ಗವಿಶ್ರೀಗಳಿಂದ ತಾಲೂಕ ೮ ನೇ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನ ಬಿಡುಗಡೆ

ಸಮ್ಮೇಳನಾಧ್ಯಕ್ಷರಿಗೆ ಕಸಾಪದಿಂದ ಅಧಿಕೃತ ಆಹ್ವಾನ

ಕೊಪ್ಪಳ, ೨೭-ಕೊಪ್ಪಳ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ತಾಲೂಕಿನ ಶಿವಪುರ ಗ್ರಾಮದಲ್ಲಿ ನಡೆಯಲಿರುವ ತಾಲೂಕ ೮ ನೇ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನವನ್ನು ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಇಂದು ಬಿಡುಗಡೆಗೊಳಿಸಿದರು.
ಇದೇ ದಿ.೩೧ ರಂದು ಶಿವಪುರ ಗ್ರಾಮದಲ್ಲಿ ನಡೆಯಲಿರುವ ತಾಲೂಕಿನ ಸಮ್ಮೇಳನವು ಅತ್ಯಂತ ಯಶಸ್ವಿಯಾಗಲೆಂದು ಹಾರೈಸಿದರು.
ಸಮ್ಮೇಳನಾಧ್ಯಕ್ಷರಿಗೆ ಅಧಿಕೃತ ಆಹ್ವಾನ : ದಿ.೩೧ ರಂದು ಶಿವಪುರ ಗ್ರ್ರಾಮದಲ್ಲಿ ನಡೆಯಲಿರುವ ತಾಲೂಕ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ಸಾಹಿತಿ, ರಂಗಭೂಮಿ ಕಲಾವಿದರಾದ ಈಶ್ವರ ಹತ್ತಿ ಇವರಿಗೆ ಜಿಲ್ಲಾ ಮತ್ತು ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಶಿವಪುರ ಗ್ರಾಮದ ಹಿರಿಯರಿಂದ ಇಂದು ಅವರಿಗೆ ಅಧಿಕೃತ ಆಹ್ವಾನ ನೀಡಲಾಯಿತು.
ಜಿಲ್ಲಾಧ್ಯಕ್ಷ ರಾಜಶೇಖರ ಅಂಗಡಿ ಹಾಗೂ ಪದಾಧಿಕಾರಿಗಳು ಸನ್ಮಾನಿಸಿ ಸಮ್ಮೇಳನದ ಸರ್ವಾಧ್ಯಕ್ಷತೆಯನ್ನು ವಹಿಸಿಕೊಳ್ಳುವಂತೆ ಆಹ್ವಾನ ನೀಡಿ ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.
ಈಶ್ವರ ಹತ್ತಿಯವರು ಮಾತನಾಡಿ, ಸಮ್ಮೇಳನದಲ್ಲಿ ಗ್ರಾಮೀಣ ಬದುಕು-ಸಾಹಿತ್ಯ ನಾಡಿನ ನೆಲ-ಜಲದ ಕುರಿತು ಗಂಭೀರ ಚರ್ಚೆಗಳಾಗಲಿ ಅಕ್ಷರಕ್ಕೆ ಇರುವ ಶಕ್ತಿ ನಾಡಿನಾದ್ಯಂತ ಪಸರಿಸಲಿ ಎಂದು ನುಡಿದರು.
ಗ್ರಾಮೀಣ ಭಾಗದಲ್ಲಿ ಸಮ್ಮೇಳನ ನಡೆಯುವ ಮೂಲಕ ನಮ್ಮ ದೇಶದ ಮೂಲ ಬದುಕಿನ ಚರ್ಚೆ ನಡೆಯುತ್ತದೆ. ದೇಶದ ಪ್ರತಿಯೊಬ್ಬ ಪ್ರಜೆಯ ಮೂಲ ಗ್ರಾಮೀನ ಜೀವನವಾಗಿದೆ. ಸಾಹಿತ್ಯ, ಸಂಸ್ಕೃತಿಗೂ ಮೂಲ ದೇಶದ ಗ್ರಾಮೀಣ ಬದುಕಾಗಿದೆ ಎಂದು ಹೇಳಿದರು.
ತಾಲೂಕ ಅಧ್ಯಕ್ಷ ಚೆನ್ನಬಸಪ್ಪ ಕಡ್ಡಿಪುಡಿ ಮಾತನಾಡಿ ಗ್ರಾಮೀಣ ಭಾಗದಲ್ಲಿ ನಡೆಯಲಿರುವ ಈ ಸಮ್ಮೇಳನವನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸುವ ಮೂಲಕ ಮಾದರಿ ಸಮ್ಮೇಳನವನ್ನಾಗಿ ಮಾಡಲು ಪ್ರತಿಯೊಬ್ಬರೂ ಶ್ರಮಿಸೋಣ ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷ ರಾಜಶೇಖರ ಅಂಗಡಿ, ಶಿವಪುರ ಗ್ರಾ.ಪಂ.ಅಧ್ಯಕ್ಷ ರೂಪ್ಲಾ ನಾಯಕ್, ಶಿವಬಾಬು, ವಿರುಪಾಕ್ಷಪ್ಪ ಭೂಸನೂರಮಠ, ಶರಣಪ್ಪ ಆನೆಗೊಂದಿ, ಹನುಮಂತಪ್ಪ ಕಾಮನೂರ, ವಿರುಪಾಕ್ಷಪ್ಪ ಬಿಸನಳ್ಳಿ, ಮೈಲಾರಪ್ಪ ಆರೇರ್, ಶಂಕರಪ್ಪ ಕುಂಬಾರ, ನಿಂಗಪ್ಪ ಬಾನಾಪುರ, ನಾರಾಯಣ, ಸುರೇಶ ಕಟಗಿ, ಹುಸೇನಸಾಬ, ಗಾಳೆಪ್ಪ ವಕೀಲರು, ಪಂಪಣ್ಣ ಕಿನ್ನಾಳ, ಕೋಶಾಧ್ಯಕ್ಷ ಸಂತೋಷ ದೇಶಪಾಂಡೆ, ತಾಲೂಕ ಗೌರವ ಕಾರ್ಯದರ್ಶಿ ರಮೇಶ ತುಪ್ಪದ, ಕೋಶಾಧ್ಯಕ್ಷ ಗವಿಸಿದ್ಧೇಶ ಹುಡೇಜಾಲಿ, ಶಿವಕುಮಾರ ಕುಕನೂರ, ಬಸವರಾಜ ಶಿರಗುಂಪಿ ಶೆಟ್ಟರ್, ಹುಲಗಪ್ಪ ಕಟ್ಟಿಮನಿ, ತೋಟಪ್ಪ ಕಾಮನೂರ, ಎನ್.ಸಿ.ಗೌಡರ, ಈಶಪ್ಪ ದಿನ್ನಿ, ಜಗದೀಶ ಗುತ್ತಿ, ಅಶೋಕ ಕುಂಬಾರ, ಶುಕ್ರುಸಾಬ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

