ಗಂಗಾವತಿಯ ಸಂಗಾಪುರ ಗ್ರಾಮದಲ್ಲಿ ಬಾಲಕನ ಮೇಲೆ ಚಿರತೆ ದಾಳಿ

ಗಂಗಾವತಿ  ಚಿರತೆಯೊಂದು ಇತ್ತೀಚಿಗಷ್ಟೇ ಪೂಜಾರಿಯನ್ನು ಬಲಿತೆಗೆದುಕೊಂಡಿತ್ತು. ಆದರೂ ಇನ್ನೂ ಚಿರತೆ ಸೆರೆ ಸಿಕ್ಕಿಲ್ಲ.  ಇಂದು ಸಂಜೆ ಸಂಗಾಪುರದ ಗುಡ್ಡದ ಹತ್ತಿರ  ಕುರಿ ಹಟ್ಟಿಗೆ ನುಗ್ಗಿ ಹತ್ತು ವರ್ಷದ ಅನಿಕುಮಾರ ತಂದೆ ರಾಜು ಎಂಬ ಬಾಲಕನ ಮೇಲೆ ದಾಳಿ ಮಾಡಿ ಗಂಭೀರವಾಗಿ ಗಾಯಗೊಳಿಸಿದೆ.
ಸಂಗಾಪುರ ಗ್ರಾಮದಿಂದ ರಾಂಪುರ ಗ್ರಾಮಕ್ಕೆ ಹೋಗುವ ರಸ್ತೆ ಪಕ್ಕದಲ್ಲಿ ಕುರಿ ಹಟ್ಟಿ ಹಾಕಿ ಗುಡಿಸಲಲ್ಲಿ ವಾಸ ಮಾಡುತ್ತಿರುವ ಬಡ ಕುಟುಂಬದ ಬಾಲಕ ಅನೀಲ್ ಕುಮಾರ ತಮ್ಮ ಕುರಿ ಗಳನ್ನು ಹಟ್ಟಿಯಲ್ಲಿ ಕಟ್ಟುವ ವೇಳೆ ಚಿರತೆ ದಾಳಿ ಮಾಡಿದ್ದು ಬಾಲಕನ ಕೂಗಾಟ ಕೇಳಿ ಅಕ್ಕಪಕ್ಕದ ಜನರು ಬಂದು ಬಾಲಕನನ್ನು ಬಚಾವ್ ನರಭಕ್ಷಕ ಚಿರತೆಯಿಂದ ಮಾಡಿದ್ದಾರೆ. ದಾಳಿಗೊಳಗಾದ ಬಾಲಕನನ್ನು ಗಂಗಾವತಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದುವರೆಗೆ ಚಿರತೆಯನ್ನು ಬಂಧಿಸದ ಅರಣ್ಯ  ಇಲಾಖೆಯ ಅಸಾಮರ್ಥ್ಯಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅರಣ್ಯ ಇಲಾಖೆಯವರು ಸಾರ್ವಜನಿಕರು ಸಂಜೆಯ ಹೊತ್ತಿನಲ್ಲಿ ಈ ಭಾಗದಲ್ಲಿ ಸಂಚರಿಸ ಬೇಡಿ ಎಂದು ವಿನಂತಿ ಮಾಡಿಕೊಂಡಿದ್ದಾರೆ.

Please follow and like us:
error