ಗ್ರಾಮಗಳ ಸರ್ವಾಂಗೀಣ ಅಭಿವೃದ್ಧಿ ಹೆಚ್ಚಿನ ಆದ್ಯತೆ : ಶಾಸಕ ಕೆ. ರಾಘವೇಂದ್ರ ಹಿಟ್ನಾಳ

.
ಕೊಪ್ಪಳ  :  ೩೦೦ ಎಕರೆ ಪ್ರದೇಶ ಹೊಂದಿರುವ ಗಿಣಗೇರಿ ಕೆರೆಯನ್ನು ಪರಮ ಪೂಜ್ಯ ಅಭಿನವ ಗವಿಶ್ರೀಗಳ ಸಾರತ್ಯದಲ್ಲಿ ಶೀಘ್ರವೆ ಕೆರೆ ಅಬಿವೃದ್ಧಿ ಕಾಮಗಾರಿ ಕೈ ಗೊಳ್ಳಲಾಗುವುದು ಕೊಪ್ಪಳದ ಹಿರೇಹಳ್ಳಕ್ಕೆ ೬೭.೦೦ಕೋಟಿ ವೆಚ್ಚದಲ್ಲಿ ೯ಬಿಡ್ಜ್ ಕಂ ಬ್ಯಾರೆಜ್ ನಿರ್ಮಾಣ ಕಾಮಗಾರಿ ಭರದಿಂದ ಸಾಗಿದ್ದು ಕ್ಷೇತ್ರದ ನೀರಾವರಿಗೆ ಹೆಚ್ಚಿನ ಆದ್ಯತೆ ಈ ೮ ವರ್ಷ ಅವಧಿಯಲ್ಲಿ ಕೊಡಮಾಡಲಾಗಿದೆ. ಕೊಪ್ಪಳ ಹಾಗೂ ಭಾಗ್ಯನಗರ ಪಟ್ಟಣಕ್ಕೆ ೯೩.೦೦ಕೋಟಿ ವೆಚ್ಚದಲ್ಲಿ ಶಾಶ್ವತ ಕುಡಿಯುವ ನೀರಿನ ಸೌಲಭ್ಯಕ್ಕೆ ಶೀಘ್ರವೆ ಟೆಂಡರ್ ಪ್ರಕ್ರಿಯೆ ಕೈಗೆತ್ತಿಗೊಳ್ಳಲಾಗುವುದು ಪ್ರತಿ ಗ್ರಾಮಕ್ಕೂ ಸುಸಜ್ಜಿತ ಶಾಲಾ ಕೊಠಡಿ ಗ್ರಂಥಾಲಯ ಸಮುದಾಯ ಭವನ ಅಂಗನವಾಡಿ ಕಟ್ಟಡ ಗಳನ್ನು ನಿರ್ಮಾಣ ಮಾಡಲಾಗುವುದು ಎಂದು ಶಾಸಕ ರಾಘವೇಂದ್ರ ಹಿಟ್ನಾಳ ಹೇಳಿದರು

ಗೀಣಗೇರಾ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಗ್ರಾಮಗಳಾದ ಹಳೆಕನಾಕಪುರ ಕನಕಾಪುರತಾಂಡ ಗಿಣಗೇರಾ ಹೊಸಕನಕಾಪುರ ಬಸಾಪುರ ಕುಟಗನಹಳ್ಳಿ ಹಾಗೂ ಕಿಡದಾಳ ಗ್ರಾಮಗಳಲ್ಲಿ ಅಮದಾಜು ಮೊತ್ತ ರೂ ೩.೦೦ ಕೊಟಿಯ ಪ್ರಾಥಮಿಕ ಆರೋಗ್ಯ ಕಟ್ಟಡ ಆರ್ಯುವೇದ ಆಸ್ಪತ್ರೆ ಕಟ್ಟಡ ಉದ್ಘಾಟನೆ ರಾಪ್ಷ್ರೀಯ ಆಯುಷ ಅಭಿಯಾನದಡಿ ಆಯುಷ ಕಟ್ಟಡ ನಿರ್ಮಾಣ ಹಾಗೂ ವಿವಿಧ ಯೋಜನೆಗಳಡಿ  ಸಿಸಿ ರಸ್ತೆ ಚರಂಡಿ ಶಾಲಾ ಕೊಠಡಿ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೇರವೇರಿಸಿ ಮಾತನಾಡಿದ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ರವರು

