ಗವಿಸಿದ್ದೇಶ್ವರ ಅರ್ಬನ್ ಬ್ಯಾಂಕ್ ಚುನಾವಣೆ : 6 ಜನ ಅವಿರೋಧ ಆಯ್ಕೆ

ಕೊಪ್ಪಳ : ಶ್ರೀ ಗವಿಸಿದ್ದೇಶ್ವರ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ಕೊಪ್ಪಳ ಇದರ ಆಡಳಿತ ಮಂಡಳಿ ಸಾಮಾನ್ಯ ಚುನಾವಣೆ ಇದೇ ಅಕ್ಟೋಬರ್-೧೧ ರಂದು ಜರುಗಬೇಕಾದ ಸದರಿ ಆಡಳಿತ ಮಂಡಳಿಗೆ ಹಿಂದುಳಿದ ವರ್ಗ-ಅ ಮೀಸಲು ಮತಕ್ಷೇತ್ರದಿಂದ ಶ್ರೀಮತಿ ಸಯ್ಯದಾ ಶಹನಾಜ್ ಬೇಗಂ ನಾಸೀರ್ ಹುಸೇನಿ ಅವರು ಅವಿರೋಧ ಆಯ್ಕೆಗೊಂಡಿದ್ದಾರೆ.
ಚುನಾವಣೆಯಲ್ಲಿ ಬಸವರಾಜ ಶಹಪೂರ (ಪ.ಪಂಗಡ), ಶ್ರೀಮತಿ ಜಯಶ್ರೀ ಪ್ರಭು ಬಬ್ಲಿ (ಮಹಿಳಾ ಮೀಸಲು), ನಾಗರಾಜ ದಶರತ್ ಅರಕೇರಿ (ಪರಿಶಿಷ್ಟ ಜಾತಿ), ಅಡೂರು ರಾಜಶೇಖರಗೌಡ ಮರಿಗೌಡ (ಹಿಂದುಳಿದ ವರ್ಗ-ಅ) ರವರು ಸಹ ಅವಿರೋಧ ಆಯ್ಕೆಗೊಂಡಿದ್ದಾರೆ ಎಂದು ಚುನಾವಣಾಧಿಕಾರಿ ಬಿ.ಎ.ಕೇಸರಿಮಠ ಪ್ರಕಟಿಸಿದ್ದಾರೆ.
ಶ್ರೀಮತಿ ಸಯ್ಯದಾ ಶಹನಾಜ್ ಬೇಗಂ ನಾಸೀರ್ ಹುಸೇನಿ  ಇವರು ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಜಿಲ್ಲಾಧ್ಯಕ್ಷ ಸಯ್ಯದ್ ನಾಸೀರುದ್ದೀನ್ ಹುಸೇನಿಯವರ ಪತ್ನಿ, ಸದ್ಯ ನಗರಾಭಿವೃದ್ದಿ ಪ್ರಾಧಿಕಾರದ ಸದಸ್ಯರಾಗಿ ಸೇವೆ ಸಲ್ಲಿಸುತ್ತಿರುವ ಇವರು ಈಗ ಶ್ರೀ ಗವಿಸಿದ್ದೇಶ್ವರ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿನ ಆಡಳಿತ ಮಂಡಳಿಗೆ ನಿರ್ದೇಶಕರಾಗಿ ಪ್ರಥಮ ಬಾರಿಗೆ ಆಯ್ಕೆಯಾಗಿರುವ ಇವರ ಪತಿ ಸಯ್ಯದ್ ನಾಸೀರುದ್ದೀನ್ ಹುಸೇನಿಯವರು ಸಂಸದ ಸಂಗಣ್ಣ ಕರಡಿ ಮತ್ತು ಅವರ ಸುಪುತ್ರ ಬಿಜೆಪಿ ನಾಯಕ ಅಮರೇಶ ಕರಡಿಯವರ ಆಪ್ತರ ವಲಯದಲ್ಲಿ ಗುರುತಿಸಿಕೊಂಡವರಾಗಿದ್ದಾರೆ.


ಅಭಿನಂದನೆ :  ಅವಿರೋಧ ಆಯ್ಕೆಗೆ ಶ್ರಮಿಸಿದ ನಮ್ಮ ಅಲ್ಪಸಂಖ್ಯಾತ ಸಮುದಾಯದ ಮುಖಂಡರಾದ ಕೆ.ಎಂ.ಸಯ್ಯದ್, ಬಾಷುಸಾಬ ಖತೀಬ್, ಮಹೆಬೂಬ್ ಮಚ್ಚಿ, ಮೊಹ್ಮದ್ ಜೀಲಾನ್ ಕಿಲ್ಲೇದಾರ ಅಲಿಯಾಸ್ ಮೈಲೈಕ್ ಸೇರಿದಂತೆ ಅನೇಕರು ಕಾರಣಿಕರ್ತರಾಗಿದ್ದು ಅವರೆಲ್ಲರಿಗೆ ನೂತನ ಸದಸ್ಯೆ ಶ್ರೀಮತಿ ಸಯ್ಯದಾ ಶಹನಾಜ್ ಬೇಗಂ ನಾಸೀರ್ ಹುಸೇನಿ ಅವರು ಅಭಿನಂದಿಸಿದ್ದಾರೆ. ಹಾಗೂ ಅವರು ಆಯ್ಕೆಗೊಂಡಿರುವುದಕ್ಕೆ ಅಲ್ಪಸಂಖ್ಯಾತ ಮೋರ್ಚಾದ ಕಾರ್ಯಕರ್ತರು ಮತ್ತು ಅಭಿಮಾನಿಗಳು ಹರ್ಷ ವ್ಯಕ್ತಪಡಿಸಿ ಸಂಭ್ರಮಿಸಿದ್ದಾರೆ.

Please follow and like us:
error