ಜಾಮೀಯಾ ಮಸೀದಿ ಅಭಿವೃದ್ದಿಗೆ ಶೀಘ್ರ ಹೆಚ್ಚಿನ ಅನುದಾನ- ಅಸೀಪ್ ಅಲಿ

ಕೊಪ್ಪಳ :  ಭಾಗ್ಯನಗರದ ಜಾಮೀಯಾ ಮಸೀದಿಯ ಆರ್ ಸಿಸಿ ಮತ್ತು ಕಟ್ಟಡ ಕಾಮಗಾರಿಗೆ ಈಗಾಗಲೇ ಎರಡು ಲಕ್ಷ ರೂಪಾಯಿ ಅನುದಾನ ನೀಡಲಾಗಿದ್ದು. ಇನ್ನೂ ಹೆಚ್ಚಿನ ಅನುದಾನವನ್ನು ವಕ್ಫ ಮಂಡಳಿಯಿಂದ ಕೊಡಿಸಲಾಗುವುದು ಎಂದು ರಾಜ್ಯ ವಕ್ಫ ಕಮಿಟಿ ಸದಸ್ಯ  ಅಸೀಪ್ ಅಲಿ ಹೇಳಿದರು.
ಇಂದು ಭಾಗ್ಯನಗರದ ಜಾಮೀಯಾ ಮಸೀದಿಯ ಆರ್ ಸಿಸಿ ಕಾಮಗಾರಿ ವೀಕ್ಷಣೆ‌ ಮಾಡಿದ ನಂತರ ಮಾತನಾಡಿದ ಅವರು ಈ ಮಸೀದಿಯ ನವೀಕರಣ ಮತ್ತಿತರ ಕಾಮಗಾರಿಗೆ ಕನಿಷ್ಟ ೧೦ಲಕ್ಷ ಖರ್ಚಾಗಲಿದೆ ಎಂದು   ಪಂಚ ಕಮೀಟಿಯವರು ತಿಳಿಸಿದ್ದಾರೆ. ಈಗಾಗಲೇ ಹೊರಗಡೆಯಿಂದ ಸಾಲ ತಂದು ಕಾಮಗಾರಿ ನಡೆಸಲಾಗುತ್ತಿರುವುದು ಗಮನಕ್ಕೆ ಬಂದಿದೆ.  ಹೆಚ್ಚಿನ ಅನುದಾನದ ನೆರವು ಕೋರಿರುವುದರಿಂದ ಶೀಘ್ರವೇ ಅನುದಾನ ದೊರಕಿಸುವ ಕೆಲಸ ಮಾಡುವುದಾಗಿ ಹೇಳಿದರು.  ಈ ಸಂದರ್ಭದಲ್ಲಿ ಪಂಚ ಕಮಿಟಿ ಅದ್ಯಕ್ಷ ಇಬ್ರಾಹಿಂಸಾಬ ಬಿಸರಳ್ಳಿ, ಪಟ್ಟಣ ಪಂಚಾಯತ್ ಸದಸ್ಯ ಹೊನ್ನೂರಸಾಬ ಬೈರಾಪುರ, ಮಾಬುಸಾಬ ಹಣಗಿ, ಮರ್ದಾನಸಾಬ ಹಿರೇಮಸೂತಿ,  ರಶೀದಾಬ, ಕಬೀರಸಾಬ, ಬಾಬ ಪಟೇಲ, ಶರೀಪಸಾಬ, ಹಾಜಿ ಕುತ್ಬುದ್ದೀನ್ ಸಾಬ  ಸೇರಿದಂತೆ ಇತರರು ಉಪಸ್ಥಿತರಿದ್ದರು.
Please follow and like us:
error