ಗಣೇಶ ವಿಸರ್ಜನೆ ಸ್ಥಳಕ್ಕೆ ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ಭೇಟಿ : ಪರಿಶೀಲನೆ


ಕೊಪ್ಪಳ ಸೆ. : ಕೊಪ್ಪಳ ನಗರದ ಗಣೇಶ ವಿಸರ್ಜನೆ ಸ್ಥಳವಾದ ಹುಲಿಕೆರೆಗೆ ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ಅವರು ಇಂದು (ಸೆಪ್ಟೆಂಬರ್.4) ಭೇಟಿ ನೀಡಿ ಪರಿಶೀಲಿಸಿದರು.  ನೀರಿನ ಆಳ, ಗಣೇಶ ಮೂರ್ತಿಗಳನ್ನು ವಿಸರ್ಜಿಸುವ ವೇಳೆ ಪೊಲೀಸ್ ಹಾಗೂ ನಗರಸಭೆಯಿಂದ ಯಾವ ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂಬುವುದರ ಬಗ್ಗೆ ಮಾಹಿತಿ ಪಡೆದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೇಣುಕಾ ಸುಕುಮಾರ್, ಡಿ.ವೈ.ಎಸ್.ಪಿ ವೆಂಕಟ್ಟಪ್ಪ ನಾಯಕ, ತಹಶೀಲ್ದಾರ ಜೆ.ಬಿ ಮಜ್ಗಿ, ನಗರ ಪೊಲೀಸ್ ಠಾಣೆಯ ಪಿ.ಐ ಶಿವಾನಂದ ವಾಲಿಕಾರ, ನಗರಸಭೆ ಪೌರಾಯುಕ್ತ ಸುನೀಲ್ ಪಾಟೀಲ್ ಸೇರಿದಂತೆ ಮತ್ತಿತರರು ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Please follow and like us: