ಕೊಪ್ಪಳ  : ಸುಮಾರು ೧ ತಿಂಗಳ ಹಿಂದೆ ಕಲ್ಯಾಣ ನಗರದ   ಶಾಂತವೀರಪ್ಪ ಜೋಗಿನ್ ತಮ್ಮ ಮಹಡಿಯ ಮೇಲೆ ಭಾರಿ ಗಾತ್ರದ ಮೊಬೈಲ್ ಟವರ್ ಕುಳ್ಳಿರಿಸಲು ಪ್ರಯತ್ನಿಸಿದಾಗ ಕಲ್ಯಾಣನಗರದ ಜನ ಒಂದಾಗಿ ವಿರೋಧಿಸಿದಾಗ ಕ್ರೇನ್, ಜನರೇಟರ್‌ವುಳ್ಳ ವಾಹನಗಳನ್ನು ಎಟಿಸಿ ಟೆಲಿಕಾಂ ಇನ್‌ಫ್ರಾಸ್ಟ್ರಕ್ಚರ್ ಪ್ರೈ.ಲಿ. ಇಂಜಿನಿಯರ್ ಮಂಜುನಾಥ ಎ ಅವರು ವಾಪಸ್ ಕಳುಹಿಸಿದರು. ನಂತರ ದಿ:೧೩-೦೪-೨೦೨೧ ಯುಗಾದಿ ಪಾಢ್ಯದಂದು ಜನರು ಹಬ್ಬದ ಸಂಭ್ರಮದಲ್ಲಿದ್ದಾಗ ಟವರ್‌ನ್ನು ಫಿಟ್ ಮಾಡಿರುತ್ತಾರೆ. ದಿ:೧೭-೦೪-೨೦೨೧ರಂದು ಜನರೇಟರ್ ಕುಳ್ಳಿರಿಸಲು, ಅದರ ಕಾರ್ಯ ಪ್ರಾರಂಭ ಮಾಡಲು ದೊಡ್ಡ ದೊಡ್ಡ ವಾಹನಗಳು ಮತ್ತು ಕ್ರೇನ್‌ಗಳನ್ನು ತಂದಾಗ ಜನ ಮಹಡಿ ಹತ್ತಿ ಕಂಪನಿಯ ವಿರುದ್ಧ ಜೋಗಿನ್ ಅವರ ವಿರುದ್ಧ ಘೋಷಣೆಗಳನ್ನು ಹಾಕಿದ್ದಾರೆ. ಅದನ್ನು ಒಂದು ಟಿ.ವಿ. ಚಿತ್ರೀಕರಿಸಿದೆ. ನಂತರ ಪ್ರತಿ ದಿನವು ಸಂಜೆ ೬:೩೦ಕ್ಕೆ ಹೋರಾಟಗಾರರೆಲ್ಲ ಸೇರಿ ದಿನಾಲೂ ಚರ್ಚಿಸುತ್ತಾರೆ. ನಗರಸಭೆಯ ಆಯುಕ್ತರಿಗೆ ಹೋರಾಟ ಸಮಿತಿ ಟವರ್ ಕೆಲಸ ನಿಲ್ಲಿಸಲು ವಿನಂತಿಸಿದಾಗ ಅವರು ಸ್ಪಂಧಿಸಿದ್ದಾರೆ. ಆದರೆ ಎಟಿಸಿ ಕಂಪನಿಯವರು ಟವರ್ ನಿರ್ಮಾಣವನ್ನು ಮುಂದುವರೆಸಿದಾಗ ಜನ ಪ್ರತಿಭಟಿಸಿದ್ದು ಇರುತ್ತದೆ. ಮಾನ್ಯ ಜಿಲ್ಲಾಧಿಕಾರಿಗಳಿಗೂ ಮನವಿ ಸಲ್ಲಿಸಲಾಗಿದೆ. ವೈಜ್ಞಾನಿಕ ವಿವರಣೆ ಕೊಡಲು ಜಿಲ್ಲಾಧಿಕಾರಿಗಳು ತಿಳಿಸಿದಾಗ ಅವರ ಮೊಬೈಲಿನ ವಾಟ್ಸಪ್‌ಗೆ ವೈಜ್ಞಾನಿಕ ವಿವರಗಳನ್ನು ಹೋರಾಟ ಸಮಿತಿ ಸಂಗ್ರಹಿಸಿ ಕಳುಹಿಸಿದೆ.   ಟವರ್‌ಗಳಿಂದ ಹೊರಟ ಅಲೆಗಳು ಅಥವಾ ತರಂಗಗಳು ಅಪಾಯಕಾರಿಯಾಗಿದ್ದು, ಮಕ್ಕಳಲ್ಲಿ ಬುದ್ಧಿಮಾಂದ್ಯತೆಗೆ, ಮಾನಸಿಕ ಕಿರಿಕಿರಿಗೆ, ಬ್ರೇನ್‌ಟ್ಯೂಮರ್‌ಗೆ ನಂತರ ಕೊನೆಗೆ ಕ್ಯಾನ್ಸ್‌ರಿಗೆ ಕಾರಣವಾಗುತ್ತೆಂದು ವಿಜ್ಞಾನಿಗಳು ದೃಢಪಡಿಸಿದ್ದಾರೆ. ಅಲ್ಲದೆ ಪುರುಷರ ಪುರುಷತ್ವಕ್ಕೂ ಧಕ್ಕೆ ಬರಲಿದೆ. ಗರ್ಭಿಣಿ ಹೆಂಗಸರಿಗೆ ತುಂಬಾ ಅಪಾಯ ಕಾದಿದೆ.

