ಗೌರಿ ಲಂಕೇಶ್ ಸ್ಮರಣೆ ಮತ್ತು ಸಂವಾದ ಕಾರ‍್ಯಕ್ರಮ, ಬೀದಿಕವಿಗೋಷ್ಠಿ


ಕೊಪ್ಪಳ : ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ ಕೊಪ್ಪಳ ಇವರ ನೇತೃತ್ವದಲ್ಲಿ ಇತ್ತೀಚಿಗೆ ಹತ್ಯೆಗೀಡಾದ ಲೇಖಕಿ, ಹೋರಾಟಗಾರ್ತಿ ಗೌರಿ ಲಂಕೇಶ್ ಸ್ಮರಣಾರ್ಥ ನಾನೂ ಗೌರಿ -ಗೌರಿ ಎಂಬ ಚೇತನ ಶಿರ್ಷಿಕೆಯಡಿಯಲ್ಲಿ ಕೊಪ್ಪಳದಲ್ಲಿ ಗೌರಿ ಲಂಕೇಶ್ ಸ್ಮರಣೆ ಮತ್ತು ಸಂವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ರವಿವಾರ ೧೫ರಂದು ಬೆಳಿಗ್ಗೆ ಅಶೋಕ ಸರ್ಕಲ್ ನಲ್ಲಿ ಮಾನವ ಸರಪಳಿ ಮತ್ತು ಬೀದಿ ಕವಿಗೋಷ್ಠಿ ಹಮ್ಮಿಕೊಳ್ಳಲಾಗಿದೆ. ಕವಿಗೋಷ್ಠಿಯಲ್ಲಿ ಜಿಲ್ಲೆಯ ವಿವಿಧ ಕವಿಗಳು ಭಾಗವಹಿಸಲಿದ್ದಾರೆ. ನಂತರ ಸಾಹಿತ್ಯ ಭವನದಲ್ಲಿ ಸಂವಾದ ಮತ್ತು ಸ್ಮರಣೆ ಕಾರ್ಯಕ್ರಮ ನಡೆಯಲಿದೆ. ಕಾರ‍್ಯಕ್ರಮದಲ್ಲಿ ಪತ್ರಿಕೆ ಮತ್ತು ಗೌರಿ ಕುರಿತು ಹಿರಿಯ ಪತ್ರಕರ್ತ ಶಿವಮೊಗ್ಗದ ಬಿ.ಚಂದ್ರೇಗೌಡ , ತಾಯ್ತನಕ್ಕೆ ಹೊಸ ವ್ಯಾಖ್ಯೆ ಗೌರಿ ಎನ್ನುವ ವಿಷಯ ಕುರಿತು ಬರಹಗಾರ್ತಿ ವಿಜಯಪುರದ ದು.ಸರಸ್ವತಿ, ಚಳುವಳಿಯ ಒಡನಾಡಿ ಗೌರಿ ಎನ್ನುವ ವಿಷಯದ ಕುರಿತು ಹೋರಾಟಗಾರ , ಬರಹಗಾರರಾದ ಬೆಂಗಳೂರಿನ ಹುಲಿಕುಂಟೆ ಮೂರ್ತಿ ಮಾತನಾಡಲಿದ್ಧಾರೆ.
ನಂತರ ಒಡನಾಟದ ನೆನಪುಗಳು ಎನ್ನುವ ಗೋಷ್ಠಿ ನಡೆಯಲಿದ್ದು ಇದರಲ್ಲಿ ವಿಠ್ಠಪ್ಪ ಗೋರಂಟ್ಲಿ, ಜೆ.ಭಾರದ್ವಾಜ, ಮುತ್ತುರಾಜ್, ಪಂಪಾರಡ್ಡಿ ಅರಳಿಹಳ್ಳಿ, ನಸ್ರಿನ್ ಮಿಠಾಯಿ , ಸಿರಾಜ್ ಬಿಸರಳ್ಳಿ ತಮ್ಮ ನೆನಪುಗಳನ್ನು ಹಂಚಿಕೊಳ್ಳಲಿದ್ಧಾರೆ. ಕಾರ‍್ಯಕ್ರಮದ ಸಮನ್ವಯವನ್ನು ಕೆ.ಷರೀಪಾರವರು ಮಾಡಲಿದ್ದಾರೆ. ಈ ಗೋಷ್ಠಿಗಳ ನಂತರ ನಮ್ಮ ಗೌರಿ ಸಾಕ್ಷ್ಯಚಿತ್ರ ಪ್ರದರ್ಶನಗೊಳ್ಳಲಿದೆ. ಪೆಡಸ್ಟ್ರಿಯಲ್ ಪಿಕ್ಚರ‍್ಸ್ ನ ದೀಪು ನಿರ್ದೇಶನದಲ್ಲಿ ಈ ಸಾಕ್ಷ್ಯಚಿತ್ರ ನಿರ‍್ಮಾಣಮಾಡಲಾಗಿದೆ. ಕಾರ್ಯಕ್ರಮದ ಕೊನೆಯಲ್ಲಿ ವಿಠ್ಠಪ್ಪ ಗೋರಂಟ್ಲಿಯವರ ರಚಿತ ಗಾಂಧಿಯಿಂದ ಗೌರಿಯವರೆಗೆ ನಾಟಕ ಪ್ರದರ್ಶನಗೊಳ್ಳಲಿದೆ. ಹಾಲ್ಕುರಿಕೆ ಶಿವಶಂಕರ ನಾಟಕ ನಿರ್ಧೇಶನ ಮಾಡಿದ್ಧಾರೆ. ಪ್ರಗತಿಪರ ಮತ್ತು ವಿಚಾರವಂತ ಮನಸ್ಸುಗಳೆಲ್ಲಾ ಕಾರ್ಯಕ್ರಮದಲ್ಲಿ ಭಾಗವಹಿಸಿಲಿದ್ಧಾರೆ. ಕಾರ್ಯಕ್ರಮಕ್ಕೆ ಆಗಮಿಸಿ ಯಶಸ್ವಿಗೊಳಿಸಲು ಕೋರಲಾಗಿದೆ.

Please follow and like us:
error