ಕ್ಷಯರೋಗ ದಿನಾಚರಣೆ ಅಂಗವಾಗಿ ಕಾಲೇಜು ವಿದ್ಯಾರ್ಥಿಗಳಿಗೆ ಜಿಲ್ಲಾಮಟ್ಟದ ರಸಪ್ರಶ್ನೆ ಕಾರ್ಯಕ್ರಮ

ಅಗತ್ಯ ಚಿಕಿತ್ಸೆ ಹಾಗೂ ಜಾಗೃತಿಯಿಂದ ಕ್ಷಯಮುಕ್ತ ಜಿಲ್ಲೆಯನ್ನಾಗಿಸಲು ಸಾಧ್ಯ: ಪ್ರೊ.ಬಸವರಾಜ ಬೆಣ್ಣಿ
ಕೊಪ್ಪಳ,  : ಆರೋಗ್ಯ ಇಲಾಖೆಯು ಕ್ಷಯ ನಿರ್ಮೂಲನೆಗೆ ತಳಮಟ್ಟದಿಂದ ಕಾರ್ಯನಿರ್ವಹಿಸುತ್ತಿದ್ದು, ಕ್ಷಯ ರೋಗಿಗಳು ನಿರಂತರ ಚಿಕಿತ್ಸೆ ಪಡೆಯುವುದರಿಂದ ಮತ್ತು ಕ್ಷಯದ ಕುರಿತು ಜಾಗ್ರತೆ ವಹಿಸುವುದರಿಂದ ಮುಂದಿನ ಎರಡು ವರ್ಷಗಳಲ್ಲಿ ಜಿಲ್ಲೆಯನ್ನು ಕ್ಷಯರೋಗ ಮುಕ್ತ ಜಿಲ್ಲೆಯನ್ನಾಗಿಸಲು ಸಾಧ್ಯ ಎಂದು ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರ, ಕೊಪ್ಪಳದ ನಿರ್ದೇಶಕ ಪ್ರೊ.ಬಸವರಾಜ ಬೆಣ್ಣಿ ಹೇಳಿದರು.
ಜಿಲ್ಲಾ ಸರ್ಕಾರಿ ನೌಕರರ ಭವನದಲ್ಲಿ ಸೋಮವಾರ (ಮಾ. 22)ದಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕ್ಷಯ ರೋಗ ನಿರ್ಮೂಲನಾ ಕೇಂದ್ರ, ರೆಡ್‌ಕ್ರಾಸ್ ಸಂಸ್ಥೆಯ ಜಿಲ್ಲಾ ಘಟಕದ ಆಶ್ರಯದಲ್ಲಿ ವಿಶ್ವ ಕ್ಷಯರೋಗ ದಿನಾಚರಣೆ-2011 ಮಾರ್ಚ್ 24ರ ಅಂಗವಾಗಿ ಕಾಲೇಜು ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಜಿಲ್ಲಾ ಮಟ್ಟದ ರಸಪ್ರಶ್ನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದೈಹಿಕ ಕೌಶಲ್ಯದಲ್ಲಿ ಬೆಳವಣಿಗೆ ಮತ್ತು ಅಭಿವೃದ್ಧಿ ಎಂಬ ಎರಡು ವಿಧಗಳಿವೆ. ಮನುಷ್ಯನ ಆರೋಗ್ಯಕ್ಕೆ ಮನಸ್ಸು ಮತ್ತು ಮನಸ್ಸಿಗೆ ಸಂಬAಧಿಸಿದ ಆಲೋಚನೆಗಳು ಮುಖ್ಯವಾಗುತ್ತವೆ. ಮನೆಯ ಯಜಮಾನನಿಗೆ ಕ್ಷಯ ಬಂದರೆ ಆ ಕುಟುಂಬದಲ್ಲಿ ಆರ್ಥಿಕ ಹಿನ್ನಡೆ ಆವರಿಸುತ್ತದೆ. ಆದ್ದರಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಸದೃಢ ಮಾನವ ಸಂಪನ್ಮೂಲದಿAದ ಮಾತ್ರ ದೇಶದ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ. ದೈಹಿಕ ಬೆಳವಣಿಗೆಯ ಜತೆಗೆ ಮಾನಸಿಕವಾಗಿಯೂ ಸದೃಢವಾಗಿರಬೇಕು ಎಂದು ಅವರು ಹೇಳಿದರು.
