ಜಿಲ್ಲಾ ಪತ್ರಿಕೆಗಳ ಸಂಪಾದಕರ ಸಂಘಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ

ಕರ್ನಾಟಕ ರಾಜ್ಯ ಜಿಲ್ಲಾ ಮತ್ತು ಮಧ್ಯಮ ಪತ್ರಿಕೆಗಳ ಸಂಪಾದಕರ ಸಂಘ, ಕೊಪ್ಪಳ ಜಿಲ್ಲಾ ಘಟಕ ಕೊಪ್ಪಳ
ಕೊಪ್ಪಳ,: ಕರ್ನಾಟಕ ರಾಜ್ಯ ಜಿಲ್ಲಾ ಮತ್ತು ಮಧ್ಯಮ ಪತ್ರಿಕೆಗಳ ಸಂಪಾದಕರ ಸಂಘದ ಕೊಪ್ಪಳ ಜಿಲ್ಲಾ ಘಟಕಕ್ಕೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.
ಕರ್ನಾಟಕ ರಾಜ್ಯ ಜಿಲ್ಲಾ ಮತ್ತು ಮಧ್ಯಮ ಪತ್ರಿಕೆಗ

ಳ ಸಂಪಾದಕರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಗಿರೀಶ ಕುಲಕರ್ಣಿ ಅವರ ಅಧ್ಯಕ್ಷತೆಯಲ್ಲಿ ಕಳೆದ ದಿನ ನಡೆದ ಸಂಘದ ಜಿಲ್ಲಾ ಘಟಕದ ಸರ್ವ ಸದಸ್ಯರ ಸಭೆಯಲ್ಲಿ ಸರ್ವಾನುಮತದಿಂದ ಜಿಲ್ಲಾಧ್ಯಕ್ಷರಾಗಿ ಸುದಿನ ದಿನಪತ್ರಿಕೆ ಸ್ಥಾನಿಕ ಸಂಪಾದಕ ಹರೀಶ್ ಎಚ್.ಎಸ್. ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ವಿನಯವಾಣಿ ದಿನಪತ್ರಿಕೆ ಸಂಪಾದಕ ಬಸವರಾಜ ಗುಡ್ಲಾನೂರ ಆಯ್ಕೆಯಾದರು. ಮತ್ತು ಉಪಾಧ್ಯಕ್ಷರಾಗಿ ವಾರ್ತಾ ಲೋಕ ದಿನಪತ್ರಿಕೆ ಸಂಪಾದಕ ವೆಂಕಟೇಶ್ ಕುಲಕರ್ಣಿ, ಕೋಶಾಧ್ಯಕ್ಷರಾಗಿ ಕಲ್ಯಾಣ ದರ್ಶನ ದಿನಪತ್ರಿಕೆ ಸಹ ಸಂಪಾದಕ ವೈ.ಬಿ.ಜೂಡಿ ಅವರುಗಳು ಆಯ್ಕೆಯಾಗಿದ್ದಾರೆ.
ಇನ್ನುಳಿದಂತೆ, ಜಿಲ್ಲೆಯ ಹಿರಿಯ ಸಂಪಾದಕರುಗಳಾದ, ನಾಡನುಡಿ ದಿನಪತ್ರಿಕೆ ಸಂಪಾದಕ ವಿ.ಎಸ್. ಪಾಟೀಲ್, ಪ್ರಜಾಪ್ರಪಂಚ ದಿನಪತ್ರಿಕೆ ಸಂಪಾದಕ ವೀರೇಂದ್ರ ಇರಕಲ್,
ಸುವರ್ಣಗಿರಿ ದಿನಪತ್ರಿಕೆ ಸಂಪಾದಕ ಎಸ್.ಎಂ.ಪಟೇಲ್, ಸಮರ್ಥವಾಣಿ ದಿನಪತ್ರಿಕೆ ಸಂಪಾದಕ ಗಿರೀಶ ಕುಲಕರ್ಣಿ, ಸಮರ್ಥವಾಣಿ ದಿನಪತ್ರಿಕೆ ಸಹ ಸಂಪಾದಕ ಹರೀಶ್ ಕುಲಕರ್ಣಿ, ಕಲ್ಯಾಣ ದರ್ಶನ ದಿನಪತ್ರಿಕೆ ಪತ್ರಿಕೆ ಸಂಪಾದಕಿ ಲಲಿತಮ್ಮ ಪೂಜಾರ, ಕೋಟೆಯ ಕರ್ನಾಟಕ ದಿನಪತ್ರಿಕೆ ಸ್ಥಾನಿಕ ಸಂಪಾದಕ ಮೊಹಮ್ಮದ್ ಖಲೀಲ್‌ಉಡೇವು ಕೋಟೆ ಕದಂಬ ದಿನಪತ್ರಿಕೆ ಸಂಪಾದಕ ಎನ್.ಎಂ.ದೊಡ್ಡಮನಿ, ಕೊಪ್ಪಳ ಟೈಮ್ಸ್ ದಿನಪತ್ರಿಕೆ ಸಂಪಾದಕ ಈರಣ್ಣ ಕಳ್ಳಿಮನಿ, ಪ್ರಜಾಪರ್ವ ದಿನಪತ್ರಿಕೆ ಸಂಪಾದಕ ಶ್ರೀನಿವಾಸ ಎಂ.ಜೆ. ಅವರು ನಿರ್ದೇಶಕರಾಗಿ ಆಯ್ಕೆ ಯಾದರು.
ಸಂಘದ ಜಿಲ್ಲಾ ಘಟಕದ ಉದ್ಘಾಟನೆ ಮತ್ತು ಪತ್ರಿಕಾ ದಿನಾಚರಣೆಯನ್ನು ಜುಲೈ ೧೮ ರಂದು ಹಮ್ಮಿಕೊಳ್ಳಲು ನಿರ್ಧರಿಸಲಾಯಿತು.
ಜಿಲ್ಲಾ ಪತ್ರಿಕೆಗಳ ಸಮಸ್ಯೆಗಳ ಪರಿಹಾರಕ್ಕಾಗಿ ಒಗ್ಗಟ್ಟಿನಿಂದ ಪ್ರಯತ್ನಿಸಲು ನಿರ್ಣಯಿ ಸಲಾ ಯಿತು.
ಜಿಲ್ಲಾ ಪತ್ರಿಕೆಗಳ ಹಿತದ ದೃಷ್ಟಿಯಿಂದ ಸಂಘದ ರಾಜ್ಯ ಸಮಿತಿ ಕೈಗೊಳ್ಳುವ ನಿರ್ಧಾ ರಗಳನ್ನು ಬೆಂಬಲಿಸಲು ತೀರ್ಮಾ ನಿಸಲಾಯಿತು.
ಸಭೆಯಲ್ಲಿ ಜಿಲ್ಲಾ ಪತ್ರಿಕೆಗಳ ಎಲ್ಲಾ ಸಂಪಾದಕಗಳು ಉಪಸ್ಥಿತ ರಿದ್ದರು.

Please follow and like us:
error