ಕ್ಷತ್ರೀಯ ಸಮಾಜದಿಂದ ಪೂರ್ವ ಭಾವಿ ಸಭೆ

ಕೊಪ್ಪಳ : ಮ.18, ನಗರದ ತುಳುಜಾ ಭವನಿ ದೇವಸ್ಥಾನದಲ್ಲಿ ಕರ್ನಾಟಕ ಕ್ಷತ್ರೀಯ ಒಕ್ಕೂಟ ತಾಲೂಕ ಘಟಕ ರಚನೆ ಬಗ್ಗೆ ಪೂರ್ವ ಭಾವಿ ಸಭೆ ಏರ್ಪಡಿಸಲಾಗಿತ್ತು.
ಸಭೆಯಲ್ಲಿ ಸೂರ್ಯ ವಂಶ ಕ್ಷತ್ರೀಯ ಕಲಾಲ, ಸೋಮವಂಶಿ, ಸಹಸ್ರಾರ್ಜುನ, ರಜಪೂತ, ಚೌಹಾಣ, ಆರ್ಯ ಕ್ಷತ್ರೀಯ, ಯಾಧವ ಕ್ಷತ್ರೀಯ, ಸೊಮವಂಶಿ ಸಹಸ್ರಾರ್ಜುನ, ಲಾಡ್ ಕ್ಷತ್ರೀಯ, ಭಾವಸಾರ ಕ್ಷತ್ರೀಯ, ಶಿವಾಜಿ ಮರಾಠ, ಗೊಮಧಳಿ ಕ್ಷತ್ರಿಯ, ಲಂಬಾಣಿ ಕ್ಷತ್ರೀಯ, ಹಕ್ಕಿಪಕ್ಕಿ, ಈಡಿಗ, ಉಪ್ಪಾರ ಕ್ಷತ್ರೀಯ ಇನ್ನೂ ಅನೇಕ ಕ್ಷತ್ರೀಯ ಸಮಾಜದ ಮುಖಂಡರು ಭಾಗವಹಿಸಿದ್ದರು.
ಎಲ್ಲರ ಸಲಹೆಯಂತೆ ಹನುಮಂತಪ್ಪ ಕಿಡದಾಳ ಇವರನ್ನು ತಾತ್ಕಾಲಿಕ ಸಂಚಾಲಕರನ್ನಾಗಿ ಮತ್ತು ಮಾರುತಿ ಕಾರಟಗಿ, ಉದಯ ಕಲಾಲ, ಭರತ ನಾಯಕ ಇವರುಗಳನ್ನು ಉಪಸಂಚಾಲಕರನ್ನಾಗಿ ನೇಮಕ ಮಾಡಲಾಯಿತು. ಮುಂದಿನ ಸಭೆಯ ಮತ್ತು ಸಂಘಟನೆ ಮಾಹಿತಿ ಕುರಿತು ಹೆಚ್ಚಿನ ಮಾಹಿತಿಗಾಗಿ ಮೋ : 9845610554 ಸಂಪರ್ಕಿಸಲು ಕೋರಲಾಗಿದೆ.

Please follow and like us:
error