ಕ್ಷೇತ್ರದ ನೀರಾವರಿ ಅಭಿವೃದ್ಧಿ ಕಾರ್ಯಗಳಿಗೆ ವಿರೋಧ ಪಕ್ಷದವರಿಂದ ಅಡ್ಡಿ- ರಾಘವೇಂದ್ರ ಹಿಟ್ನಾಳ ಆರೋಪ

೭.೫೦ಕೋಟಿಯ ವಿವಿಧ ಕಾಮಗಾರಿಗಳಿಗೆ ಶಾಸಕರಿಂದ ಭೂಮಿ ಪೂಜೆ

ಕೊಪ್ಪಳ : ಮುಖ್ಯಮಂತ್ರಿ ಯಡಿಯೂರಪ್ಪ ನವರು ಹೈದರಬಾದ ಕರ್ನಾಟಕವನ್ನು ಕಲ್ಯಾಣ ಕರ್ನಾಟಕವೆಂದು ಕೇವಲ ನಾಮ ಬದಲಾವಣೆ ಮಾಡಿ ಇದರ ಕಲ್ಯಾಣಕ್ಕೆ ಅನುದಾನವನ್ನು ಕುಂಠಿತಗೊಳಿಸಿದ್ದಾರೆ ದೇಶದ ಪ್ರದಾನಿಯವರು ಸುಮಾರು ೯೦ ದಿನಗಳಿಂದ ಹೋರಾಟ ಮಾಡುತ್ತಿರುವ ರೈತರ ಸಮಸ್ಯೆಗಳನ್ನು ಆಲಿಸದೆ ಅವರ ಬೇಡಿಕೆಗಳನ್ನು ಈಡೇರಿಸದೆ ೬೪ ಜನ ರೈತರು ಸಾವನ್ನೋಪಿದರು ಸಹ ಪ್ರಧಾನಿ ಮೋದಿಯವರಿಗೆ ರೈತ ಮೇಲೆ ಕರುಣೆ ಬರುತ್ತಿಲ್ಲ ರೈತ ವಿರೋದಿ ಕೃಷಿ ಕಾಯ್ದೆಗಳನ್ನು ಕೈ ಬಿಡಲು ಸಿದ್ದವಾಗದೆ ಕೇವಲ ಖಾಸಗಿಕರಣಕ್ಕೆ ಒತ್ತು ನೀಡುವದರಲ್ಲೇ ಕಾಲಹರಣ ಮಾಡುತ್ತಿದ್ದಾರೆ ಸ್ಥಳಿಯ ವಿರೋದ ಪಕ್ಷದ ನಾಯಕರು ಕ್ಷೇತ್ರದ ನೀರಾವರಿ ಕಾಮಗಾರಿಗಳಲ್ಲಿ ವಿನಃಕಾರಣ ಹಸ್ತಕ್ಷೇಪ ಮಾಡುತ್ತಿದ್ದು ನೀರಾವರಿ ಅಭಿವೃದ್ಧಿ ಕಾರ್ಯದಲ್ಲಿ ತೊಡಕು ಉಂಟು ಮಾಡಿ ನೀರಾವರಿ ಅಭಿವೃದ್ದಿಗೆ ತೊಂದರೆ ಕೊಡುತ್ತಿದ್ದಾರೆ ಎಂದು ಶಾಸಕ ರಾಘವೇಂದ್ರ ಹಿಟ್ನಾಳ ಆರೋಪಿಸಿದರು