ಈಗಾಗಲೇ ಚನ್ನಬಸವನಗರದವರು ಎಟಿಸಿ ಕಂಪನಿ ಮೋಬೈಲ್ ಟವರ್ ಕುಳ್ಳಿರಿಸಲು ಹೋದಾಗ ವಿರೋಧಿಸಿದ್ದಾರೆ. ಕಲ್ಯಾಣ ನಗರದ ಪ್ರಶಾಂತ್ ರಾಯ್ಕರ್ ತಮ್ಮ ಮನೆಯ ಮುಂದೆ ಕುಳ್ಳಿರಿಸಲು ಹೋದಾಗ ಏಕಾಕಿಯಾಗಿ ವಿರೋಧಿಸಿದ್ದಾರೆ. ಕಲ್ಯಾಣ ನಗರದ ಕಂಟ್ರ್ಯಾಕ್ಟರ್ ರಾಮಣ್ಣ ಕಲ್ಲಾನವರ್ ಹಾಗೂ ಇನ್ನೊಬ್ಬ ನೌಕರರು ತಮ್ಮ ಹೊಸ ಮನೆಯ ಮೇಲೆ ಕುಳ್ಳಿರಿಸಲು ಬಂದಾಗ ವಿರೋಧಿಸಿರುತ್ತಾರೆ. ಕಲ್ಯಾಣ ನಗರದಲ್ಲಿ ಕುಳ್ಳಿರಿಸುವ ಟವರ್‌ಗೆ ಅನೇಕ ಕಂಪನಿಗಳ ೬-ನೆಟವರ್ಕಗಳನ್ನು ಜೋಡಿಸಲಾಗುತ್ತದೆ.  ಇದರಿಂದ ರೇಡಿಯಶನ್ ಜಾಸ್ತಿಯಾಗುತ್ತದೆ.

ನಗರಸಭೆಯವರು, ಜಿಲ್ಲಾಡಳಿತ ಜನರಿಗೆ ಬೇಡವಾದದ್ದನ್ನು ಬೇಡ ಎಂದು ದೈರ್ಯವಾಗಿ ಹೇಳಬೇಕು. ವಸತಿ ಪ್ರದೇಶದಲ್ಲಿ ಕುಳ್ಳಿರಿಸಲು ಅವಕಾಶವಿಲ್ಲ. ಬೇರೆ ಬೇರೆ ರಾಜ್ಯಗಳ ಹೈಕೋರ್ಟ್‌ಗಳು ವಸತಿ ಪ್ರದೇಶದಲ್ಲಿ ಟವರ್ ನಿರ್ಮಿಸಲು ತೊಡಿಗಿದಾಗ ಅವುಗಳಿಗೆ ತಡೆ ಒಡ್ಡಿದ ನಿರ್ದೇಶನಗಳು ನಮ್ಮ ಮುಂದಿವೆ.

ಪತ್ರಿಕಾ ಮಾಧ್ಯಮ, ಟಿ.ವಿ ಮಾಧ್ಯಮ, ಜನರ ಬೆಂಬಲಕ್ಕೆ ಬರಬೇಕು. ವಿಜ್ಞಾನಿಗಳಿಂದ, ವಕೀಲರಿಂದ, ಪರಿಸರವಾದಿಗಳಿಂದ ಪ್ರತಿಕ್ರಿಯೆಗಳನ್ನು ಪಡೆದು ಜನರನ್ನು ಇನ್ನಷ್ಟು ಜಾಗೃತಗೊಳಿಸಬೇಕೆಂದು ಹಿರಿಯಹೋರಾಟಗಾರ ಅಲ್ಲಮಪ್ರಭು ಬೆಟ್ಟದೂರು ವಿನಂತಿಸಿಕೊಂಡಿದ್ದಾರೆ. ಈ ಕುರಿತು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ ಈ ಹೋರಾಟಕ್ಕೆ ಮಾಜಿ ನಗರಸಭಾ ಸದಸ್ಯರಾದ ಜಾಕೀರಹುಸೇನ ಕಿಲ್ಲೇದಾರ, ಕಲ್ಲನ್ನವರ ಸೇರಿದಂತೆ ಕಲ್ಯಾಣ ನಗರದ ಪ್ರಜ್ಞಾವಂತ ನಾಗರಿಕರು ಬೆಂಬಲಿಸಿದ್ದಾರೆ

 

 

Please follow and like us:
error