ಗುಂಪುಗಾರಿಕೆಯಿಂದ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆ – ಶಾಂತಣ್ಣ ಮುದಗಲ್

ಕೊಪ್ಪಳ : ೨೮ ನಗರದ ಜಿಲ್ಲಾ ಕಾಂಗ್ರೆಸ್ ಕಾರ್ಯಲಯದಲ್ಲಿ ನಡೆದ ೧೩೬ನೇ ಕಾಂಗ್ರೆಸ್ ಪಕ್ಷದ ಸಂಸ್ಥಾಪನ ಸಂಭ್ರಾಚರಣೆಯಲ್ಲಿ ಪಕ್ಷದ ಮಾಜಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಾಂತಣ್ಣ ಮುದಗಲ್ ಅವರು ಮಾತನಾಡಿ ಕಾಂಗ್ರೆಸ ಪಕ್ಷವು ಸ್ವತಂತ್ರ ಸಂಗ್ರಾಮದಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವತಂತ್ರ ತಂದು ಕೊಟ್ಟ ಮಹಾನ್ ಪುರುಷರ ಪಕ್ಷವಾಗಿದ್ದು ಸುವರ್ಣ ಇತಿಹಾಸ ಹೊಂದಿದ್ದ ಕಾಂಗ್ರಸ್ ಪಕ್ಷವು ಇಂದು ಗುಂಪುಗಾರಿಕೆಯಿಂದ ಬಸವಳಿಯುತ್ತಿದೆ. ಸಮುದ್ರದಂತೆ ಕಾರ್ಯಕರ್ತರನ್ನು ಹೊಂದಿರುವ ಪಕ್ಷವಾಗಿದ್ದು ನಿಷ್ಠಾವಂತರನ್ನು ಕಡೆಗಣಿಸಿ ಕೇವಲ ಗುಂಪುಗಾರಿಕೆಯಿಂದ ಹೀನಾಯ ಪರಿಸ್ಥಿತಿ ಎದುರಿಸುತ್ತಿದ್ದು ಪಕ್ಷದ ರಾಜ್ಯಧ್ಯಕ್ಷರು ಎಲ್ಲಾ ಮುಂಚುಣಿ ಮುಂಖಡರಿಗೆ ಕಾರ್ಯಕರ್ತರನ್ನು ಬೇಟಿಯಾಗಿ ಅವರ ಸ್ಥಿತಿಗತಿಗಳನ್ನು ಅರಿತುಕೊಂಡು ಆಧುನಿಕ ರಾಜಕಾರಣಕ್ಕೆ ಪರ್ಯಾಯ ವ್ಯವಸ್ಥೆ ಮಾಡಿ ಕಾರ್ಯಕರ್ತರಿಗೆ ಸ್ವಂದಿಸಿದಾಗ ಮಾತ್ರ ಪಕ್ಷಕ್ಕೆ ಉಜ್ವಲ ಭವಿಷ್ಯವಿದೆ ಎಂದು ಹೇಳಿದರು,
ಇದೆ ಸಂದರ್ಭದಲ್ಲಿ ಮತಾನಾಡಿದ ಹಿರಿಯ ಕಾಂಗ್ರೆಸಿಗ ದ್ಯಾಮಣ್ಣ ಚಿಲವಾಡಗಿ ಅವರು ಪಕ್ಷದ ಮುಂಖಡರು ಮತ್ತು ಕಾರ್ಯಕರ್ತರ ಮದ್ಯೆ ಸಮನ್ವಯದ ಕೋರತೆಯಿಂದ ಪಕ್ಷವು ರಾಷ್ಟ್ರ ಹಾಗೂ ರಾಜ್ಯದಲ್ಲಿ ಅಧಿಕಾರದಿಂದ ವಂಚಿತವಾಗುತ್ತಿದ್ದು ಪಕ್ಷದ ಉನ್ನತ ಹುದ್ದೆಗಳನ್ನು ಪಡೆದವರು ಪಕ್ಷ ಸಂಘಟನೆಯ ಮುಂಚೂಣಿಯಲ್ಲಿ ಬಂದು ಪರಿಸ್ಥಿಯ ಅನುಗುಣವಾಗಿ ಕಾರ್ಯಕರ್ತರ ಜೊತೆಗೆ ಕೈ ಜೋಡಿಸಿದಾಗ ಮಾತ್ರ ಯಶ್ವಸಿ ಸಾದ್ಯ ಎಂದು ಹೇಳಿದರು.
ಪಕ್ಷದ ಸಂಸ್ಥಾಪನ ದಿನಾಚರಣೆ ಅಂಗವಾಗಿ ನಗರ ಘಟಕದ ಅಧ್ಯಕ್ಷರಾದ ಕಾಟನ ಪಾಷ ರವರು ಹಿರಿಯ ಕಾಂಗ್ರೆಸಿಗರಾದ ಶಾಂತಣ್ಣ ಮುದಗಲ, ದ್ಯಾಮಣ್ಣ ಚಿಲವಾಡಗಿ, ಜುಲ್ಲು ಖಾದರಿ, ಯಮನಪ್ಪ ಕಬ್ಬೇರ, ರಾಜ್ಯ ಮಹಿಳಾ ಕಾಂಗ್ರೆಸ್ ಕಾರ್ಯದರ್ಶಿಯಾದ ಇಂದಿರಾ ಬಾವಿಕಟ್ಟಿ ಹಾಗೂ ನಾಗರಾಜ ಚಳ್ಳೂಳ್ಳಿಯವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ನಗರಸಭಾ ಸದಸ್ಯರುಗಳಾದ ಮುತ್ತುರಾಜ ಕುಷ್ಟಗಿ, ಅಜಿಮ್ಮ ಅತ್ತಾರ, ಸಿದ್ದು ಮ್ಯಾಗೇರಿ, ಅಕ್ಬರಪಾಷ ಪಲ್ಟನ್, ಭಾಗ್ಯನಗರ ಪಟ್ಟಣ ಪಂಚಾಯತ್ ಅಧ್ಯಕ್ಷ ರೇಣುಕಮ್ಮ ತಟ್ಟಿ, ಸದಸ್ಯರಾದ ರಮೇಶ ಹ್ಯಾಟಿ, ಮುಂಖಡರುಗಳಾದ ಅಜ್ಜಪ್ಪಸ್ವಾಮಿ, ದಿಡ್ಡಗಪಾರ್, ಸಲೀಂ ಅಳವಂಡಿ. ಶೀತಲ ಪಾಟೀಲ್ ಇನ್ನೂ ಅನೇಕರು ಉಪಸ್ಥಿತರಿದ್ದರು.

Please follow and like us:
error