ಜನಪರ ಯೋಜನೆಗಳು ಕಾಂಗ್ರೆಸ್‌ನಿಂದ ಮಾತ್ರ ಸಾದ್ಯ- ಶಾಸಕ ಕೆ. ರಾಘವೇಂದ್ರ ಹಿಟ್ನಾಳ

ಕೊಪ್ಪಳ :  ಬಿಜೆಪಿ ಸರ್ಕಾರವು ಜನತೆಗೆ ನೀಡಿದ ಆಶ್ವಾಸನೆಗಳ ವಿರುದ್ದ ಕಾರ್ಯ ಪ್ರವೃತ್ತರಾಗಿದ್ದಾರೆ ಚುನಾವಣ ಪೂರ್ವದಲ್ಲಿ ಪ್ರಧಾನಿ ಮೋದಿಯವರು ದೇಶದ ಜನತೆಗೆ ನೀಡಿದ ಆಶ್ವಾಸನೆಗಳ ವಿರುದ್ಧ ಆಡಳಿತ ನಡೆಸುತ್ತಿದ್ದು ಅಗತ್ಯೆ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೆರುತ್ತಿವೆ ಸ್ವಿಸ್ ಬ್ಯಾಂಕಿನಿಂದ ಕಪ್ಪು ಹಣತಂದು ಬಡವರ ಹಾಗೂ ರೈತರ ಖಾತೆಗೆ ರೂ. ೧೫ಲಕ್ಷ ಜಮಾ ಮಾಡುತ್ತೇನೆಂದು ಹೇಳಿ ಸರಿಸುಮಾರು ೭.೫ ವರ್ಷಗಳೆ ಗತಿಸಿ ಹೋಗಿವೆ. ದೇಶದ ಯುವಕರಿಗೆ ೨ ಕೋಟಿ ಉದ್ಯೋಗ ಕಲ್ಪಿಸಲಾಗುವುದು ಎಂದು ಹೇಳಿ ಚಾಯೇ ಪಕೋಡ ಮಾರಲು ಹೇಳಿತ್ತಿರುವುದು ಇವರ ಆಡಳಿತ ವೈಕರ್ಯ ನೋಡಿದರೆ ಇವರು ಸುಳ್ಳಿನ ಸರದಾರರಾಗಿದ್ದಾರೆ ದೇಶದ ರೈತರರಿಗೆ ಮಾರಕವಾಗಿರುವ ಕೃಷಿಕಾಯ್ದೆಗಳನ್ನು ಜಾರಿಗೆ ತಂದು ರೈತರ ಜೀವನದ ಜೊತೆಗೆ ಚಲ್ಲಾಟವಾಡುತ್ತಿದ್ದಾರೆ ಎಂದು ಶಾಸಕ ರಾಘವೇಂದ್ರ ಹಿಟ್ನಾಳ ಆಕ್ರೋಶ ವ್ಯಕ್ತಪಡಿಸಿದರು.

ಕ್ಷೇತ್ರದ ಹೊಸಳ್ಳಿ ಗ್ರಾಮದಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಕೆ. ರಾಘವೇಂದ್ರ ಹಿಟ್ನಾಳರವರು ಕಾಂಗ್ರೆಸ್ ಸರ್ಕಾರವು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಸೌಲಭ್ಯಗಳನ್ನು ಸಿಗುವಂತೆ ಯೋಜನೆಗಳನ್ನು ರೂಪಿಸಿ ಸರ್ವ ಜನರ ಕಲ್ಯಾಣಕ್ಕೆ ಬದ್ದಾವಾಗಿರುತ್ತದೆ. ಇಂದಿನ ಕೇಂದ್ರದ ಬಿಜೆಪಿ ಸರ್ಕಾರವು ಹಮ್ ದೋ ಹಮಾರೇ ದೋ ಸರ್ಕಾರ ಎಂದು ವ್ಯೆಂಗ್ಯವಾಗಿ ಹೇಳಿದರು. ಇದೆ ಸಂದರ್ಭದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷ ತೊರೆದು ಶಾಸಕರ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಮತ್ತು ಕಾಂಗ್ರೆಸ್ ಪಕ್ಷದ ತತ್ವ ಸಿದ್ದಾಂತಗಳನ್ನು ಒಪ್ಪಿ ಅನೇಕ ಯುವಕರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ರಾಜಮ್ಮ ವೆಂಕಟೇಶ ಉಪಾದ್ಯಕ್ಷ ಸುರೇಶ ಚಲುವಾದಿ ಗ್ರಾಪಂ ಸದಸ್ಯರುಗಲಾದ ರೇಣುಕಾ ಹುಲಿಯಪ್ಪ, ಕವಿತಾ ಹನುಮಂತಪ್ಪ, ಶರಿಫ್ ಸಾಬ ದೊಡ್ಡಮನಿ, ಮಾರುತಿ ಬಗನಾಳ ,ಲಕ್ಷ್ಮೀ ದೇವಿ ಭಜಂತ್ರಿ ನಗರಸಭಾ ಸದಸ್ಯ ಅಕ್ಬರಪಾಷ ಪಲ್ಟನ್ ಮುಖಂಡರುಗಳಾದ ಸಂಪತ್‌ರಾಜ ಮಣ್ಣೂರು ಮಂಜುನಾಥ ಕಲಾಲ್ ಪಂಚಾಕ್ಷರಯ್ಯ ಹಿರೇಮಠ ವಾಹಿದ್ ಪಾಷ ಹನುಮಂತ ಹಿರೇಮನಿ ಗಟ್ಟೆಪ್ಪ ಇಳಗೇರ ಬೀಬಿಜಾನ್ ಶಿವರಾಜ್ ಪುರದ ಸದ್ದಾಂ ಹುಸೇನ್ ಇನ್ನೂ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.

Please follow and like us:
error