ಕೊಪ್ಪಳ ವಿಧಾನಸಭಾ ಕ್ಷೇತ್ರದ ವಿವಿಧ ಗ್ರಾಮಗಳಾದ ಹಾಲವರ್ತಿ ಕುಣಿಕೇರಿ ಕುಣಿಕೇರಿತಾಂಡ ಚಿಕ್ಕಬಗನಾಳ ಹಿರೇಬಗನಾಳ ಕಾಸನಕಂಡಿ ಹಾಗೂ ಅಲ್ಲಾನಗರ ಗ್ರಾಮಗಳಲ್ಲಿ ಎಸ್‌ಡಿಪಿ ಹಾಗೂ ಡಿಎಮ್‌ಎಫ್ ಯೋಜನೆಗಳಡಿಯಲ್ಲಿ ರೂ ೭.೫೦ಕೋಟಿಯ ಸಿಸಿ ರಸ್ತೆ ಕರೆ ಅಭಿವೃದ್ಧಿ ಕಾಮಗಾರಿ ಚರಂಡಿ ಶಾಲಾ ಕಟ್ಟಡ ಹಾಗೂ ಸ್ಮಾಟ್ ಕ್ಲಾಸ್ ತರಗತಿ ಉದ್ಘಾಟನೆ ಮತು ಜನಸಂಪರ್ಕ ಸಭೆ ನೇರವೆರಿಸಿ ಮಾತನಾಡಿದ  ಶಾಸಕ ಕೆ. ರಾಘವೇಂದ್ರ ಹಿಟ್ನಾಳ  ಅವರ ಅಧಿಕಾರದ ಅವಧಿಯಲ್ಲಿ ಈ ಯೋಜನೆಗಳು ಅವರ ಕಲ್ಪನೆಗೆ ಬರದಿದ್ದರು ನಾವು ಮಾಡುವ ಅಭಿವೃದ್ಧಿ ಕಾರ್ಯಗಳಿಗೆ ಹಸ್ತಕ್ಷೇಪ ಉಂಟುಮಾಡಿ ಈಗಾಗಲೇ ಲೋಕಾರ್ಪಣೆಯಾಗಬೇಕಾಗಿದ್ದ ರೂ ೮೯.೦೦ ಕೋಟಿಯ ಅಳವಂಡಿ ಬೇಟಗೇರಿ ನೀರಾವರಿ ಯೋಜನೆಯನ್ನು ವಿನಾಕಾರಣ ಜನರ ದಿಕ್ಕು ತಪ್ಪಿಸುತ್ತಿದ್ದಾರೆ ಕೊಪ್ಪಳ ಹಾಗೂ ಯಲಬುರ್ಗ ಕ್ಷೇತ್ರದ ಕೆರೆ ತುಂಬಿಸುವ ಯೋಜನೆಗೆ ರೂ ೨೯೮.೦೦ಕೋಟಿ ಅನುದಾನ ನೀಡಿದ್ದು ಜನಪರ ಕಾಂಗ್ರೆಸ್ ಸರ್ಕಾರದಿಂದ ಶಾಶ್ವತ ಕಾಮಗಾರಿಗಳು ಸಾದ್ಯವೆಂದು ಹೇಳಿದರು.

ಈ ಸಂದರ್ಭದಲ್ಲಿ ಜಿಪಂ ಸದಸ್ಯ ಗೂಳಪ್ಪ ಹಲಗೇರಿ ತಾಪಂ ಅಧ್ಯಕ್ಷ ಬಾಲಚಂದ್ರನ್ ಮಾಜಿ ಎಪಿಎಮ್‌ಸಿ ನಾಗರಾಜ ಚಳ್ಳೂಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ಯಲ್ಲಮ್ಮ ವಾಲ್ಮೀಕಿ ಉಪಾಧ್ಯಕ್ಷ ಶೃತಿ ಎಸ್ ಹೊಸಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಾಟನ್‌ಪಾಷ ನಗರ ಸಭಾ ಸದಸ್ಯ ಅಕ್ಬರ್ ಪಾಷ ಪಲ್ಟನ್ ಮುಖಂಡರುಗಳಾದ ಪ್ರಸನ್ನ ಗಡಾದ ಶರಣಪ್ಪ ಸಜ್ಜನ ಕೃಷ್ಣರೆಡ್ಡಿ ಗಲಬಿ ಮುದಿಯಪ್ಪ ಆದೋನಿ ಆನಂದ ಕಿನ್ನಾಳ ಶಿವಕುಮಾರ ಪೌಲಿ ಶೆಟ್ಟರ ಭರಮಪ್ಪ ಗೋರವರ್ ಮಹೇಂದ್ರ ಹಾಲವರ್ತಿ ಹೇಮಣ್ಣ ದೇವರಮನಿ ಕುಮಾರ ಮಜ್ಜಿಗಿ ಶಂಕ್ರಪ್ಪ ಹೊಸಳ್ಳಿ ಕ್ಷೇತ್ರ ಶಿಕ್ಷಣಾಧಿಕಾರಿ ಉಮಾದೇವಿ ಸೊನ್ನದ್ ಸಿಡಿಪಿಓ ರೋಹಿಣಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಿಕಾರ್ಜುನ ಹಾಗೂ ಇನ್ನೂ ಅನೇಕ ತಾಲೂಕ ಅಧಿಕಾರಿಗಳು ಮಾದ್ಯಮ ವಕ್ತಾರ ಕುರಗೋಡ ರವಿ ಯಾದವ ಉಪಸ್ಥಿತರಿದ್ದರು.

Please follow and like us:
error