ಜನ ಮನಸೂರಗೊಂಡ ರಂಗಗೀತೆ ಕಾರ್ಯಕ್ರಮ

ಕೊಪ್ಪಳ : : ತಾಲ್ಲೂಕಿನ ಕೋಳೂರು ಗ್ರಾಮದಲ್ಲಿ ಇಂದು (23) ಸೈಡ್ ವಿಂಗ್ ಸಿನಿಮಾ ತಂಡ ಮತ್ತು ಪೃಥ್ವಿ ಫಿಲಂ ಇನ್ಸ್ಟಿಟ್ಯೂಟ್ ಕೊಪ್ಪಳ ಇವರ ವತಿಯಿಂದ ಹಮ್ಮಿಕೊಂಡಿದ್ದ ರಂಗಗೀತೆ ಕಾರ್ಯಕ್ರಮ ಜನ ಮನಸೂರೆಗೊಂಡಿತು.
ಈ ಸಂದರ್ಭದಲ್ಲಿ ಸೈಡ್ ವಿಂಗ್ ಸಿನಿಮಾ ನಟ ಅವಿನಾಶ್ ಶಠಮರ್ಷಣ ಮಾತನಾಡಿ ಸಿನಿಮಾ ಮತ್ತು ರಂಗಭೂಮಿ ಎರಡು ಒಂದೆ. ಕಲಾವಿದರು ಯಾವುದೇ ಪಾತ್ರ ಕೊಟ್ಟರೂ ಪಾತ್ರವನ್ನು ಜೀವಿಸಬೇಕು ಇಂತಹ ಪ್ರಜ್ಞೆಯನ್ನು ಕಲಾವಿದ ಬೆಳಸಿಕೊಳ್ಳಬೇಕು ಅದಕ್ಕೆ ಸೂಕ್ತ ತರಬೇತಿಯನ್ನು ಪಡೆದುಕೊಳ್ಳವುದು ಅವಶ್ಯಕ ಎಂದರು.
ಕೋಳೂರು ರಂಗನಾಥ ಮಾತನಾಡಿ ಸಾಂಸ್ಕೃತಿಕ ಸಿರಿತನವಿದ್ದಲ್ಲಿ ನೆಮ್ಮದಿಯ ಜೀವನ ಇರುತ್ತದೆ. ಪ್ರತಿಯೊಬ್ಬರಲ್ಲೂ ಅದನ್ನು ಬೆಳಸುವ, ಉಳಿಸುವ ಪ್ರಯತ್ನ ಮಾಡಬೇಕಾಗಿದೆ. ರಂಗಗೀತೆಗಳು ನಮ್ಮ ನೆಲದ ಸಾಂಸ್ಕೃತಿಕ ವೈಭವವನ್ನು ಪ್ರತಿನಿಧಿಸುತ್ತವೆ ಅವುಗಳ ಮೌಲ್ಯವನ್ನು ಜನಸಾಮಾನ್ಯರಲ್ಲಿ ಪರಿಚಯಿಸುವ ಅಗತ್ಯವಿದೆ ಎಂದರು.
ಕಾರ್ಯಕ್ರಮದಲ್ಲಿ ಶಿವಪುತ್ರಗೌಡ ನಿಡಶೇಸಿ, ಮುತ್ತಣ್ಣ ಬಾರಕೇರ, ದೇವೆಂದ್ರಪ್ಪ ಕಮ್ಮಾರ, ಮಾಲತೇಶ ಬೇವೂರು, ರುದ್ರಗೌಡ ನಿಡಶೇಸಿ, ಶಿವಪ್ಪ ಮಂಗಳೂರು, ನಿಂಗಪ್ಪ ಕಾಟ್ರಳ್ಳಿ ಸೇರಿದಂತೆ ಹಲವರು ಉಪಸ್ಥಿತಿತರಿದ್ದರು

Please follow and like us:
error