ಗಿಣಗೇರಿ ಕೆರೆ ಪುನಶ್ಚೇತನ : 1 ಲಕ್ಷ ರೂ. ದೇಣಿಗೆ ನೀಡಿದ ಸಿ.ವಿ.ಚಂದ್ರಶೇಖರ

ಕೊಪ್ಪಳ : ಗವಿಮಠದ ಶ್ರೀಗಳ ನೇತೃತ್ವದಲ್ಲಿ ಗಿಣಗೇರಿ ಕೆರೆ ಅಭಿವೃದ್ದಿ ಕಾರ್ಯ  ಮುಂದುವರೆದಿದೆ. ಇಂದೂ ಸಹ ಬೆಳಿಗ್ಗೆಯಿಂದಲೇ ಕಾರ್ಯ ಮುಂದುವರೆದಿದ್ದು ಬಿಜೆಪಿ ರಾಷ್ಟ್ರೀಯ ಪರಿಷತ್ ಸದಸ್ಯ  ಸಿ.ವಿ. ಚಂದ್ರಶೇಖರ  ಕೆರೆ ಪುನಶ್ಚೇತನ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ವೀಕ್ಷಿಸಿದರು.  ಗಿಣಿಗೇರಿ ಕೆರೆ ಪುನಶ್ಚೇತನ ಕಾರ್ಯಕ್ಕೆ ಒಂದು ಲಕ್ಷ ರೂ. ದೇಣಿಗೆ ನೀಡಿದರು.

ಈ ಸಂದರ್ಭದಲ್ಲಿ ಗವಿಮಠಶ್ರೀಗಳು,ಜಿಲ್ಲಾಪಂಚಾಯತ್ ಸದಸ್ಯ ಗೂಳಪ್ಪ ಹಲಗೇರಿ, ನವೋದಯ ವಿರುಪಾಕ್ಷಪ್ಪ  ಕರೆ ಪುನಶ್ವೇತನ ಸಮಿತಿಯ ಸದಸ್ಯರು, ಗಿಣಗೇರಿ ಗ್ರಾಮದ ಹಿರಿಯರು ಉಪಸ್ಥಿತರಿದ್ದರು.

Please follow and like us:
error