ನಾವು ಆರೋಗ್ಯವಾಗಿರಬೇಕು ಮತ್ತು ನಮ್ಮ ಸುತ್ತಮುತ್ತಲಿನವರ ಆರೋಗ್ಯವನ್ನು ಕಾಪಾಡುವ ಮನೋಭಾವ ಹೊಂದಬೇಕು. ರಸಪ್ರಶ್ನೆಯ ಉದ್ದೇಶವನ್ನು ಗ್ರಾಮದಿಂದ ಗ್ರಾಮಕ್ಕೆ, ನಗರದಿಂದ ನಗರಕ್ಕೆ ಕ್ಷಯರೋಗದ ಬಗ್ಗೆ ಅರಿವು ಮೂಡಿಸುವ ಮೂಲಕ ತಲುಪಿಸಬೇಕು. ಈ ಮೂಲಕ ಕ್ಷಯ ಮುಕ್ತ ದೇಶ, ರಾಜ್ಯ ಹಾಗೂ ಜಿಲ್ಲೆಯನ್ನಾಗಿಸಬೇಕು. ಕೋವಿಡ್ ಮತ್ತು ಕ್ಷಯ ಬಂದರೆ ಸದೃಢತೆಯಿಂದ ಇರಲು ಸಾಧ್ಯವಿಲ್ಲ. ಹಾಗಾಗಿ ಇವುಗಳು ಬರದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಕ್ಷಯ ರೋಗ ಜತೆಗೆ ಕರೋನಾ ಬಗ್ಗೆಯೂ ಮುಂಜಾಗ್ರತೆ ವಹಿಸಿಕೊಳ್ಳಬೇಕು ಎಂದರು.
ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಸಿಂಟಿಕೇಟ್ ಸದಸ್ಯ ಬಸವರಾಜ್ ಪೂಜಾರ್ ಮಾತನಾಡಿ, ಕ್ಷಯ ಮುಕ್ತ ಭಾರತ-2025 ಎಂಬುದು ಘೋಷವಾಕ್ಯವಾಗಿದೆ. ಕ್ಷಯ ಮುಕ್ತ ಹಾಗೂ ಸದೃಢ ಭಾರತ ನಿರ್ಮಾಣದಲ್ಲಿ ವಿದ್ಯಾರ್ಥಿಗಳ ಪಾತ್ರ ದೊಡ್ಡದು. ನಮ್ಮ ಭಾರತ ದೊಡ್ಡ ದೇಶದ ಜತೆಗೆ ಸದೃಢ ದೇಶವೂ ಹೌದು. ಕ್ಷಯ ಹರಡುವಿಕೆಯು ಗಾಬರಿಯೊಂದಿಗೆ ಅಚ್ಚರಿಯನ್ನೂ ಉಂಟುಮಾಡಿದೆ. ಕೋವಿಡ್ ಬಂದು ಬಹಳಷ್ಟು ಜನರನ್ನು ಎಚ್ಚರಿಸಿದೆ. ಜಿಲ್ಲೆಯಲ್ಲಿ 2025ಕ್ಕೆ ಕೇವಲ ಕ್ಷಯ ಮುಕ್ತದ ಜತೆಗೆ ಆರೋಗ್ಯವಂತ ಭಾರತವನ್ನು ಕಟ್ಟೋಣ. ಯುವಕರು ಈ ನಿಟ್ಟಿನಲ್ಲಿ ಕ್ರಿಯಾಶೀಲರಾಗಬೇಕು. ನಿಯಂತ್ರಣದ ಜತೆಗೆ ನಿರ್ಮೂಲನೆಯೂ ಆಗಬೇಕು ಎಂದು ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕ್ಷಯರೋಗ ನಿರ್ಮೂಲನಾ ಅಧಿಕಾರಿ ಡಾ.ಮಹೇಶ ಎಂ.ಜಿ. ಮಾತನಾಡಿ, ಮಕ್ಕಳಲ್ಲಿ ಕ್ಷಯ ರೋಗ ನಿರ್ಮೂಲನೆಯ ಅರಿವು ಮೂಡಿಸಬೇಕು. ಕ್ಷಯ ರೋಗವು ವೈದ್ಯಕೀಯ ರೋಗದ ಜತೆಗೆ ಸಾಮಾಜಿಕ ರೋಗವೂ ಆಗಿದೆ. ಸಾರ್ವಜನಿಕರು ಕೈಜೋಡಿಸದೇ ಇರುವುದರಿಂದ ಜಿಲ್ಲೆಯಲ್ಲಿ ಪ್ರತಿ ದಿನ ಮೂರು ಜನರು ಸಾವನ್ನಪ್ಪುತ್ತಿದ್ದಾರೆ. ಕ್ಷಯ ಒಂದು ಸಾಮಾಜಿಕ ಪಿಡುಗು, ಕಾಯಿಲೆಯಾಗಿದೆ. ಕಳಂಕ, ತಾರತಮ್ಯ, ನಕಾರಾತ್ಮಕ ಭಾವನೆ ಜನರಲ್ಲಿದೆ. ಹಾಗಾಗಿ ನೀವೆಲ್ಲರೂ ಕೈಜೋಡಿಸುವ ಮೂಲಕ ಕ್ಷಯ ಮುಕ್ತ ಜಿಲ್ಲೆಯನ್ನಾಗಿಸೋಣ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಟಿ.ಲಿಂಗರಾಜು, ಸ್ವಯಂ ಸೇವಾ ಸಂಸ್ಥೆಯ ಆನಂದ ಹಳ್ಳಿಗುಡಿ, ಗಂಗಾವತಿ ಟಿಎಂಎಇ ಬಿ.ಇಡಿ ಕಾಲೇಜಿನ ದೈಹಿಕ ಶಿಕ್ಷಕ ಜಯರಾಮ್ ಮರಡಿತೋಟ್ ಉಪಸ್ಥಿತರಿದ್ದರು.

Please follow and like us:
error