ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಪರಶುರಾಮ ಕೆರೆಹಳ್ಳಿ ನೇಮಕ

Kannadanet NEWS  : ಮಾದಿಕ ದಂಡೂರ (ರಿ) ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಪರಶುರಾಮ ಕೆರೆಹಳ್ಳಿರವರಿಗೆ ಜಿಲ್ಲಾ ಅಧ್ಯಕ್ಷರಾದ ಕೆ.ಎಸ್. ಮೈಲಾರಪ್ಪ ವಕೀಲರು ಆದೇಶ ನೀಡಿದ್ದಾರೆ. ಈ ಸಂಧರ್ಭದಲ್ಲಿ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಪ್ರವಾಸ ಕೈಗೊಂಡು ಮಾದಿಗ ಜನಾಂಗವನ್ನು ಮತ್ತು ಎಲ್ಲಾ ಉಪಜಾತಿಗಳ ಅಭಿವೃದ್ಧಿ ಹಾಗೂ ಜಾಗೃತಿಗಾಗಿ ಕಾರ್ಯಕೈಗೊಳ್ಳಲು ಸೂಚಿಸಿ ಹಾರೈಸಿದ್ದಾರೆ.

ಈ ಸಂಧರ್ಭದಲ್ಲಿ ತಾಲೂಕಾ ಅಧ್ಯಕ್ಷರಾದ ಹುಲಗಪ್ಪ ಹಿರೇಮನಿ, ಮುಖಂಡರಾದ ಯಲ್ಲಪ್ಪ ಹಳೇಮನಿ, ಮಲ್ಲಿಕಾರ್ಜುನ ಪೂಜಾರ, ಗಾಳೆಪ್ಪ ಕುಕನಪಳ್ಳಿ, ರಮೇಶ ಗಬ್ಬೂರು, ರವಿಚಂದ್ರ ಗುಡ್ಲಾನೂರು, ಆನಂದ ಕಿನ್ನಾಳ, ಸಲೀಂ ಅಳವಂಡಿ, ಬಸವರಾಜ ನರೇಗಲ್ಲ, ಸಂತೋಷ ಬೂದಿಹಾಳ ಸೇರಿದಂತೆ ಅನೇಕ ಹಿರಿಯರು ಮುಖಂಡರು ಶುಭಕೋರಿ ಹಾರೈಸಿದರು.

Please follow and like us:
error