆ ತಮ್ಮ ಹೆಸರುಗಳನ್ನು ಕಡ್ಡಾಯವಾಗಿ ನೊಂದಾಯಿಸಿಕೊಳ್ಳಬೇಕು.
ಕ್ರೀಡಾ ಸ್ಪರ್ಧೆಗಳು : ಅಥ್ಲೆಟಿಕ್ಸ್‌ನಲ್ಲಿ ೪೫ ವರ್ಷ ಒಳಗಿರುವ ಪುರುಷ ನೌಕರರಿಗೆ ೧೦೦ ಮೀ, ೨೦೦ ಮೀ, ೪೦೦ ಮೀ, ೮೦೦ ಮೀ, ೧೫೦೦ ಮೀ, ಹರ್ಡಲ್ಸ್ ೫೦೦೦ ಮೀ, ೧೦,೦೦೦ ಮೀ ಓಟ, ಉದ್ದ ಜಿಗಿತ, ಎತ್ತರ ಜಿಗಿತ, ಗುಂಡು ಎಸೆತ, ಡಿಸ್ಕಸ್ ಎಸೆತ, ಜಾವಲಿನ್ ಎಸೆತ, ೪/೧೦೦ ಮೀ ರಿಲೇ, ೪/೪೦೦ ಮೀ ರಿಲೇ, ಈಜುಸ್ಪರ್ಧೆ, ೪೫ ವರ್ಷ ಮೇಲ್ಪಟ್ಟ ಪುರುಷ ನೌಕರರಿಗೆ ೧೦೦ ಮೀ, ೨೦೦ ಮೀ, ೪೦೦ ಮೀ ಓಟ, ಗುಂಡು ಎಸೆತ, ಡಿಸ್ಕಸ್ ಎಸೆತ, ಈಜುಸ್ಪರ್ಧೆ. ಮತ್ತು ೪೦ ವರ್ಷ ಒಳಗಿರುವ ಮಹಿಳಾ ನೌಕರರಿಗೆ ೧೦೦ ಮೀ, ೨೦೦ ಮೀ, ೪೦೦ ಮೀ, ೮೦೦ ಮೀ, ಹರ್ಡಲ್ಸ್, ಉದ್ದ ಜಿಗಿತ, ಎತ್ತರ ಜಿಗಿತ, ಗುಂಡು ಎಸೆತ, ಡಿಸ್ಕಸ್ ಎಸೆತ, ಜಾವಲಿನ್ ಎಸೆತ, ೪/೧೦೦ ಮೀ ರಿಲೇ, ೪/೪೦೦ ಮೀ ರಿಲೇ, ಈಜುಸ್ಪರ್ಧೆ, ಹಾಗೂ ೪೦ ವರ್ಷ ಮೇಲ್ಪಟ್ಟ ಮಹಿಳಾ ನೌಕರರಿಗೆ ೧೦೦ ಮೀ, ೨೦೦ ಮೀ, ೪೦೦ ಮೀ ಓಟ, ಗುಂಡು ಎಸೆತ, ಡಿಸ್ಕಸ್ ಎಸೆತ, ಈಜುಸ್ಪರ್ಧೆ.
ಗುಂಪ ಆಟಗಳಲ್ಲಿ ೪೫ ವರ್ಷ ಒಳಗಿರುವ ಪುರುಷ ನೌಕರರಿಗೆ ವಾಲಿಬಾಲ್, ಕಬ್ಬಡ್ಡಿ, ಟೇಬಲ್ ಟೆನ್ನಿಸ್, ಸಿಂಗಲ್ಸ್ ಮತ್ತು ಡಬಲ್ಸ್ ಟೆನ್ನಿಸ್, ಕೇರಂ, ಕ್ರೀಕೆಟ್, ಚೆಸ್, ಬ್ಯಾಡ್ಮಿಟನ್ ಸ್ಪರ್ಧೆ, ೪೫ ವರ್ಷ ಮೇಲ್ಪಟ್ಟ ಪುರುಷ ನೌಕರರಿಗೆ ಶೆಟಲ್, ಬ್ಯಾಡ್ಮಿಟನ್, ಟೆಬಲ್ ಟೆನ್ನಿಸ್ ಸ್ಪರ್ಧೆ. ಮತ್ತು ೪೦ ವರ್ಷ ಒಳಗಿರುವ ಮಹಿಳಾ ನೌಕರರಿಗೆ ಬ್ಯಾಡ್ಮಿಟನ್, ಸಿಂಗಲ್ ಮತ್ತು ಡಬಲ್ಸ್, ಟೇಬಲ್ ಟೆನ್ನಿಸ್, ಸಿಂಗಲ್ ಮತ್ತು ಡಬಲ್ಸ್, ಕೇರಂ, ಟೆನಿಕಾಯಿಟ್, ಥ್ರೋಬಾಲ್ ಸ್ಪರ್ಧೆ. ಹಾಗೂ ೪೦ ವರ್ಷ ಮೇಲ್ಪಟ್ಟ ಮಹಿಳಾ ನೌಕರರಿಗೆ ಟೇಬಲ್ ಟೆನ್ನಿಸ್ – ಸಿಂಗಲ್ಸ್, ಬ್ಯಾಡ್ಮಿಂಟನ್ ಸಿಂಗಲ್, ಟೆನ್ನಿಕಾಯ್ಡ್ – ಸಿಂಗಲ್ ಮತ್ತು ಡಬಲ್ಸ್ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಅಲ್ಲದೇ ಪುರುಷ ನೌಕರರಿಗೆ ಕುಸ್ತಿ, ೪೮, ೫೨, ೬೨, ೬೮, ೭೪, ೮೪, ೯೦, ೧೦೦ ಕೆ.ಜಿ ಮತ್ತು ಮೇಲ್ಪಟ್ಟ ಭಾರ ಎತ್ತುವಿಕೆ, ಪವರ್ ಲಿಫ್ಟಿಂಗ್, ಉತ್ತಮ ದೇಹದಾರ್ಢ್ಯ ಸ್ಪರ್ಧೆಗಳನ್ನು ಸಹ ಆಯೋಜಿಸಲಾಗಿಒದೆ.