 

ಕೊಪ್ಪಳ ತಾಲೂಕ ಕಸಾಪ ನೂತನ ಅಧ್ಯಕ್ಷರಾಗಿ ಚೆನ್ನಬಸಪ್ಪ ಕಡ್ಡಿಪುಡಿ ನೇಮಕ
ಕೊಪ್ಪಳ, ೨೭-ಕೊಪ್ಪಳ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಅಧ್ಯಕ್ಷರಾಗಿ ಚೆನ್ನಬಸಪ್ಪ ಕಡ್ಡಿಪುಡಿ ಅವರನ್ನು ನೇಮಕ ಮಾಡಲಾಗಿದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ರಾಜಶೇಖರ ಅಂಗಡಿ ತಿಳಿಸಿದ್ದಾರೆ.
ಈ ಕುರಿತು ಪ್ರಕಟನೆ ನೀಡಿರುವ ಅವರು, ನಿಕಟಪೂರ್ವ ಅಧ್ಯಕ್ಷ ಗಿರೀಶ ಪಾನಘಂಟಿಯವರ ರಾಜಿನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.
ತಾಲೂಕಿನ ನೆಲ, ಜಲ, ಭಾಷೆ ಸೇರಿದಂತೆ ಸಾಹಿತ್ಯ ಪರಿಷತ್ತಿನ ಎಲ್ಲ ಚಟುವಟಿಕೆಗಳನ್ನು ನಿರ್ವಹಿಸುವಂತೆ ಸೂಚಿಸಿದ್ದಾರೆ.

Please follow and like us:
error