ಕೊಪ್ಪಳ ಕ್ಷೇತ್ರ ಜನತೆಗೆ ರಕ್ತದ ಸೌಲಭ್ಯಕ್ಕಾಗಿ ರೆಡ್ ಕ್ರಾಸ್‌ವತಿಯಿಂದ ಆಯೋಜಿಸಿರುವ ಬ್ಲಡಬ್ಯಾಂಕ್ ಪ್ರಾರಂಭಿಸಲು ಶಾಸಕರ ಪ್ರದೇಶ ಅನುದಾನದಡಿಯಲ್ಲಿ ರೂ ೨೦.೦೦ಲಕ್ಷ ಮಂಜೂರು ಮಾಡಿಸಿ ಜನತೆಗೆ ರಕ್ತಕ್ಕಾಗಿ ಬೇರೆ ಊರಿಗೆ ಅಲೆದಾಡುವ ಬವಣೆ ತಪ್ಪಿಸಿ ನಗರದಲ್ಲೆಯೇ ರಕ್ತದ ಸೌಲಭ್ಯ ಕಲ್ಪಿಸಿ ಜನತೆಗೆ ಹೆಚ್ಚು ಅನುಕೂಲವಾಗಿದೆ. ಪ್ರತಿಯೊಬ್ಬ ಪಾಲಕರು ಈ ವರ್ಷ ಕೊವಿಡ್-೧೯ ಕಾರಣದಿಂದ ಮಕ್ಕಳಿಗೆ ಕೇವಲ ೦೫ ತಿಂಗಳು ಮಾತ್ರ ಶಾಲೆಯ ಪಾಠ ಲಬ್ಯವಾಗುತ್ತಿದ್ದು ಸ್ವತಃ ಮುತುವರ್ಜಿವಹಿಸಿ ಮನೆ ಪಾಠ ಮಾಡಿ ಮಕ್ಕಳ್ಳಿಗೆ ಪರೀಕ್ಚೆ ಸಿದ್ದರಾಗಲು ಆತ್ಮಸ್ಥೈರ್ಯ ಹೆಚ್ಚಿಸ ಬೇಕೆಂದು ಪಾಲಕರಿ ಹಾಗೂ ಪೋಷಕರಿಗೆ ಕರೆ ನೀಡಿದರು.


ಈ ಸಂದರ್ಭದಲ್ಲಿ  ಗ್ರಾಮ ಪಂಚಾಯತ್ ಅಧ್ಯಕ್ಷ ಲಕ್ಷ್ಮಣ ಡೊಳ್ಳಿನಿ ಜಿಪಂ ಸದಸ್ಯ ಗೂಳಪ್ಪ ಹಲಗೇರಿ ತಾಪಂ ಅದ್ಯಕ್ಷ ಬಾಲಚಂದ್ರನ್ ಎಪಿಎಮ್‌ಸಿ ಅದ್ಯಕ್ಷ ನಾಗರಾಜ ಚಳ್ಳೂಳ್ಳಿ ನಗರಸಭಾ ಸದಸ್ಯ ಅಕ್ಬರ ಪಾಷ ಪಲ್ಟನ್ ಗ್ರಾಪಂ ಉಪಾದ್ಯಕ್ಷೆ ಸುಶೀಲಮ್ಮ ಇಂದರಗಿ ಎಪಿಎಮ್‌ಸಿ ಸದಸ್ಯ ವಿಶ್ವನಾಥ ರಾಜೂ ಮುಖಂಡರುಗಳಾದ ಕೃಷ್ಣ ರೆಡ್ಡಿ ಗಲಬಿ ಪ್ರಸನ್ನ ಗಡಾದ ಪಂಪಣ್ಣ ಪೂಜಾರ ಕರಿಯಪ್ಪ ಮೇಟಿ ಸುಬ್ಬಣ್ಣ ಆಚಾರ ಲಕ್ಷ್ಮಣ ಹೊಸಮನಿ ಬಸವರಾಜ ಆಗೋಲಿ ಕಲ್ಲಯ್ಯಜ್ಜ ಹನುಮೇಶ ಹೊಸಳ್ಳಿ ಜಿಲ್ಲಾ ಆರೋಗ್ಯ ಅಧಿಕಾರಿ ಶ್ರೀಮತಿ ಅಲ್ಕಾನಂದ್ ಕ್ಷೇತ್ರ ಶಿಕ್ಷಣಾಧಿಕಾರಿ ಉಮಾದೇವಿ ಸೊನ್ನದ್ ಸಿಡಿಪಿಓ ರೋಹಿಣಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಿಕಾರ್ಜುನ ಹಾಗೂ ಇನ್ನೂ ಅನೇಕ ತಾಲೂಕ ಅಧಿಕಾರಿಗಳು ವೈದ್ಯಾಧಿಕಾರಿಗಳು ಆಶಾ ಕಾರ್ಯಕರ್ತರು ಉಪಸ್ಥಿತರಿದ್ದರು

Please follow and like us:
error