ಗಿಣಿಗೇರಿ ಕೆರೆ ಸಸಿ ನೆಡುವ ಕಾರ್ಯಕ್ಕೆ ಚಾಲನೆ

ಕೊಪ್ಪಳ: ತಾಲೂಕಿನ ಗಿಣಿಗೇರಿ ಕೆರೆ ಬಂಡ್ ನಿರ್ಮಾಣ ಕಾರ್ಯ ಮುಕ್ತಾಯ ಹಂತ ತಲುಪಿದ್ದು ಬಂಡ್ನ ಎರಡೂ ಬದಿ ಅರಣ್ಯ ಹಾಗೂ ತೋಟಗಾರಿಗೆ ಗಿಡಗಳನ್ನು ನೆಡುವ ಕಾರ್ಯಕ್ಕೆ ಚಾಲನೆ ನೀಡಲಾಯಿತು.
ಕೆರೆಯ ಸುತ್ತ 50 ಅಡಿ ಅಗಲ ಬಂಡ್ ನಿರ್ಮಾಣ ಮಾಡಲಾಗಿದೆ. ಸುಂದರ ರಸ್ತೆ ಸಿದ್ಧವಾಗಿದ್ದು ಅರಣ್ಯ ಇಲಾಖೆಯ ಸಿಬ್ಬಂದಿ ಸಸಿ ನೆಡುವ ಕಾರ್ಯ ಕೈಗೊಂಡಿದ್ದಾರೆ. ಸುಮಾರು 15 ಸಾವಿರ ಗಿಡಗಳನ್ನು ನೆಟ್ಟು, ಪೋಷಿಸುವ ಉದ್ದೇಶ ಹೊಂದಲಾಗಿದೆ ಎನ್ನುತ್ತಾರೆ ಜಿಲ್ಲಾ ಅರಣ್ಯಾಧಿಕಾರಿ ಹರ್ಷ ಭಾನು ಅವರು.
ಈ ಸಂದರ್ಭದಲ್ಲಿ ಗವಿಮಠದ ಶ್ರೀ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ, ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಕೃಷ್ಣ ಉಕ್ಕುಂದ, ಜಿಲ್ಲಾ ಅರಣ್ಯಾಧಿಕಾರಿ ಹರ್ಷ ಭಾನು, ಸಿಪಿಐ ವಿಶ್ವನಾಥ ಹಿರೇಗೌಡರ್, ಅರಣ್ಯ ಇಲಾಖೆಯ ನಾಗರಾಜ್ ಕೆ.ಎಂ, ಅಂದಪ್ಪ ಕುರಿ, ಹೊನ್ನೂರಸಾಬ, ಸನ್ಮತಿಕುಮಾರ, ಲಿಂಗರಾಜ, ರಾಜಾಸಾಬ, ತೋಟಗಾರಿಕೆ ಇಲಾಖೆಯ ಶಿವಪುತ್ರಪ್ಪ, ಕೆ.ಎಚ್.ಪಾಟೀಲ್, ಮುಖಂಡರಾದ ಸುಬ್ಬಣ್ಣಾಚಾರ್ಯ ವಿದ್ಯಾನಗರ, ಕರಿಯಪ್ಪ ಮೇಟಿ, ಭೋಜಪ್ಪ ಕುಂಬಾರ, ಬಿ.ಎಸ್. ಸುರೇಶ, ಕುಬೇರ ಮಜ್ಜಿಗಿ ಸೇರಿದಂತೆ ಇತರರು ಇದ್ದರು.
Please follow and like us:
error