ಜನಪದ ಕಲೆಗಳ ರಕ್ಷಣೆಗೆ ಪರಿಷತ್ ಬದ್ಧ : ಡಾ. ಬಾಲಾಜಿ

ಕೊಪ್ಪಳ, ಎ. ೦೧: ರಾಜ್ಯದಲ್ಲಿ ಜನಪದ ಮತ್ತು ಜನಪದರನ್ನು ಉಳಿಸಲು ಕನ್ನಡ ಜಾನಪದ ಪರಿಷತ್ ಬದ್ಧವಾಗಿದೆ ಎಂದು ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಡಾ. ಎಸ್. ಬಾಲಾಜಿ ಹೇಳಿದರು.
ಅವರು ನಗರದ ಸಿಪಿಎಸ್ ಶಾಲೆಯಲ್ಲಿ ಕೊಪ್ಪಳ ತಾಲೂಕ ಕನ್ನಡ ಜಾನಪದ ಪರಿಷತ್ ನೂತನ ಪದಾದಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ಕಂಜರಿ ಭಾರಿಸುವ ಮೂಲಕ ಉದ್ಘಾಟಿಸಿದರು.
ಜಾನಪದ ಎಂದರೆ ಕೇವಲ ಸಂಗೀತವಲ್ಲ ಅದರಲ್ಲಿ ಕಾವ್ಯ, ಗಾಯನ, ನೀತಿ, ಆಹಾರ, ಆರೋಗ್ಯ, ಕ್ರೀಡೆಯ ಜೊತೆಗೆ ನೈತಿಕತೆಯ ಮೌಲ್ಯ ಒಳಗೊಂಡಿದೆ, ಸರಕಾರ ಅಗತ್ಯಕ್ಕೆ ತಕ್ಕಷ್ಟು ಜನಪದ ಕಲೆಗಳಿಗೆ ಪ್ರೋತ್ಸಾಹ ನೀಡುತ್ತಿಲ್ಲ, ಜನಪದರಿಗೆ ೫೦೦೦ ಮಾಶಾಶನ ಕೊಡಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಜಿಲ್ಲಾ ಕನ್ನಡ ಜಾನಪದ ಪರಿಷತ್ ಅಧ್ಯಕ್ಷ ಮಂಜುನಾಥ ಜಿ. ಗೊಂಡಬಾಳ ಅವರು, ವಿಕಾಸಕ್ಕಾಗಿ ಜಾನಪದ ಹೆಸರಲ್ಲಿ ಪ್ರತಿ ಶಾಲೆಯಲ್ಲಿ ಜನಪದ ಕಲೆಗಳ ಕುರಿತು ಅರಿವು ಮೂಡಿಸುವ, ಕಲಿಸುವ ಮತ್ತು ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ, ಕೊಪ್ಪಳ ತಾಲೂಕ ನೂತನ ಪದಾದಿಕಾರಿಗಳು ಅತ್ಯಂತ ಕ್ರಿಯಾಶೀಲವಾಗಿದ್ದು ಖಮಡಿತ ಜನಪದದ ಹೆಚ್ಚು ಕೆಲಸಗಳು ಆಗುತ್ತವೆ ಎಂದರು.
ಕನ್ನಡ ಜಾನಪದ ಪರಿಷತ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಉಮೇಶ ಸುರ್ವೆ ಪ್ರಾಸ್ತಾವಿಕವಾಗಿ ಮಾತನಾಡಿದರು, ನೂತನ ಅಧ್ಯಕ್ಷ ಹನುಮಂತಪ್ಪ ಕುರಿ ತಮ್ಮ ಜವಾಬ್ದಾರಿಯನ್ನು ಅತ್ಯಂತ ಉತ್ತಮ ರೀತಿಯಲ್ಲಿ ನಿರ್ವಹಿಸುವದಾಗಿ ಹೇಳಿದರು. ಅಲ್ಲದೇ ಪ್ರತಿ ಶನಿವಾರ ಒಂದು ಕಾರ್ಯಕ್ರಮ ಆಯೋಜಿಸುವ ಮೂಲಕ ಮಕ್ಕಳಿಗೆ ಶೈಕ್ಷಣಿಕ ಚಟುವಟಿಕೆಗೆ ಪೂರಕ ವಾತಾವರಣ ನಿರ್ಮಾಣ ಮಾಡಲಾಗುವದು ಎಂದರು.
ಶಾಲೆಯ ಮುಖ್ಯೋಪಾದ್ಯಾಯ ಬೀರಪ್ಪ ಅಂಡಗಿ ಮಾತನಾಡಿದರು. ವೇದಿಕೆಯಲ್ಲಿ ಜಿಲ್ಲಾ ವಿಕಲಚೇತನರ ಸಂಘದ ಖಜಾಂಚಿ ಕಾಸಿನಾಥ ಸಿರಿಗೇರಿ, ಶಿಕ್ಷಕರ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷೆ ಬಾಲನಾಗಮ್ಮ, ಬಿಆರ್‌ಪಿ ಶರಣಪ್ಪ ರಡ್ಡೇರ್, ಮಂಜುನಾಥ ಪೂಜಾರ, ಪೂರ್ಣಿಮಾ ಪಟ್ಟಣಶೆಟ್ಟಿ, ಅಣ್ಣಪ್ಪ ಹಳ್ಳಿ, ಫರೀದಾ ಬೇಗಂ, ಕೊಟ್ರೇಶ್ ಚನ್ನಳ್ಳಿ, ರಾಮು ಪೂಜಾರ ಇತರರು ಇದ್ದರು. ನೂತನ ಪದಾದಿಕಾರಿಗಳಿಗೆ ಪದಪತ್ರ ನೀಡುವ ಮೂಲಕ ಪದಗ್ರಹಣ ಮಾಡಲಾಯಿತು. ಭಾರತಿ ಹವಳೆ ಪ್ರಾರ್ಥಿಸಿದರು, ಸುರೇಶ ಕಂಬಳಿ ನಿರೂಪಿಸಿದರು, ಶರಣಪ್ಪ ರಡ್ಡೇರ್ ವಂದಿಸಿದರು.
ಪದಾಧಿಕಾರಿಗಳು : ಹನುಮಂತಪ್ಪ ಕುರಿ (ಅಧ್ಯಕ್ಷ), ಬೀರಪ್ಪ ಅಂಡಗಿ (ಗೌರವ ಅಧ್ಯಕ್ಷ), ಬಾಲನಾಗಮ್ಮ ಡಿ. (ಪ್ರ. ಕಾರ್ಯದರ್ಶಿ), ಶರಣಪ್ಪ ರಡ್ಡೇರ್ (ಖಜಾಂಚಿ), ಉದಯಕುಮಾರ್ (ಜಂಟಿ ಕಾರ್ಯದರ್ಶಿ), ಸುರೇಶ ಕಂಬಳಿ (ಪತ್ರಿಕಾ ಕಾರ್ಯದರ್ಶಿ), ಮಂಜುನಾಥ ಪೂಜಾರ್ (ಸಂಚಾಲಕರು), ಅಣ್ಣಪ್ಪ ಹಳ್ಳಿ (ಸಂ. ಕಾರ್ಯದರ್ಶಿ), ಭಾರತಿ ಹವಳೆ, ಪೂರ್ಣಿಮಾ ಪಟ್ಟಣಶೆಟ್ಟಿ, ಫರೀದಾ ಬೇಗಂ,

Please follow and like us:
error