ಗವಿಮಠದ ಆವರಣದಲ್ಲಿ ರಂಗೋಲಿಯ ಮೆರಗು

ಕೊಪ್ಪಳ: ದಕ್ಷಿಣ ಭಾರತದ ಕುಂಭಮೇಳವೆಂದೆ ಪ್ರಖ್ಯಾತವಾದ ಗವಿಮಠದ ಶ್ರೀ ಗವಿಸಿದ್ದೇಶ್ವರ ಮಹಾರಥೋತ್ಸವಕ್ಕೆ ದಿನಗಣನೆ ಆರಂಭವಾಗಿದ್ದು ನಗರದ ಸುತ್ತಮುತ್ತಲಿನ ಸರ್ವ ಸದ್ಭಕ್ತರಲ್ಲಿ ಸಂತಸ ಮೂಡಿದೆ. ಗವಿಮಠವು ಬಣ್ಣ ಬಣ್ಣದ ವಿದ್ಯುತ್ ಅಲಂಕಾರಗಳಿಂದ ಶೃಂಗಾರಗೊಳ್ಳುತ್ತಿದೆ. ಇಂದು ನಗರದ ಶ್ರೀಗವಿಮಠಕ್ಕೆ ಆಗಮಿಸಿದ ಭಕ್ತರು ಶ್ರೀಮಠದ ಮುಂಭಾಗದಲ್ಲಿ ಸಿದ್ದಗೊಳ್ಳುತ್ತಿರುವ ಮಹಾಗೋಪುರದ ಎದುರಿನಲ್ಲಿ ಕೆಂಪು ಮಣ್ಣಿನಿಂದ ಸುಂದರಗೊಂಡ ಆವರಣದಲ್ಲಿ ಮಹಿಳಾ ಭಕ್ತರು ತಮ್ಮ ಭಕ್ತಿಯ ಸಂಕೇತದಂತಿರುವ, ವಿವಿಧ ಬಣ್ಣಗಳಿಂದ ತುಂಬಿದ, ಚೆಲುವಿನ ಚಿತ್ತಾರದಂತೆ ಕಂಗೂಳಿಸುತ್ತಿರುವ ಬೃಹಾದಾಕಾರದ ರಂಗೊಲಿ ಬಿಡಿಸಿದ್ದಾರೆ. ನಮ್ಮ ನಾಡಿನ ಅನೇಕ ಹಬ್ಬಗಳಲ್ಲಿ ಒಂದಾದ ಮಕರ ಸಂಕ್ರಾಂತಿಗೆ ಶುಭಾಶಯ ಕೋರುವಂತಹ ಈ ರಂಗೋಲಿ ಶ್ರೀ ಗವಿಮಠಕ್ಕೆ ಆಗಮಿಸುವ ಭಕ್ತರಿಗೆ ಅತ್ಯಾಕರ್ಷಣೆಯಾಗಿ ಗಮನಸೆಳೆಯಿತು.

Please follow and like us:
error