ಗುಡದಳ್ಳಿ ಗ್ರಾಮದಲ್ಲಿ ಶಾಸಕರಿಂದ ಶಾಂತಿ ಸಭೆ


ಕೊಪ್ಪಳ : ೧೩, ಕಾಮದಹನದ ವೇಳೆ ಕ್ಷುಲ್ಲಕ ಕಾರಣಕ್ಕೆ ಗುಡದಳ್ಳಿ ಗ್ರಾಮದಲ್ಲಿ ಸರ್ವಣಿಯರು ಹಾಗೂ ದಲಿತ ಮಧ್ಯ ಉಂಟಾದ ಗಲಭೆಯಿಂದ ಗ್ರಾಮದಲ್ಲಿ ಉಂಟಾದ ಆತಂಕ ನಿವಾರಣೆಗೆ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಗ್ರಾಮಕ್ಕೆ ಬೇಟಿ ನೀಡಿ ದಲಿತರ ಕೇರಿಯಲ್ಲಿ ಶಾಂತಿ ಸಭೆ ನಡೆಸಿ ಗಲಭೆಯಿಂದ ಜರ್ಜರಿತರಾದ ಗ್ರಾಮದ ನಿವಾಸಿಗಳ ಜೊತೆ ಚರ್ಚೆಮಾಡಿ ಯಾರು ಭಯ ಬೀತರಾಗದೆ ಶಾಂತಿ ಸೌರ್ಹಾದತೆ ಭಾತೃತ್ವದಿಂದ ಜೀವನ ನಡೆಸಬೇಕು ಯಾವುದೇ ವದಂತಿಗಳಿಗೆ ಕಿವಿಗೊಡದೆ ಪ್ರತಿಯೊಬ್ಬರು ಗ್ರಾಮದಲ್ಲಿ ಅಣ್ಣ-ತಮ್ಮಂದಿರಾಗಿ ಬಾಳಬೇಕು ತಪ್ಪಿಸ್ಥರನ್ನು ಶಿಕ್ಷಕಿಸಲು ಕಾನೂನು ಇದ್ದು, ಪೋಲಿಸ್ ಅಧಿಕಾರಿಗಳಿಗೆ ಗಲಭೆಗೆ ಪ್ರಚೋಧಿಸುವವರ ವಿರುದ್ಧ ನಿರ್ಧಾಕ್ಷಣಿಯ ಕ್ರಮ ಕೈಗೊಳ್ಳಬೇಕೆಂದು ಆದೇಶಿಸಿದರು.
ದಲಿತ ಕೋಮಿನ ನಾಯಕರನ್ನು ಹಾಗೂ ಯುವಕರನ್ನು ಬೇಟಿ ಮಾಡಿ ನಿರ್ಭಯದೊಂದಿಗೆ ಜೀವನ ಸಾಗಿಸಿ ನಿಮ್ಮ ಜೊತೆಗೆ ನಾವಿದ್ದೇವೆ ಎಂದು ಪ್ರತಿಯೊಬ್ಬರಿಗೂ ಆತ್ಮ ಸ್ಥೈರ್ಯ ತುಂಬಿದರು.
ಈ ಸಂದರ್ಭದಲ್ಲಿ ಮಾಜಿ ಜಿ.ಪಂ ಅಧ್ಯಕ್ಷರು ಹಾಲಿ ಸದಸ್ಯರುಗಳಾದ ಎಸ್,ಬಿ. ನಾಗರಳ್ಳಿ, ಕೆ. ರಾಜಶೇಖರ ಹಿಟ್ನಾಳ, ಜಿ.ಪಂ ಸದಸ್ಯ ಗೂಳಪ್ಪ ಹಲಗೇರಿ, ತಾ.ಪಂ ಅಧ್ಯಕ್ಷ ಬಾಲಚಂದ್ರನ್, ಎಪಿಎಂಸಿ ಅಧ್ಯಕ್ಷ ನಾಗರಾಜ ಚಳ್ಳೊಳ್ಳಿ, ಬ್ಲಾಕ ಕಾಂಗ್ರೆಸ್ ಅಧ್ಯಕ್ಷರುಗಳಾದ ಸುರೇಶ ಭೂಮರಡ್ಡಿ, ಕಾಟನ್ ಪಾಷಾ, ಮಾಜಿ ಪ್ರಾಧಿಕಾರದ ಅಧ್ಯಕ್ಷ ಜುಲ್ಲು ಖಾದ್ರಿ, ನಗರಸಭೆ ಸದಸ್ಯ ಅಕ್ಬರಪಾಷ ಪಲ್ಟನ್, ಮುಖಂಡರುಗಳಾದ ಪ್ರಸನ್ನ ಗಡಾದ, ಗಾಳೆಪ್ಪ ಪೂಜಾರ, ಶರಣಪ್ಪ ಸಜ್ಜನ್, ನಾಗರಾಜ ಬಳ್ಳಾರಿ, ಎಸ್.ಬಿ. ಮಾಲಿಪಾಟೀಲ, ಶಿವಕುಮಾರ ಶೆಟ್ಟರ, ಉಮೇಶ ಗುಡದಳ್ಳಿ, ಬಸವರಾಜ ಆಗೋಲಿ ಇನ್ನೂ ಅನೇಕ ಮುಖಂಡರು ಗ್ರಾಮಸ್ಥರು, ಗ್ರಾಮದ ಗುರು ಹಿರಿಯರು ಉಪಸ್ಥಿತರಿದ್ದರು.

Please follow and like us:
error