ಗ್ರಾಮ ಪಂಚಾಯತ್ ಚುನಾವಣೆ ಮುಂದೂಡಲು , ಹಾಲಿ ಸದ್ಯಸರನ್ನು ಮುಂದುವರಿಸಲು WPI ಮನವಿ

Koppal :  ಗ್ರಾಮ ಪಂಚಾಯತ್ ಚುನಾವಣೆ ಮುಂದೂಡಲು ಮತ್ತು ಹಾಲಿ ಸದ್ಯಸರನ್ನು ಮುಂದುವರಿಸಲು ಅಪರ ಜಿಲ್ಲಾಧಿಕಾರಿ  .ಎಂ. ಪಿ. ಮಾರುತಿ ಅವರಿಗೆ  ಮನವಿ ಸಲ್ಲಿಸಲಾಯಿತು.

ಸಂವಿಧಾನ 73 ನೇ ತಿದ್ದುಪಡಿ ಮೂಲಕ ಆಡಳಿತ ವಿಕೇಂದ್ರೀಕರಣದ ಆಶಯಗಳನ್ನು ಸಾಕಾರಗೋಳಿಸುವ ನಿಟ್ಟಿನಲ್ಲಿ ಪಂಚಾಯತ್‌ರಾಜ್‌ ವ್ಯವಸ್ಥೆಯನ್ನು ಇಡಿ ದೇಶಕ್ಕೆ ಮಾದರಿಯನ್ನಾಗಿ ತೋರಿಸಿಕೊಟ್ಟ ಕೀರ್ತಿ ಕರ್ನಾಟಕ ರಾಜ್ಯಕ್ಕೆ ಸಲ್ಲುತ್ತದೆ.ರಾಜ್ಯದ ಪಂಚಾಯತ್‌ ರಾಜ್‌ ವ್ಯವಸ್ಥೆಗೆ ತನ್ನದೆ ಆದ ಇತಿಹಾಸವಿದೆ. ಪ್ರಸ್ತುತ ಗ್ರಾಮ ಪಂಚಾಯತಿಗಳ ಐದು ವರ್ಷದ ಅವಧಿ ಇದೆ ಮೇ ತಿಂಗಳ ಅಂತ್ಯಗೊಳ್ಳಲಿದೆ.ಕೆಲವೋಂದು ಪಂಚಾಯಿತಿಗಳ ಅವಧಿ ಜೂನ್‌ ಮತ್ತು ಜುಲೈನಲ್ಲಿ ಮುಗಿಯಲಿದೆ.ಒಟ್ಟಾರೆ,ಮೇ ಮತ್ತು ಜೂನ್‌ ತಿಂಗಳಲ್ಲಿ ರಾಜ್ಯದ 6041 ಗ್ರಾಮ ಪಂಚಾಯಿತಿಗಳಿಗೆ ಸಾರ್ವತ್ರಿಕ ಚುನಾವಣೆ ನಡೆಯಬೇಕಿದೆ. ಕೋವಿಡ್‌-19 ಹಿನ್ನಲೆಯಲ್ಲಿ ಕನಿಷ್ಟ ಆರು ತಿಂಗಳು ಗ್ರಾಮಪಂಚಾಯಿತಿಗಳ ಚುನಾವಣೆ ಮುಂದೂಡುವುದು ಅನಿವಾರ್ಯವಾಗಿದೆ ಎಂಬುದು ರಾಜ್ಯ ಸರ್ಕಾರದ ವಾದವಾಗಿದೆ.ಆದರೆ ಇದಕ್ಕೆ ಪರ್ಯಾಯವಾಗಿ ಆಡಳಿತ ಸಮೀತಿ ಅಥವಾ ಆಡಳಿತಾಧಿಕಾರಿ ನೇಮಕ ಮಾಡುವುದು ಸೂಕ್ತವಲ್ಲ.ಅಲ್ಲದೇ ಸರ್ಕಾರದ ಈ ಧೋರಣೆ ಸಂವಿಧಾನ ಮತ್ತು ಪಂಚಾಯತ್‌ರಾಜ್‌ ಕಾಯ್ದೆಯ ಆಶಯಗಳಿಗೆ ತದ್ದಿರುದ್ಧವಾಗಿದೆ.ಸರ್ಕಾರದ ಈ ನಡೆಯನ್ನು ವೆಲ್ಫೇರ್‌ ಪಾರ್ಟಿ ಅಫ್‌ ಇಂಡಿಯಾ ಕೊಪ್ಪಳ ಜಿಲ್ಲಾ ಘಟಕವು ತೀವ್ರವಾಗಿ ಖಂಡಿಸುತ್ತದೆ.

ಈಗಾಗಲೇ ಕೋವಿಡ್‌-19 ನಿರ್ವಹಣೆ ದೃಷ್ಟಿಯಿಂದ ಗ್ರಾಮಪಂಚಾಯಿತಿಗಳಿಗೆ ಸಾಕಷ್ಟು ಹೊಣೆಗಾರಿಕೆ ನೀಡಲಾಗಿದೆ.ಇಂತಹ ಸ೦ದರ್ಭದಲ್ಲಿ ಚುನಾಯಿತ ಆಡಳಿತ ವ್ಯವಸ್ಥೆಯನ್ನು ದುರ್ಬಲಗೊಳಿಸಿದರೆ ಅಥವಾ ಚುನಾಯಿತ ಆಡಳಿತ ವ್ಯವಸ್ಥೆ ಇಲ್ಲದಂತೆ ಮಾಡಿ ಅದರ ಬದಲಿಗೆ ಆಡಳಿತ ಸಮೀತಿ ಇಲ್ಲವೇ ಆಡಳಿತಾಧಿಕಾರಿಗಳ ವ್ಯವಸ್ಥೆ ಜಾರಿಗೆ ತಂದರೇ ಕೋವಿಡ್‌-19 ನಿರ್ವಹಣೆಗೆ ಸಮರ್ಪಕ ವ್ಯವಸ್ಥೆ ಇಲ್ಲದೆ ಗ್ರಾಮೀಣ ಪ್ರದೇಶಗಳು ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ.ಇದರಿಂದಾಗುವ ಸಮಸ್ಯೆ ಅನಾನುಕೊಲತೆಗಳಿಗೆ ಸರ್ಕಾರವೇ ಹೋಣೆಯಾಗಬೇಕಾಗುತ್ತದೆ.

ಈ ಸಂಧರ್ಭದಲ್ಲಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಕೊಪ್ಪಳ ಜಿಲ್ಲಾಧ್ಯಕ್ಷರು ಆದಿಲ್ ಪಟೇಲ್,  ಜಿಲ್ಲಾ ಪ್ರಧಾನಿ ಕಾರ್ಯದರ್ಶಿ ಮೊಹಮ್ಮದ್ ಅಲೀಮುದ್ದೀನ್, ಜಿಲ್ಲಾ ಅಭಿರುದ್ಧಿ ಕಾರ್ಯದರ್ಶಿ ಇಜಾಜ್ ಶೈಖ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಅಬ್ದುಲ್ ಮುನಿರಾಬಾದ್,ತಾಲೂಕ ಕಾರ್ಯದರ್ಶಿ ಮಹೆಬೂಬ್ ಮಣ್ಣೂರ್  ಕೊಪ್ಪಳ ವಿಧಾನ ಸಭಾ ಕ್ಷೇತ್ರ ಮತ್ತಿತರು ಇದ್ದರು.

 

Please follow and like us:
error