ಗಂಗೆಯ ಶಾಪ ಮೋದಿಯ ಭೋಗಸ್ ಭಾಷಣಕ್ಕೆ ತಗುಲುವದು ಗ್ಯಾರಂಟಿ : ಗೊಂಡಬಾಳ

ಕೊಪ್ಪಳ, ಎ. ೨೦: ಕಳೆದ ಲೋಕಸಭಾ ಚುನಾವಣಾ ವೇಳೆ ಮೋದಿ ಕೊಟ್ಟ ಭರವಸೆಗಳಲ್ಲಿ ನಮಾಮಿ ಗಂಗಾ ಎಂಬ ಯೋಜನೆ ಬರೋಬ್ಬರಿ ೨೦ ಸಾವಿರ ಕೋಟಿ ಹಣ ಮತ್ತು ಪ್ರತ್ಯೇಕ ಸಚಿವಾಲಯ ಸ್ಥಾಪಿಸಿದ್ದರು, ಆದರೆ ಎಲ್ಲಾ ಹಣವನ್ನು ನುಂಗಿರುವ ಮೋದಿ ಸರಕಾರಕ್ಕೆ ಗಂಗೆಯ ಶಾಪ ತಗುಲುತ್ತದೆ ಎಂದು ಕೆಪಿಸಿಸಿ ಕಾರ್ಮಿಕ ರಾಜ್ಯ ಕಾರ್ಯದರ್ಶಿ ಮಂಜುನಾಥ ಜಿ. ಗೊಂಡಬಾಳ ಹೇಳಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ರವಿದಾಸ, ಮಣಿಕರ್ಣಿಕಾ, ಹರಿಶ್ಚಂದ್ರ ಘಾಟ್ ಮುಂತಾದ ಸುಮಾರು ೮೪ ಘಾಟ್‌ಗಳಿಂದ ಬರುವ ಹೊಲಸು ತ್ಯಾಜ್ಯವನ್ನು ಯಾವುದೇ ಸಂಸ್ಕರಣೆ ಇಲ್ಲದೇ ನದಿಗೆ ಬಿಡಲಾಗುತ್ತಿದೆ. ಸಾಧ್ವಿ ಶಿರೋಮಣಿ ಉಮಾ ಭಾರತಿಗೆ ವಹಿಸಲಾಗಿತ್ತು, ಸನ್ಯಾಸಿನಿ ಆದ ಉಮಾಭಾರತಿ ಕೆಲಸವನ್ನೇ ಮಾಡಲಿಲ್ಲ ಎಂದರೆ ಅವರು ೪ ವರ್ಷ ಏನು ಮಾಡಿದರು, ನಂತರ ಅದನ್ನು ಉಮಾಭಾರತಿಯಿಂದ ಕಿತ್ತುಕೊಂಡು ನಿತಿನ್ ಘಡ್ಕರಿಗೆ ನೀಡಲಾಗಿತ್ತು ಆದರೂ ಅವರು ಸುಳ್ಳು ಹೇಳಿ ಕಾಲ ಕಳೆದರು. ಮೋದಿಯ ವಾರಣಾಸಿ ಕ್ಷೇತ್ರದಲ್ಲೇ ಬರುವ ಗಂಗೆಯು ಅಶುದಳಾಗಿಯೇ ಇರುವದರಿಂದ ಈ ಭಾರಿ ಖಂಡಿತ ಮೋದಿಗೆ ಅದರ ಶಾಪ ತಗುಲುತ್ತದೆ. ಗಂಗಾ ನದಿಯ ಶುದ್ಧತೆಯ ಕುರಿತು ಸಿಕ್ಕಾಪಟ್ಟೆ ಮಾತನಾಡಿದ್ದಾರೆ, ಆದರೆ ಅಲ್ಲಿ ಕೇವಲ ಹಣವನ್ನು ಲಪಟಾಯಿಸಿದ್ದಾರೆ.
೨೦ ಸಾವಿರ ಕೋಟಿ ಹಣವನ್ನು ಇಟ್ಟಿದ್ದರು, ಆದರೆ ಅದನ್ನು ೫ ವರ್ಷದಲ್ಲಿ ಖರ್ಚು ಮಾಡಲು ಸಾಧ್ಯವಾಗಿಲ್ಲ ಎಂದರೆ ಮೋದಿಯ ವಿದೇಶ ಪ್ರವಾಸಗಳು ಕಾರಣ. ಅವರು ದೇಶವನ್ನು ಮರೆತು ವಿದೇಶಗಳಿಗೆ ಸುತ್ತಿದ್ದರ ಹಿಂದೆ ಅನುಮಾನ ಕಾಡುತ್ತದೆ. ಮೋದಿ ದಿನಕ್ಕೆ ಮೂರು ಬಾರಿ ಬಟ್ಟೆ ಬದಲಾಯಿಸಿ ಶೋಕಿಲಾಲ ರೀತಿ ಇದ್ದಾರೆ. ಅವರು ಕೋಟಿ ಕೋಟಿ ಹಣವನ್ನು ತಮ್ಮ ವರ್ಣರಂಜಿತ ಬದುಕಿಗೆ ಹಾಕಿದ್ದಾರೆ. ಸುಳ್ಳು ಜಾಹೀರಾತುಗಳ ಮೂಲಕ ಜನರಿಗೆ ಮೋಸ ಮಾಡುತ್ತಿದ್ದಾರೆ. ಜನರಿಗೆ ಮಂಕು ಬೂಧಿ ಎರಚುತ್ತಿದ್ದಾರೆ. ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಈಗಲೂ ಕುಡಿಯುವ ನೀರಿನ ಯೋಜನೆಗೆ ಹಣ ನೀಡಲು ಅಲ್ಲಿನ ಬಿಜೆಪಿ ಸಂಸದ ಉದಾಸಿಗೆ ಸಾಧ್ಯವಾಗಿಲ್ಲ. ಕೊಪ್ಪಳದಲ್ಲಿ ಎರಡು ದಿನಕ್ಕೊಮ್ಮೆ ಕುಡಿಯುವ ನೀರನ್ನು ಕೊಡಲಾಗುತ್ತಿದೆ. ಕೆಲವೇ ದಿನದಲ್ಲಿ ಪ್ರತಿದಿನ ೨೪/೭ ಮಾದರಿಯಲ್ಲಿ ನೀರು ಕೊಡಲು ಸಿದ್ಧತೆ ನಡೆದಿದೆ. ತುಂಗಭದ್ರೆಗೆ ಒಂದು ಸಣ್ಣ ಸಹಾಯವನ್ನೂ ಬಿಜೆಪಿ ಮಾಡಿಲ್ಲ. ಅಲ್ಲಿನ ಸಂಸದ ಸಚಿವರಾಗಿದ್ದ ಬಿ. ಶ್ರೀರಾಮುಲು ಕೇವಲ ಭೊಗಳೇ ಬಿಡುವ ದಾಸಯ್ಯನಿದ್ದಂತೆ.
