ಜನತಾ ಕರ್ಪ್ಯೂಗೆ ಜಿಲ್ಲೆ ಬಹುತೇಕ ಸ್ತಬ್ಧ

ಅನಾವಶ್ಯಕವಾಗಿ ಅಡ್ಡಾಡುತ್ತಿರುವ ಸವಾರರಿಗೆ ದಂಡ ವಿಧಿಸಿದ ಪೋಲಿಸರು

Kannadanet NEWS ಕೊಪ್ಪಳ : ನಿನ್ನೆ ರಾತ್ರಿಯಿಂದ ಆರಂಭವಾಗಿರುವ ಜನತಾ ಕರ್ಪ್ಯೂಗೆ ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಿನ್ನೆ ರಾತ್ರಿ ನಿಯಮ ಮೀರಿ ತೆರೆದಿದ್ದ ಅಂಗಡಿಗಳನ್ನು ಸೀಜ್ ಮಾಡುವ ದಂಡ ಹಾಕುವ ಕೆಲಸ ನಡೆಯಿತು. ಇಂದು ಬೆಳಿಗ್ಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಿದ್ದರಿಂದ ಮಾರುಕಟ್ಟೆಯಲ್ಲಿ ಬಹಳಷ್ಟು ಸಂಖ್ಯೆ ಜನರು ಸೇರಿದ್ದರು.  10 ಗಂಟೆಯವರೆಗೆ ಅವಕಾಶ ನೀಡಿದ್ದರಿಂದ ಅಗತ್ಯ ವಸ್ತುಗಳ ಖರೀದಿ ಭರದಿಂದ ಸಾಗಿತ್ತು. ಇಂದು ಬೆಳಿಗ್ಗೆ ಹಂಪಿ ಎಕ್ಸಪ್ರೆಸ್ ನಿಂದ ನೂರಾರು ಜನ ಕಾರ್ಮಿಕರು, ಜನಸಾಮಾನ್ಯರು ಬೆಂಗಳೂರಿನಿಂದ ಬಂದಿದ್ದು ಕಂಡು ಬಂತು. ಮಾಸ್ಕ ಧರಿಸಿದ್ದರಾದರೂ ಸಾಮಾಜಿಕ  ಅಂತರ ಕಾಣೆಯಾಗಿತ್ತು. ಬೆಳಿಗ್ಗೆ 10 ಗಂಟೆಯ ನಂತರವೂ ತೆರೆದಿದ್ದ ಮೊಬೈಲ್ ಅಂಗಡಿ , ಬಟ್ಟೆ ಅಂಗಡಿಯನ್ನು ಅಶೋಕ ಸರ್ಕಲ್ ನಲ್ಲಿ ತಹಶೀಲ್ದಾರ ಸೀಜ್ ಮಾಡಿದರು. ಜನಸಂಚಾರ ಸಂಪೂರ್ಣ ನಿಯಂತ್ರಗೊಂಡಿದೆಯಾದರೂ ದ್ವಿಚಕ್ರವಾಹನಗಳ ಸವಾರರ ಬಹಳಷ್ಟು ಸಂಖ್ಯೆಯಲ್ಲಿ ಕಂಡು ಬಂತು. ಅನಾವಶ್ಯಕವಾಗಿ ಅಡ್ಡಾಡುತ್ತಿರುವ ಸವಾರರಿಗೆ ಪೋಲಿಸರು ದಂಡ ವಿಧಿಸಿದರು.

Please follow and like us:
error