ಚುನಾವಣಾಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಸಿದ ವೀಕ್ಷಕರು

ಕೊಪ್ಪಳ ಏ. : ಕೊಪ್ಪಳ ಲೋಕಸಭೆಗೆ ಚುನಾವಣೆ ನಡೆಯುತ್ತಿದ್ದು ನೀತಿ ಸಂಹಿತೆ

ಜಾರಿಯಲ್ಲಿರುವುದರಿಂದ ಕಟ್ಟುನಿಟ್ಟಾದ ಕ್ರಮಗಳನ್ನು ಕೈಗೊಂಡ ಬಗ್ಗೆ ಚುನಾವಣಾಧಿಕಾರಿಗಳು ಹಾಗೂ ವಿವಿಧ ನೋಡಲ್ ಅಧಿಕಾರಿಗಳಿಂದ ಚುನಾವಣಾ ಸಾಮಾನ್ಯ ವೀಕ್ಷಕರಾದ ರಣ ವಿಜಯ ಯಾದವ್ ಮತ್ತು ಪೊಲೀಸ್ ವೀಕ್ಷಕರಾದ ಡಿವೈ ಮಾಂಡಲಿಕರವರು ಮಾಹಿತಿ ಪಡೆದರು.
ಏಪ್ರಿಲ್ 06ರಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸಭೆ ನಡೆಸಿದ ವೇಳೆ ಜಿಲ್ಲಾಧಿಕಾರಿ ಹಾಗೂ ಚುನಾವಣಾಧಿಕಾರಿ ಪಿ. ಸುನೀಲ್ ಕುಮಾರ್‍ರವರು ಜಿಲ್ಲೆಯಲ್ಲಿ ಚುನಾವಣಾ ನೀತಿ ಸಂಹಿತೆ ಹಾಗೂ ಉಲ್ಲಂಘನೆ ಬಗ್ಗೆ ತಿಳಿಸುತ್ತಾ ಫ್ಲೈಯಿಂಗ್ ಸ್ಕ್ವಾಡ ತಂಡದವರು 12 ಹಾಗೂ ಸ್ಟಾಟಿಕ್ ಸರ್ವೆಲೆಂನ್ಸ್ ತಂಡದವರು 3 ಒಟ್ಟು 15 ಮಾದರಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳನ್ನು ದಾಖಲಿಸಿದ್ದಾರೆ. ಇವುಗಳಲ್ಲಿ ಪೂರ್ವಾನುಮತಿ ಪಡೆಯದೇ ಮೀಟಿಂಗ್ ನಡೆಸಿರುವುದು, ಮುದ್ರಿತರ ಹೆಸರಿಲ್ಲದೆ ಧ್ವಜಗಳನ್ನು ಬಳಸಿರುವುದು ಹಾಗೂ ಸಾರ್ವಜನಿಕ ಸ್ಥಳದಲ್ಲಿ ಧ್ವಜಗಳನ್ನು ಪ್ರದರ್ಶಿಸಿರುವುದು ಮತ್ತು ಚಿಕ್ಕ ಮಕ್ಕಳನ್ನು ರ್ಯಾಲಿಯಲ್ಲಿ ಬಳಸಿರುವ ಪ್ರಕರಣಗಳಾಗಿವೆ.
ಈ ಸಮಯದಲ್ಲಿ ಅಬಕಾರಿ ಉಲ್ಲಂಘನೆ ಪ್ರಕರಣಳು ಒಟ್ಟು 217 ಗಳಾಗಿದ್ದು, 10183.61 ಲೀ. ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ. ಇದರ ಅಂದಾಜು ಮೊತ್ತ 28,28,332 ರೂ. ಗಳಾಗುತ್ತದೆ. ಈ ಪ್ರಕರಣಗಳಿಗೆ ಸಂಬಂಧಿಸಿದಂತೆ 19 ದ್ವಿಚಕ್ರವಾಹನ, 2 ಲಾರಿಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಇದರ ಅಂದಾಜು ಮೊತ್ತ 26,98,000 ರೂ. ಗಳಾಗುತ್ತದೆ. ಪೊಲೀಸ್ ಉಲ್ಲಂಘನೆ ಪ್ರಕರಣಗಳು ಒಟ್ಟು 33 ಇದ್ದು, 116.44 ಲೀ. ಮದ್ಯ ವಶಪಡಿಸಿಕೊಳ್ಳಲಾಗಿದೆ. ಇದರ ಅಂದಾಜು ಮೊತ್ತ 37,891.54 ರೂ. ಗಳಾಗುತ್ತದೆ ಎಂದು ತಿಳಿಸಿದರು.
ಸಿವಿಜಿಲ್ ಬಳಕೆಯಲ್ಲಿ ಒಟ್ಟು 62 ದೂರುಗಳು ಸ್ವೀಕೃತವಾಗಿದ್ದು, ಇವುಗಳಲ್ಲಿ 19 ಪ್ರಕರಣಗಳು ನಿಜ ಪ್ರಕರಣಗಳಾಗಿವೆ. ಇನ್ನೂಳಿದ 43 ಪ್ರಕರಣಗಳು ಸುಳ್ಳು ಹಾಗೂ ಸತ್ಯಕ್ಕೆ ದೂರವಾದ ಪ್ರಕರಣಗಳಾಗಿರುತ್ತವೆ. ಸರಿಯಾದ 19 ಪ್ರಕರಣಗಳನ್ನು ಈಗಾಗಲೇ ವಿಲೇ ಮಾಡಲಾಗಿದೆ. ಜಿಲ್ಲಾಧಿಕಾರಿಗಳ ಕಾರ್ಯಾಲಯದಲ್ಲಿ ಸ್ಥಾಪಿಸಲಾದ ಜಿಲ್ಲಾ ಸಂಪರ್ಕ ಕೇಂದ್ರ-1950 ವಿಭಾಗದಲ್ಲಿ 65 ದೂರುಗಳು ದಾಖಲಾಗಿದ್ದು, ಅದರಲ್ಲಿ 62 ವಿಲೇಗೊಳಿಸಲಾಗಿದೆ. ಮೂರು ದೂರುಗಳು ಮಾತ್ರ ಬಾಕಿ ಇರುತ್ತವೆ. ಎನ್.ಜಿ.ಆರ್.ಎಸ್. ಮುಖಾಂತರ ಒಟ್ಟು 70 ಪ್ರಕರಣಗಳು ದಾಖಲಾಗಿದ್ದು ಅದರಲ್ಲಿ 67 ವಿಲೇಗೊಳಿಸಲಾಗಿದೆ. ಮೂರು ಮಾತ್ರ ಬಾಕಿ ಉಳಿದಿರುತ್ತವೆ ಎಂದು ತಿಳಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಾಲಚಂದ್ರ, ಉಪ ಅರಣ್ಯ ಸಂರಕ್ಷಣಾಧಿಕಾರಿ ಯಕ್ಷಪಾಲ ಕ್ಷೀರಸಾಗರ, ಪ್ರೊಬೇಷನರಿ ಐಎಎಸ್ ಅಧಿಕಾರಿ ಅಕ್ಷಯ್ ಶ್ರೀಧರ್ ಹಾಗೂ ಸಹಾಯಕ ಚುನಾವಣಾಧಿಕಾರಿಗಳು, ನೋಡಲ್ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.

Please follow and like us:
error