ಜಾತ್ರಾ ಮಹೋತ್ಸವಕ್ಕೆ ಆಗಮಿಸುವ ಭಕ್ತರಿಗಾಗಿ ಉಚಿತ ಆರೋಗ್ಯ ಮತ್ತು ವೈದ್ಯಕೀಯ ಸೇವೆ

ಕೊಪ್ಪಳ : ನಗರದ ಶ್ರೀ ಗವಿಸಿದ್ದೇಶ್ವರ ಜಾತ್ರಾಮಹೋತ್ಸವ ಜನವರಿ ೨೨ ರಂದು ಜರುಗುವ ಪ್ರಯುಕ್ತ ಆಗಮಿಸುವ ಲಕ್ಷಾಂತರ ಭಕ್ತರಿಗೆ ಉಚಿತ ವೈದ್ಯಕೀಯ ಸೇವೆಯನ್ನು ಕಲ್ಪಿಸುತ್ತಿದೆ. ವರ್ಷದಿಂದ ವರ್ಷಕ್ಕೆ ಭಕ್ತರ ಸಂಖ್ಯೆ ಹೆಚ್ಚುತ್ತಿದ್ದು ಶ್ರೀ ಮಠವು ಉಚಿತ ವೈದ್ಯಕೀಯ ಸೇವೆಗೆ ಹೆಚ್ಚು ಒತ್ತು ಕೊಟ್ಟಿದೆ. ಭಕ್ತಾದಿಗಳಲ್ಲಿ ಕಂಡು ಬಂದ ರೋಗಕ್ಕೆ ಅನುಗುಣವಾಗಿ ಪರಿಣಿತ ವೈದ್ಯರಿಂದ ಚಿಕಿತ್ಸೆ ಹಾಗೂ ಸಲಹೆಯನ್ನು ಕೊಡುವ ಕಾರ್ಯವನ್ನು ಮಾಡುತ್ತಿದೆ. ಕಳೆದ ವರ್ಷ ೨೦೧೮ರ ಜಾತ್ರೆಯಲ್ಲಿ ದಾಖಲೆಯ ಪ್ರಮಾಣದಲ್ಲಿ ರೋಗಿಗಳ ತಪಾಸಣೆ ಮಾಡಿ ಉಚಿತ ಚಿಕಿತ್ಸೆಯನ್ನು ಯಶಸ್ವಿಯಾಗಿ ನೀಡಲಾಗಿದೆ.

ಈ ವರ್ಷದ ಜಾತ್ರೆಗೆ ಆಗಮಿಸುವ ಭಕ್ತರ ಸಂಖ್ಯೆ ಹೆಚ್ಚಾಗುವ ನಿರೀಕ್ಷೆ ಇರುವುದರಿಂದ ಶ್ರೀ ಜಗದ್ಗುರು ಗವಿಸಿದ್ದೇಶ್ವರ ಆಯುರ್ವೇದ ಮಹಾವಿದ್ಯಾಲಯದ ಆಸ್ಪತ್ರೆ ಮತ್ತು ಕೊಪ್ಪಳ ವೈದ್ಯಕೀಯ ಮಹಾವಿದ್ಯಾಲಯ (ಕಿಮ್ಸ) ಮತ್ತು ಸ್ಥಳೀಯ ವೈದ್ಯಕೀಯ ಸಿಬ್ಬಂದಿಗಳ ಸಹಯೋಗದೊಂದಿಗೆ ಜಾತ್ರೆಗೆ ಬರುವಂತಹ ಭಕ್ತಾದಿಗಳಿಗೆ ಚಿಕಿತ್ಸೆಯನ್ನು ನೀಡಲಾಗುವುದು. ಇದರ ಜೊತೆಗೆ ಔಷಧಿಯ ವ್ಯವಸ್ಥೆ, ಪ್ರಥಮ ಚಿಕಿತ್ಸೆಯ ವ್ಯವಸ್ಥೆಯನ್ನು ಸಹ ಮಾಡಲಾಗಿದೆ. ವಿಶೇಷವಾಗಿ ಜಾತ್ರೆಯ ಆವರಣ, ಪ್ರಸಾದ ನಿಲಯ ಹಾಗೂ ಪೋಲಿಸ್ ಚೌಕಿ ಹತ್ತಿರ ಸದರಿ ವ್ಯವಸ್ಥೆಯನ್ನು ಮಾಡಲಾಗುತ್ತಿದ್ದು ೨೪ ಘಂಟೆ ತುರ್ತು ವೈದ್ಯಕೀಯ ಚಿಕಿತ್ಸೆ ಲಭ್ಯವಿರುತ್ತದೆ.

