ಜಾನದಾಹಿ ಇಂಗ್ಲೀಷ್ ಮಿಡಿಯಂ ಸ್ಕೂಲ್ ವತಿಯಿಂದ ಗಾಂಧಿಜಯಂತಿ ಅಂಗವಾಗಿ ಸ್ವಚ್ಛ ಭಾರತ ಅಭಿಯಾನ
ಯಲಬುರ್ಗಾ, ೦೩- ತಾಲೂಕಿನ ತಳಕಲ್ಲ ಗ್ರಾಮದಲ್ಲಿ ಜ್ಞಾನದಾಹಿ ಇಂಗ್ಲೀಷ್ ಮಿಡಿಯಂ ಸ್ಕೂಲ್ ವತಿಯಿಂದ ಮಹಾತ್ಮ ಗಾಂಧಿಯವರ ಜನ್ಮ ದಿನದ ಅಂಗವಾಗಿ ಸ್ವಚ್ಛ ಭಾರತ ಅಭಿಯಾನ ಕಾರ್ಯಕ್ರಮ ಆಯೋಜಿಸಲಾಗಿತ್ತು.
ತಳಕಲ್, ತಳಬಾಳ, ಭಾನಾಪುರ ಮತ್ತು ಲಕಮಾಪುರ ಸೇರಿದಂತೆ ೮ ಹಳ್ಳಿಗಳಲ್ಲಿ ಪರಿಸರ ಹಾಗೂ ಗಾಂಧಿಯವರ ಕನಸಿನ ಕಸಮುಕ್ತ ಸ್ವಚ್ಛ ಭಾರತ ನಿರ್ಮಾಣಕ್ಕಾಗಿ ಮನೆ-ಮನೆಗೆ ಕರ ಪತ್ರ ನೀಡಿ ಜಾಗೃತಿ ಮೂಡಿಸಲಾಯಿತು.
ಶೌಚಾಲಯ ಕಟ್ಟಿಸಿ-ಶೌಚಾಲಯವನ್ನು ಬಳಸಿ,ನಮ್ಮ ಮನೆಯ ಸುತ್ತ-ಮುತ್ತ ನೀರು ನಿಲ್ಲಲೂ ಬಿಡಬೇಡಿ, ನಮ್ಮ ಶಾಲೆ,ನಮ್ಮ ದೇವಸ್ಥಾನ, ನಮ್ಮ ರಸ್ತೆ ನಮ್ಮ ಮೈದಾನದಲ್ಲಿ ಕಸಹಾಕಲು ಬಿಡುವದಿಲ್ಲ ಸೇರಿದಂತೆ ಹಲವಾರು ಘೋಷಣೆಗಳೊಂದಿಗೆ ಧ್ವನಿವರ್ಧಕದ ಮೂಲಕ ಜಾಗೃತಿ ಮೂಡಿಸಲಾಯಿತು.
ಸನ್ಮಾನ: ಈ ಸಂದರ್ಭದಲ್ಲಿ ತಳಕಲ್ಲ ಗ್ರಾಮ ಪಂಚಾಯತ ೪ ಜನ ಪೌರ ನೌಕರರಿಗೆ ಮಾಸ್ಕ ಹಾಗೂ ಶಾಲ್ನ್ನು ಹೊದಿಸಿ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷ ಸಂಜೀವಮೂರ್ತಿ ದೇಶಪಾಂಡೆ, ರವಿಕುಮಾರ ಪಠವಾರಿ, ಅನೀಲ ಸಿಂಗ್, ರಾಮಮೂರ್ತಿ ನಾಯಕ ಹಾಗೂ ಶಾಲಾ ಶಿಕ್ಷಕರು ಮತ್ತು ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
ಜಾನದಾಹಿ ಇಂಗ್ಲೀಷ್ ಮಿಡಿಯಂ ಸ್ಕೂಲ್ ವತಿಯಿಂದ ಸ್ವಚ್ಛ ಭಾರತ ಅಭಿಯಾನ
Please follow and like us: