ಖಾಸಗೀಕರಣದಿಂದ ಮೀಸಲಾತಿಗೆ ದಕ್ಕೆ : ಶಾಸಕ ಕೆ. ರಾಘವೇಂದ್ರ ಹಿಟ್ನಾಳ


ಕೊಪ್ಪಳ ಅಳವಂಡಿ ಗ್ರಾಮವು ಕ್ಷೇತ್ರದ ಅತ್ಯಂತ ದೊಡ್ಡ ಹೋಬಳಿಯಾಗಿದ್ದು ನಮ್ಮ ಅಭಿವೃದ್ಧಿಯ ದೂರ ದೃಷ್ಟಿಯಲ್ಲಿ ಈ ಗ್ರಾಮವನ್ನು ಶಿಕ್ಷಣ ಕೇಂದ್ರವನ್ನಾಗಿ ಮಾಡುವುದು ನನ್ನ ಗುರಿಯಾಗಿದೆ. ಈಗಾಗಲೇ ಕ್ಷೇತ್ರದಲ್ಲಿ ಆರೋಗ್ಯ ಶಿಕ್ಷಣ ನೀರಾವರಿ ಕ್ಷೇತ್ರದಲ್ಲಿ ಆನೇಕ ಅಭಿವೃದಿ ಕಾರ್ಯಗಳನ್ನು ಕೈಗೊಂಡಿದ್ದು ಬರುವ ದಿನಗಳಲ್ಲಿ ೯೦ ಸಾವಿರ ಎಕರೆ ಒಣ ಬೇಸಾಯದ ಭೂಮಿಯನ್ನು ಮೈಕ್ರೋ ನೀರಾವರಿ ಯೋಜನೆಯಡಿಯಲ್ಲಿ ಶೀಘ್ರವೆ ಅನುಷ್ಟಾನಗೊಳಿಸಲು ಕ್ರಿಯಾ ಯೋಜನೆ ಸಿದ್ದಗೊಲಿಸಲಾಗುತ್ತಿದೆ. ಸರ್ಕಾರವು ಈ ಬಜೆಟ್‌ನಲ್ಲಿ ಸಮಾನಾಂತರ ಕಾಲುವೆಗೆ ರೂ. ೧೫೦೦ಕೋಟಿ ಅನುದಾನ ಕಾಯ್ದಿರಿಸಿದ್ದು ಸಮನಾಂತರ ಕಾಲುವೆಯ ನಿಮಾರ್ಣವನ್ನು ಹನುಕುಂಟಿ ಗ್ರಾಮದಿಂದ ಕಾಲುವೆ ನಿರ್ಮಾಣಕ್ಕೆ ಸರ್ಕಾರಕ್ಕೆ ಅನುಮೋದನೆ ಸಲ್ಲಿಸಿದ್ದು ಇದರಿಂದ ಇಡೀ ಕೊಪ್ಪಳ ಕ್ಷೇತ್ರವು ಸಂಪೂರ್ಣವಾಗಿ ನೀರಾವರಿಗೆ ಒಳಪಡಲಿದೆ. ಎಂದು ಶಾಸಕ ರಾಘವೇಂದ್ರ ಹಿಟ್ನಾಳ ಹೇಳಿದರು. ಅವರು ಇಂದು ಅಳವಂಡಿ ಗ್ರಾಮದಲ್ಲಿ ವಿಶೇಷ ಅನುದಾನ ಯೋಜನೆಯಡಿಯಲ್ಲಿ ರೂ. ೧ ಕೋಟಿ ೫೦ ಲಕ್ಷದ ಪ್ರಾಥಮಿಕ ಆರೋಗ್ಯ ಕೇಂದ್ರದ ಕಾಮಗಾರಿಯ ಭೂಮಿ ಪೂಜೆ ನೇರವೆರಿಸಿ ಮಾತನಾಡಿದ ಶಾಸಕ ಕೆ. ರಾಘವೇಂದ್ರ ಹಿಟ್ನಾಳ
ಕೇಂದ್ರದ ಬಿಜೆಪಿ ಸರ್ಕಾರದ ದ್ವಂದ ನೀತಿಯಿಂದ ಪ್ರತಿ ವಲಯವು ತತ್ತರಿಸಿದ್ದು ಮೊನ್ನೆ ದೇಶಾದ್ಯಂತ ನಡೆದ ಬ್ಯಾಂಕ್ ನೌಕರರ ಮುಷ್ಕರವೆ ಇದ್ದಕ್ಕೆ ಮೂಕ ಸಾಕ್ಷಿಯಾಗಿದೆ. ಖಾಸಗೀಕರಣ ಮಾಡುವ ಇವರ ನೀತಿಯು ಸಂವಿಧಾನ ನಮಗೆ ಕೊಡಮಾಡಿರುವ ಮೀಸಲಾತಿಗೆ ದಕ್ಕೆ ಉಂಟಾಗುವುದು ಶತಃಸಿದ್ದ ಆಡಳಿತ ರೂಢ ಬಿಜೆಪಿ ಸರ್ಕಾರದ ಶಾಸಕರೆ ಸರ್ಕಾರದ ಆಡಳಿತ ಕಾರ್ಯವೈಖರಿ ಬಗ್ಗೆ ಬೇಸತ್ತು ಸರ್ಕಾರ ಕೊನೆಗಾಣಿಸು ಜಪಿಸುತ್ತಿದ್ದಾರೆ ಎಂದು ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಸರ್ಕಾರದ ವಿರುದ್ದ ಹರಿಹಾಯ್ದರು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಶೋಷಿತ ವರ್ಗಗಳು ಮತ್ತು ಅಲ್ಪಸಂಖ್ಯಾರ ಕಲ್ಯಾಣಕ್ಕಾಗಿ ಯಾವುದೆ ನಿರ್ದಿಷ್ಟ ಯೊಜನೆಗಳನ್ನು ಈ ಬಜೆಟ್‌ನಲ್ಲಿ ಸರ್ಕಾರ ಸಂಪೂರ್ಣ ಕಡೆಗಣಿಸಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಪಂ ಸದಸ್ಯ ಗೂಳಪ್ಪ ಹಲಗೇರಿ ತಾಪಂ ಅದ್ಯಕ್ಷ ಬಾಲಚಂದ್ರನ್ ಗ್ರಾಪಂ ಅದ್ಯಕ್ಷ ಭಾರತಿ ಎಮ್ ಬೆಣಕಲ್ ತಾಪಂ ಸದಸ್ಯ ಸಿದ್ದಲಿಂಗಸ್ವಾಮಿ ಇನಾಮ್‌ದಾರ ನಗರ ಸಭಾ ಸದಸ್ಯರುಗಳಾದ ಮುತ್ತುರಾಜ ಕುಷ್ಟಗಿ ಅಕ್ಬರಪಾಷ ಪಲ್ಟನ್ ಮುಖಂಡರುಗಳಾದ ಬಸವರೆಡ್ಡಪ್ಪ ಹಳ್ಳಿಕೇರಿ ಭರಮಪ್ಪ ನಗರ ಪ್ರಸನ್ನ ಗಡಾದ ತೋಟಪ್ಪ ಸಿಂಟರ್ ಅಡಿವೆಪ್ಪ ರಾಟಿ ಮಾಹತೇಂಶ ಸಿಂದೋಗಿ ಮಠ ಅನ್ವರ ಗಡಾದ ಶಿವಕುಮಾರ ಪೌಲಿ ಶೆಟ್ಟರ್ ನಜೀರ ಅಳವಂಡಿ ಚೌಡಪ್ಪ ಜಂತ್ಲಿ ಗುರುಬಸವರಾಜ ಹಳ್ಳಿಕೇರಿ ಕಾರ್ಯಕ್ರಮ ನಿರೂಪಿಸಿ ಕೊನೆಗೆ ವಂದಿಸಿದರು.

Please follow and like us:
error