ಕೋವಿಡ್-19; ಇಬ್ಬರು ಗುಣಮುಖ-ಬಿಡುಗಡೆ

ಕೊಪ್ಪಳ: ಜಿಲ್ಲೆಯಲ್ಲಿ ಕೊರೊನಾ ಕೇಸ್‌ಗಳು ಹೆಚ್ಚುತ್ತಿದ್ದು ಜನ ಆತಂಕದಲ್ಲಿದ್ದಾರೆ. ಈ ನಡುವೆ ಕೊರೊನಾ ಸೋಂಕಿತರಿಬ್ಬರು ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ.

ಬುಧವಾರ P-7454 ಹಾಗೂ P-7777 ಯಶಸ್ವಿ ಚಿಕಿತ್ಸೆ ನಂತರ ಸ್ವ್ಯಾಬ್ ಟೆಸ್ಟ್‌ನಲ್ಲಿ ಕೊರೊನಾ ನೆಗೆಟಿವ್ ಬಂದಿದ್ದು, ಇಬ್ಬರನ್ನು ಕೋವಿಡ್-19 ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದೆ.

ಒಟ್ಟಾರೆಯಾಗಿ ಜಿಲ್ಲೆಯಲ್ಲಿ 41 ಕೊರೊನಾ ಕೇಸ್‌ಗಳ ಪೈಕಿ ಇಂದಿನ ಇಬ್ಬರನ್ನು ಸೇರಿಸಿ 18 ಜನ ಗುಣಮುಖರಾಗಿದ್ದಾರೆ. ಓರ್ವ ಮಹಿಳೆ ಸಾವನ್ನಪ್ಪಿದ್ದು, 22 ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

Please follow and like us:
error