ಶ್ರೀರಾಮುಲು ಮತ್ತು ಈಶ್ವರಪ್ಪ ಬಿಜೆಪಿಯ ಒದರು ಬಡುಕರು : ಬಿಜೆಪಿಯಲ್ಲಿ ಕುರುಬರು ಮತ್ತು ವಾಲ್ಮೀಕಿ ಸಮುದಾಯವನ್ನು ತಮ್ಮತ್ತ ತರುವ ಮತ್ತು ಸಿದ್ದರಾಮಯ್ಯ ಹಾಗೂ ಜಾರಕಿಹೊಳಿ ಕುಟುಂಬಗಳನ್ನು ಎದುರು ಹಾಕಿಕೊಳ್ಳುವ ಗಂಡಸರು ಇಲ್ಲದ ಕಾರಣ ಅಂದರಗಿನ ಜೋಕರ್‌ಗಳನ್ನು ಇಟ್ಟುಕೊಂಡಿದ್ದಾರೆ. ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಮತ್ತು ಜಾರಕಿಹೊಳಿ ಇಲ್ಲದ ಒಂದೇ ದಿನದಲ್ಲಿ ಬಿ. ಶ್ರೀರಾಮುಲು ಮತ್ತು ಈಶ್ವರಪ್ಪರನ್ನು ಹೊರಗೆ ದಬ್ಬಲಾಗುತ್ತದೆ. ಬಿಜೆಪಿಯಲ್ಲಿ ಅಹಿಂದ ವರ್ಗದ ಹಿತ ಕಾಪಾಡಲು ಸಾಧ್ಯವೇ ಇಲ್ಲ. ಅದು ಆರ್‌ಎಸ್‌ಎಸ್ ಬೇಸಡ ಪಕ್ಷ. ಅಲ್ಲಿ ಮನುವಾದಿಗಳ ಪಕ್ಷ. ಅಲ್ಲಿ ಜಾತಿ ವರ್ಣಭೇದ ಪ್ರಮುಖವಾಗುತ್ತದೆ. ಧರ್ಮ ಒಡೆಯುವುದೇ ಮುಖ್ಯ ಹೊರತು ಅವರಿಗೆ ಮಾನವೀಯತೆ ಇಲ್ಲ, ಬಿಜೆಪಿಯವರು ಶ್ರೀರಾಮುಲುಗೆ ಇಂದೇ ವಿಧಾನಸಭೆ ಉಪನಾಯಕನ ಸ್ಥಾನ ಕೊಡಲಿ ರಾಜ್ಯದ ಎಲ್ಲಾ ವಾಲ್ಮೀಕಿಯವರು ಬಿಜೆಪಿಗೆ ಮತ ಹಾಕುತ್ತೇವೆ. ಇಲ್ಲವಾದಲ್ಲಿ ಒಂದೂ ಮತವನ್ನು ಬಿಜೆಪಿಗೆ ಹಾಕಬಾರದು, ಹಾಕುವದೂ ಇಲ್ಲ ಹಾಗೂ ಸ್ವಾಭಿಮಾನಿಯ ಸ್ವಾಭಿಮಾನವನ್ನು ಅಧಿಕಾರಕ್ಕಾಗಿ ಮತ್ತು ತಮ್ಮ ರಡ್ಡಿ ಕುಟುಂಬದ ಆಸ್ತಿಗಳನ್ನು ಉಳಿಸಿಕೊಳ್ಳಲು, ಅವರ ಮೇಲಿನ ಕೇಸ್ ವಾಪಸ್ ಪಡೆಯಲು ಮರಳಿ ಬಿಜೆಪಿ ಸೇರಿ ತಮ್ಮದು ಸ್ವಾಭಿಮಾನವೇ ಇಲ್ಲದ ಜೀವನ ಎಂದು ತೋರಿಸಿದ್ದಾರೆ, ಮೋದಿ ಈ ದೇಶದ ದೊಡ್ಡ ದಗಲ್‌ಬಾಜಿ ಎಂದು ಗೊಂಡಬಾಳ ಕಿಡಿ ಕಾರಿದ್ದಾರೆ.

Please follow and like us:
error