ಕೊಪ್ಪಳ : ಸಾಹಿತ್ಯ ಪರಿಷತ್ತು ಜನಸಾಮಾನ್ಯರ ಅಂತರಂಗದ ದೇಗುಲವಾಗಬೇಕು. ಸತ್ಯ, ನಿಸ್ವಾರ್ಥತೆ, ಜನಸ್ನೇಹಿ ನಡೆನುಡಿ , ಪರಿಶುದ್ದತೆ ಇರುವವು ಕೇಂದ್ರ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಬೇಕು ಎನ್ನುವುದು ಪ್ರಬುದ್ದ ಮತದಾರರ ಅನಿಸಿಕೆಯಾಗಿದೆ. ಪರಿಷತ್ತಿನ ಘನತೆ ಕಾಪಾಡಲು ಸಾಹಿತ್ಯವಲಯದವರೇ ಅಧ್ಯಕ್ಷರಾಗಬೇಕು. ಈ ನಿಟ್ಟಿನಲ್ಲಿ ನಾನು 16 ಕ್ಕೂ ಹೆಚ್ಚು ಕೃತಿಗಳು ಪ್ರಕಟವಾಗಿವೆ. ಸಂಘಟನಾತ್ಮಕವಾಗಿ ಸಾಹಿತ್ಯ ಪರಿಷತ್ತಿನಲ್ಲಿ ಕೆಲಸ ಮಾಡಿದ್ದೇನೆ. ನನ್ನನ್ನು ಆಯ್ಕೆ ಮಾಡಿ ಎಂದು ಸಾಹಿತ್ಯ ಪರಿಷತ್ತಿನ ರಾಜ್ಯ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಸಂಗಮೇಶ ಬಾದವಾಡಗಿ ಮನವಿ ಮಾಡಿದರು.
ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ದೇಶವಿದೇಶಗಳ ಕನ್ನಡ ಸಂಘಗಳ ಆಹ್ವಾನದ ಮೇರೆಗೆ ಭೇಟಿ ನೀಡಿ ಕನ್ನಡ ಸಾಹಿತ್ಯ ಭಾಷೆ ಸಂಸ್ಕೃತಿಯನ್ನು ಪರಿಯಿಸುವ ಕೆಲಸ ಮಾಡಿದ್ದೇನೆ. 2009ರ ಅವಧಿಯಲ್ಲಿ ಗೌರವ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದೇನೆ. ಕಳೆಸ ಸಲ ಚುನಾವಣೆಯಲ್ಲಿ ಸ್ಪರ್ಧಿಸಿ 3ನೇ ಸ್ಥಾನ ಪಡೆದುಕೊಂಡಿದ್ದೆ. ಈ ಸಲ ರಾಜ್ಯಾದ್ಯಂತ ಒಳ್ಳೆಯ ಬೆಂಬಲ ವ್ಯಕ್ತವಾಗಿದೆ. ಮೂಲತಃ ನಾನು ಕೊಪ್ಪಳ ಜಿಲ್ಲೆಯವನು ಇದನ್ನು ಪರಿಗಣಿಸಿ ಆಯ್ಕೆ ಮಾಡಿದರೆ ನಾಡಿನ ಜನಮಾನಸ ಹೃದಯದಲ್ಲಿ ಇದು ನಮ್ಮ ಸಂಸ್ಥೆ ಎಂದು ಹೆಮ್ಮೆ ಪಡುವ ರೀತಿಯಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.