ಸದರಿ ಸೇವಾ ವ್ಯವಸ್ಥೆಯು ೨೧/೦೧/೨೦೧೯ ರಿಂದ ೦೪/೦೨/೨೦೧೯ ರವರೆಗೆ ಬೆಳಿಗ್ಗೆ ೮.೦೦ ಗಂಟೆಯಿಂದ ರಾತ್ರಿ ೧೦.೦೦ ಗಂಟೆಯವರೆಗೆ ಜಾರಿಯಲ್ಲಿರುತ್ತದೆ. ೧೦ ಗಂಟೆಯ ನಂತರ ಶ್ರೀ ಜಗದ್ಗುರು ಗವಿಸಿದ್ದೇಶ್ವರ ಆಯುರ್ವೇದ ಮಹಾವಿದ್ಯಾಲಯದ ಆಸ್ಪತ್ರೆಯಲ್ಲಿ ಚಿಕಿತ್ಸೆ ಲಭ್ಯವಿರುತ್ತದೆ. ಹಾಗೆಯೇ ಅಂಬುಲೆನ್ಸ ಸೇವೆ ಸಹ ೨೪ ಗಂಟೆ ಲಭ್ಯವಿರುತ್ತದೆ.

ಈ ಉಚಿತ ಆರೋಗ್ಯ ಮತ್ತು ವೈದ್ಯಕೀಯ ಸೇವೆಯಲ್ಲಿ ಆಯುರ್ವೇದ ಮಹಾವಿದ್ಯಾಲಯದ ೩೦ ವೈದ್ಯರು, ಸ್ನಾತಕೋತ್ತರ ವಿದ್ಯಾರ್ಥಿಗಳು ೧೦೦, ಕೊಪ್ಪಳ ವೈದ್ಯಕೀಯ (ಕಿಮ್ಸ) ಮಹಾವಿದ್ಯಾಲಯದ ಪರಿಣಿತ ೧೦ ವೈದ್ಯರು ಲಭ್ಯರಿರುತ್ತಾರೆ.

ಮಾಹಿತಿಗಾಗಿ ಡಾ ಗುರುರಾಜ್ – ೯೪೮೦೧೯೩೩೭೩, ಡಾ ಕೆ ಬಿ ಹಿರೇಮಠ – ೯೮೪೫೬೩೧೪೪೨, ಡಾ ಮಂಜುನಾಥ ಅಕ್ಕಿ- ೮೧೨೩೦೪೪೧೨೫, ಶ್ರೀ ಜಗದ್ಗುರು ಗವಿಸಿದ್ದೇಶ್ವರ ಆಯುರ್ವೇದ ಮಹಾವಿದ್ಯಾಲಯ ಆಸ್ಪತ್ರೆ ದೂರವಾಣಿ ಸಂಖ್ಯೆ ೦೮೫೩೯ -೨೨೧೯೮೯ ಹಾಗೂ ಅಂಬುಲೆನ್ಸ ವ್ಯವಸ್ಥೆಗಾಗಿ ಸಂಪರ್ಕಿಸುವ ದೂರವಾಣಿ ಸಂಖ್ಯೆ :-೯೭೪೦೪೦೮೦೬೫

Please follow and like us:
error