ಗಣಿನಾಡಿನಲ್ಲಿ ಕರೋನಾ ಸಾವಿನ ಸಂಖ್ಯೆ ಏರಿಕೆ ಒಂದೇ ದಿನ 9 ಜನ ಸಾವು : ಕೊಪ್ಪಳ ಜಿಲ್ಲೆಯವರು ಇಬ್ಬರು ?

ಬಳ್ಳಾರಿ- ಗಣಿನಾಡು ಬಳ್ಳಾರಿಯಲ್ಲಿ ಕೊರೋನಾ ಮರಣ ಮೃದಂಗ ಮುಂದುವರೆದಿದೆ. ಇಂದು ಒಂದೇ ದಿನ 9 ಜನ ಸಾವನ್ನಪ್ಪಿದ್ದಾರೆ. ಎಂದು  ಡಿಸಿ ಎಸ್. ಎಸ್. ನಕುಲ್ ಅಧಿಕೃತ ಮಾಹಿತಿ ನೀಡಿದ್ದಾರೆ.  ನಿನ್ನೆಯ ದಿನ ನಾಲ್ವರು ಹಾಗೂ  ಇವತ್ತು 9  ಜನರು ಸಾವನ್ನಪ್ಪಿದ್ದಾರೆ.  ವಿವಿಧ ಖಾಯಿಲೆಯಿಂದ ಬಳಲುತ್ತಿದ್ದ 9 ಜನರು ಸಾವನ್ನಪ್ಪಿದ್ದಾರೆ, ಇವತ್ತಿ‌ನ 9  ಪ್ರಕರಣ ಸೇರಿ ಒಟ್ಟು 23 ಕ್ಕೆ ಏರಿಕೆಯಾಗಿರುವುದು ಜನಸಾಮಾನ್ಯರಲ್ಲಿ ಆತಂಕ ಮೂಡಿಸಿದೆ.  ಇದರಲ್ಲಿ ಕೊಪ್ಪಳ ಜಿಲ್ಲೆಯ ಇಬ್ಬರು ಸೇರಿದ್ದಾರೆ.

1- ಹೊಸಪೇಟೆಯ ಆಜಾದ್ ನಗರದ 66 ವರ್ಷದ ನಿವಾಸಿ ಪುರುಷ, ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು- ಸ್ಯಾರಿ ಕೇಸ್.

2- ಕೊಪ್ಪಳ ಜಿಲ್ಲೆಯ ಗಂಗಾವತಿಯ ರಂಗಾಪುರ ಕ್ಯಾಂಪ್ ನ  43 ವರ್ಷ ವ್ಯಕ್ಯಿ ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದರು.

3- ಆಂಧ್ರಪ್ರದೇಶದ ಆದೋನಿಯ 52 ವರ್ಷದ ಮಹಿಳೆ, ಹೃದಯ ಸಂಬಂಧಿ ಕಾಯಿಲೆ ಮತ್ತು ಅಧಿಕ ರಕ್ತದೊತ್ತಡ.

4-  ಹೊಸಪೇಟೆ ತಾಲೂಕಿನ ಧರ್ಮಸಾಗರ ಗ್ರಾಮದ 56 ವರ್ಷದ ಪುರುಷ ವ್ಯಕ್ತಿ ಸಾವು.

5- ಬಳ್ಳಾರಿಯ ಮಿಲ್ಲರ್ ಪೇಟೆಯ 60 ವರ್ಷದ ಮಹಿಳೆ.

6- ಕೊಪ್ಪಳದ ಭಾಗ್ಯನಗರದ  52 ವರ್ಷದ ಪುರುಷ

7- ಆಂಧ್ರಪ್ರದೇಶದ ಆದೋನಿಯ 41 ವರ್ಷದ ಪುರುಷ

8-  ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಹನುಮಾಪುರದ 70 ವರ್ಷದ ಪುರುಷ

9- ಬಳ್ಳಾರಿ ಜಿಲ್ಲೆಯ ಸಿರುಗುಪ್ಪದ 31 ವರ್ಷದ ಪುರುಷ.

ಆದರೆ 6ನೇ ಕ್ರಮ ಸಂಖ್ಯೆಯಲ್ಲಿರುವ ವ್ಯಕ್ತಿ ಭಾಗ್ಯನಗರದವರಲ್ಲ ಎಂದು ಮಾಹಿತಿ ನೀಡಿದ್ದಾರೆ

One death case in Bellary is linked to Bhagya Nagara. However this information is not correct. The positive person does not live in Bhagya Nagara. He is living in Bellary

Please follow and like us:
error