ಸಾಂಸ್ಕೃತಿಕ ಸ್ಪರ್ಧೆಗಳು : ಹಿಂದೂಸ್ಥಾನಿ ಸಂಗೀತದಲ್ಲಿ ಮೌಖಿಕ, ಲಘು ಶಾಸ್ತ್ರೀಯ ಸಂಗೀತ. ಕರ್ನಾಟಕ ಸಂಗೀತದಲ್ಲಿ ಶಾಸ್ತ್ರೀಯ ಸಂಗೀತ, ಲಘು ಸಂಗೀತ. ನೃತ್ಯದಲ್ಲಿ ಜಾನಪದ ನೃತ್ಯ, ಭತರನಾಟ್ಯ. ಮತ್ತು ವಾದ್ಯ ಸಂಗೀತ, ಜಾನಪದ ಸಂಗೀತ, ಕರಕುಶಲ ವಸ್ತಗಳ ಪ್ರದರ್ಶನ ಹಾಗೂ ಕಿರು ನಾಟಕ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ.
ಸಂಗೀತ, ನೃತ್ಯ ಚೆಸ್ ಮತ್ತು ನಾಟಕ ಸ್ಪರ್ಧೆಗಳಲ್ಲಿ ಪುರುಷರಿಗೆ ಮತ್ತು ಮಹಿಳೆಯರಿಗೆ ಪ್ರತ್ಯೇಕ ಸ್ಪರ್ಧೆಗಳು ಇರುವುದಿಲ್ಲ. ಒಟ್ಟಿಗೆ ಭಾಗವಹಿಸಬೇಕು. ಹಾಗೂ ವಾದ್ಯಕ್ಕೆ ಸಂಬಂಧಪಟ್ಟ ಪರಿಕರಗಳನ್ನು ಸ್ಪರ್ಧಾಳುಗಳೇ ತರಬೇಕು. ಗುಂಪು ಆಟದ ತಂಡಗಳನ್ನು ಆಯಾ ತಾಲೂಕುಗಳ ಮಟ್ಟದಲ್ಲಿ ಸಿದ್ದಪಡಿಸಿಕೊಂಡು ಬರಬೇಕು. ಸ್ಪರ್ಧಾಳುಗಳು ಕೇವಲ ೩ ವೈಯಕ್ತಿಕ ಹಾಗೂ ೧ ಗುಂಪು ಆಟದಲ್ಲಿ ಮಾತ್ರ ಭಾಗವಹಿಸಬಹುದು. ಸಂಗೀತ ಮತ್ತು ನೃತ್ಯ ಕಲಾವಿದರು ರೇಡಿಯೋ, ಟಿವಿ ಕಲಾವಿದರು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಹಾಗೂ ಪೊಲೀಸ್, ಅರೇ ಮಿಲಿಟರಿ ಪಡೆಯುವರು, ದೈಹಿಕ ಶಿಕ್ಷಕರು, ತರಬೇತಿದಾರರು, ಕ್ರೀಡಾ ಆಡಳಿತಗಾರರು ಆಟೋಟಗಳಲ್ಲಿ ಭಾಗವಹಿಸುವಂತಿಲ್ಲ. ಸ್ಪರ್ಧಾಳುಗಳು ತಮ್ಮ ಇಲಾಖೆಯಿಂದ ಜನ್ಮ ದಿನಾಂಕದೊಂದಿಗೆ ತಮ್ಮ ಗುರುತಿನ ಪತ್ರ ತರಬೇಕು. ಕ್ರೀಡಾಪಟುಗಳು ನಿಯಮಗಳಿಗೆ ಬದ್ಧರಾಗಿರಬೇಕು. ರಾಜ್ಯ ಮಟ್ಟದ ನೌಕರರ ಕ್ರೀಡಾಕೂಟವು ಬಳ್ಳಾರಿಯಲ್ಲಿ ಇದೇ ತಿಂಗಳಲ್ಲಿ ನಡೆಯಲಿದ್ದು, ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ವೈಯಕ್ತಿಕ ಸ್ಪರ್ಧೆಗಳಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದವರು, ಗುಂಪು ಆಟಗಳಲ್ಲಿ ಪ್ರಥಮ ಸ್ಥಾನ ಪಡೆದವರು ಮಾತ್ರ ರಾಜ್ಯ ಮಟ್ಟದ ಕ್ರೀಡಾ ಕೂಟದಲ್ಲಿ ಭಾಗವಹಿಸಲು ಅರ್ಹರಾಗಿರುತ್ತಾರೆ. ಕ್ರೀಡಾಕೂಟದಲ್ಲಿ ಭಾಗವಹಿಸಲು ನೌಕರರಿಗೆ ವಿಶೇಷ ಸಾಂದರ್ಭಿಕ ರಜೆ ಲಭ್ಯವಿದೆ ಎಂದು ಪ್ರಕಟಣೆ ತಿಳಿಸಿದೆ.

Please follow and like us:
error