ಕೊಪ್ಪಳ, ಮೇ. ೧೯: ಕೊಪ್ಪಳ ನಗರದ ಗಾಂಧಿ ವೃತ್ತದಲ್ಲಿ ಮಹಾತ್ಮ ಗಾಂಧಿ ಅವರ ವೃತ್ತವನ್ನು ಪುನರ್ ನಿರ್ಮಾಣ ಮಾಡುತ್ತಿದ್ದು, ತುರ್ತಾಗಿ ಕ್ರಮ ತೆಗೆದುಕೊಳ್ಳಬೇಕು ಎಂದು ಯುವ ಹೋರಾಟಗಾರ ಮಂಜುನಾಥ ಜಿ. ಗೊಂಡಬಾಳ ಜಿಲ್ಲಾಧಿಕಾರಿ ಸುನೀಲ್ ಕುಮಾರ ಅವರಿಗೆ ಮನವಿ ಮಾಡಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಅನೇಕ ತಿಂಗಳುಗಳಿಂದ ಅದನ್ನು ಪೂರ್ಣಗೊಳಿಸುತ್ತಿಲ್ಲ, ಅಥವಾ ತೆರವುಗೊಳಿಸುತ್ತಿಲ್ಲ, ಅಲ್ಲಿ ಸಾರ್ವಜನಿಕ ಶೌಚಾಲಯ ಮತ್ತು ಹೇರ್ ಕಟಿಂಗ್ ಸಲೂನ್ ಇದ್ದು, ಮಹಾತ್ಮ ಗಾಂಧಿ ಭಾವಚಿತ್ರವನ್ನು ತೆರವುಗೊಳಿಸಿ, ಕಟ್ಟೆ ನಿರ್ಮಾಣ ಮಾಡುತ್ತಿದ್ದಾರೆ ಆದರೆ ಅಲ್ಲಿಯೇ ಸುತ್ತ ಮುತ್ತಲಿನ ಕಸವನ್ನು ಹಾಕಲಾಗುತ್ತದೆ. ಕಾಮಗಾರಿ ಅಪೂರ್ಣಗೊಂಡಿದ್ದು ನಗರದ ಅಲ್ಲಿನ ವೃತ್ತದ ಅಂದವನ್ನು ಸಂಪೂರ್ಣವಾಗಿ ಹಾಳುಗೆಡವಿದೆ. ಅಲ್ಲೊಂದು ಕಸ ವಿಲೇವಾರಿ ಡಬ್ಬಿಯನ್ನು ಇಟ್ಟು ಸರಿಯಾಗಿ ನಿರ್ವಹಿಸಬೇಕು ಕೂಡಲೇ ವೃತ್ತ ನಿರ್ಮಿಸಿ ಮಹಾತ್ಮನ ಮಾನ ಉಳಿಸಬೇಕು ಎಂದು ಆಗ್ರಹಿಸಿದ್ದಾರೆ. ಅಲ್ಲಿ ಕಟ್ಟಿದ ಶೌಚಾಲಯವು ಸಹ ಕೆಲವೇ ತಿಂಗಳಲ್ಲಿ ಅಸ್ತವ್ಯಸ್ಥವಾಗಿದೆ. ಅದನ್ನು ಕೇಳುವರಿಲ್ಲದಂಗೆ ಆಗಿದೆ. ನಗರಸಭೆಯ ಅನೇಕ ಯೋಜನೆಗಳು ಅಪೂರ್ಣಗೊಂಡಿದ್ದು, ಶಿಸ್ತಿನ ಕೆಲಸ ಮಾಡುತ್ತಿಲ್ಲ. ಮಳೆಗಾಲ ಹತ್ತಿರ ಬಂದಿದ್ದರೂ ಸಹ ಕಸ ವಿಲೇವಾರಿ ಸರಿ ಹೋಗಿಲ್ಲ ಎಂದು ಬೇಸರವ್ಯಕ್ತಪಡಿಸಿದ್ದಾರೆ.
ಗಾಂಧಿ ವೃತ್ತ ಪೂರ್ಣಗೊಳಿಸಿ ಮಾನ ಉಳಿಸಲು ಮನವಿ
Please follow and like us: