ಗುರುವಂದನಾ ಮತ್ತು ಸ್ನೇಹಿತರ ಸಮ್ಮಿಲನ ಕಾರ್ಯಕ್ರಮ

ಕೊಪ್ಪಳ : ದಿ ೨೦ ಶನಿವಾರದಂದು ಬೆಳಿಗ್ಗೆ ೧೦:೩೦ಕ್ಕೆ ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಸಂಯುಕ್ತ ಪ್ರೌಢ ಶಾಲೆಯಲ್ಲಿ ೧೯೯೮-೯೯ನೇ ಸಾಲಿನ ೧೦ನೇ ತರಗತಿ ವಿದ್ಯಾರ್ಥಿಗಳಿಂದ ಗುರುವಂದನಾ ಮತ್ತು ಸ್ನೇಹಿತರ ಸಮ್ಮಿಲನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀ ಮ.ನಿ.ಪ್ರ.ಸ್ವ.ಜ. ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಸಂಸ್ಥಾನ ಗವಿಮಠ, ಕೊಪ್ಪಳ. ಇವರು ವಹಿಸಲಿದ್ದು,  ಎಸ್. ಮಲ್ಲಿಕಾರ್ಜುನ , ಗೌರವ ಕಾರ್ಯದರ್ಶಿಗಳು ಗ.ವಿ.ವ.ಟ್ರಸ್ಟ್ ಕೊಪ್ಪಳ ಇವರು ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು  ಗವಿಸಿದ್ದಪ್ಪ ವಿ. ಕೊಪ್ಪಳ, ಮುಖ್ಯೋಪಾಧ್ಯಯರು ಶ್ರೀ ಗವಿಸಿದ್ದೇಶ್ವರ ಸಂಯುಕ್ತ ಪ್ರೌಢ ಶಾಲೆ ಇವರು ವಹಿಸಲಿದ್ದು, ೧೯೯೮-೯೯ನೇ ಸಾಲಿನ ಶಿಕ್ಷಕರುಗಳಾದ  ಬಿ. ವಿ. ರಾಮರೆಡ್ಡಿ,  ಎಸ್. ಎಮ್. ಕಮ್ಮಾರ,  ಪಿ. ಡಿ. ಬಡಿಗೇರ,  ಟಿ. ವಿ. ಮಾಗಳದ, ಜಿ. ವಿ. ವಾಲಿ,  ವಿ. ಕೆ. ಜಾಗಟಗೇರಿ,  ಎ. ಎನ್. ಹಬೀಬ, ಎಸ್. ಎಮ್. ಕಂಬಾಳಿಮಠ,  ಜಿ. ಎಸ್. ಚಲವಾದಿ,  ಎಸ್. ಸಿ. ಹಿರೇಮಠ,  ಎನ್. ಎಚ್. ಪಾಟೀಲ,  ಅಮರೇಶ ಎ. ಕರಡಿ, ಎಮ್. ಆರ್. ಜಡಿಮಠ,  ರಾಮನಗೌಡ್ರು ಬಾಲನಗೌಡ್ರು,  ಪ್ರಭು ಜಿ. ಹಿರೇಮಠ,  ಕೃಷ್ಣಪ್ಪ ಎಲ್. ಲಂಬಾಣಿ ಮತ್ತು ಸಿಬ್ಬಂದಿ ವರ್ಗದವರಾದ  ಎಮ್. ವಿ. ಹಿರೇಮಠ,  ವೀರಮಹೇಶ್ವರದೇವ ಕೊಂಡದಕಟ್ಟಿಮಠ, ಸೈಯದ್ ಅಬ್ದುಲ್ ಸಾಬ್, ಸೈಯದ್ ಸುಲೆಮಾನ್,  ಹುಚ್ಚಿರಪ್ಪ ಹವಳೆ ಇವರೆಲ್ಲರಿಗೂ ಸನ್ಮಾನ ಹಾಗೂ ಗುರು ವಂದನಾ ಕಾರ್ಯಕ್ರಮ ಜರುಗಲಿದೆ ಎಂದು ಶ್ರೀ ಗವಿಸಿದ್ದೇಶ್ವರ ಸಂಯುಕ್ತ ಪ್ರೌಢ ಶಾಲೆಯ ೧೯೯೮-೯೯ನೇ ಸಾಲಿನ ೧೦ನೇ ತರಗತಿಯ ಸಮಸ್ತ ವಿದ್ಯಾರ್ಥಿ ಬಳಗ ಕೊಪ್ಪಳ. ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Please follow and like us:
error