ಕ್ರೀಡಾ ಜ್ಯೋತಿಯಂತೆ ಬೆಳಗಿ : ಡಿ.ಬಿ.ಗಡೇದ


ಕೊಪ್ಪಳ:  : ವಿದ್ಯಾರ್ಥಿಗಳು ಕ್ರೀಡಾಜ್ಯೋತಿಯಂತೆ ಬೆಳಗಬೇಕೆಂದು ಪದವಿ ಪೂರ್ವ ಶಿಕ್ಷಣ ಇಲಾಕೆಯ ಉಪ ನಿರ್ದೇಶಕರಾದ ಡಿ.ಬಿ.ಗಡೇದರವರು ನುಡಿದರು. ಅವರು ೨೦೨೦-೨೧ನೇ ಸಾಲಿನ ಪದವಿ ಪೂರ್ವ ಕಾಲೇಜುಗಳ ಜಿಲ್ಲಾಮಟ್ಟದ ಕ್ರೀಡಾಕೂಟವನ್ನು ಕ್ರೀಡಾಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಿದರು. ಮುಂದುವರೆದು ಕ್ರೀಡಾ ದ್ವಜದಲ್ಲಿ ಸ್ನೇಹ, ವಿಶ್ವಾಸ, ಸಹಕಾರ, ಸೌಹಾರ್ಧತೆ ಮತ್ತು ಪ್ರೀತಿ ಎಂಬ ಐದು ಬಳೆಗಳಿವೆ. ಅವುಗಳನ್ನು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಂಡಾಗ ಉತ್ತಮ ನಾಗರಿಕರಾಗಿ ಹೊರಒಮ್ಮಬಹುದು ಎಂದರು.
ಕ್ರೀಡಾ ಧ್ವಜಾರೋಹಣವನ್ನು ನೆರವೇರಿಸಿದ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷರಾದ ಸೋಮನಗೌಡ ಪಾಟೀಲ ಮಾತನಾಡುತ್ತಾ, ವಿದ್ಯಾರ್ಥಿಗಳು ಕೊರೋನಾ ಕಾಲದಲ್ಲಿಯೂ ಸಹ ಇಂತಹ ಉತ್ಸಾಹ ಹೊಂದಿರುವುದು ಹೆಮ್ಮೆಯ ಸಂಗತಿ. ಸೋಲು-ಗೆಲವುನ್ನು ಸಮಾನವಾಗಿ ಸ್ವೀಕರಿಸಿ ಎಂದರು. ಹಿರಿಯ ಪ್ರಾಚಾರ್ಯರಾದ ಬಸವರಾಜ ಮತ್ತು ಜಿ.ಎಂ.ಭೂಸನೂರಮಠರವರು ಗುಂಡು ಎಸೆತದ ಮೂಲಕ ಕ್ರೀಡೆಗಳಿಗೆ ಚಾಲನೆ ಒದಗಿಸಿದರು.
ವೇದಿಕೆಯ ಮೇಲೆ ಹಿರಿಯ ಪ್ರಾಚಾರ್ಯರುಗಳಾದ ರಾಜಶೇಖರ ಪಾಟೀಲ, ಶಿವಪ್ಪ ಬೇಲೇರಿ, ವೀರಶೇಖರ ಪತ್ತಾರ ಹಾಗೂ ಹಿರಿಯ ಉಪನ್ಯಾಸಕರುಗಳಾದ ಪತ್ರೇಪ್ಪ ಛತ್ತರಕಿ, ರಾಚಪ್ಪ ಕೇಸರಬಾವಿ ಮುಂತಾದವರು ಉಪಸ್ಥಿತರಿದ್ದರು.
ಈ ಕಾರ್ಯಕ್ರಮಕ್ಕೆ ಶ್ರೀಮತಿ ಲಲಿತಾ ಅಂಗಡಿ ಪ್ರಾರ್ಥಿಸಿದರು. ಡಾ.ಸಿದ್ಧಲಿಂಗಪ್ಪ ಕೊಟ್ನೆಕಲ್ ನಿರೂಪಿಸಿದರು.

Please follow and like us:
error