ಕೋರೋನ ಮಹಾಮಾರಿಯಿಂದ ಅಭಿವೃದ್ಧಿ ಕುಂಠಿತ : ಶಾಸಕ ಕೆ. ರಾಘವೇಂದ್ರ ಹಿಟ್ನಾಳ.


ಕೊಪ್ಪಳ : ೨೦ ಹಿರೇಸಿಂದೋಗಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಗ್ರಾಮಗಳಾದ ದದೆಗಲ್, ಹಲಗೇರಿ, ಕೋಳೂರು, ಹಿರೇಸಿಂದೋಗಿ, ಕಾಟ್ರಳ್ಳಿ, ಚಿಕ್ಕ-ಸಿಂದೋಗಿ ಹಾಗೂ ಗುನ್ನಾಳ ಗ್ರಾಮಗಳಲ್ಲಿ ವಿವಿಧ ಇಲಾಖೆಯ ಯೋಜನೆಯಡಿಯಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳ ವಿಕ್ಷಣೆ ಹಾಗೂ ಜನಸಂಪರ್ಕ ಸಭೆಯಲ್ಲಿ ಮಾತನಾಡಿದ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ರವರು ದೇಶ ಹಾಗೂ ರಾಜ್ಯಕ್ಕೆ ಆವರಿಸಿರುವ ಕೋವಿಡ್-೧೯ ಮಹಾಮಾರಿಯಿಂದ ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಂಡಿದ್ದು, ಜನಪರ ಯೋಜನೆಗಳಿಗೆ ಬರುವ ಅನುದಾನವು ಸರ್ಕಾರ ಕೇವಲ ಕೋರೋನ ರೋಗದ ವಿರುದ್ಧ ಹೋರಾಟಕ್ಕೆ ಬಳಕೆ ಮಾಡುತ್ತಿದ್ದು ಬರಿ ನರೇಗ ಯೋಜನೆಯಡಿಯಲ್ಲಿ ಪಂಚಾಯತ್ ವಾರು ಕಾಮಗಾರಿಗಳನ್ನು ಕೈಗೆತ್ತಿಗೊಳ್ಳಲಾಗುತ್ತಿದೆ. ಪಂಚಾಯತಿಯ ಪಿ.ಡಿ.ಯೋ ಗಳು ಸುಮಾರು ೪೦೦-೫೦೦ ಜನರಿಗೆ ನರೇಗ ಯೋಜನೆಯಡಿಯಲ್ಲಿ ಕೆಲಸವನ್ನು ಕಡ್ಡಾಯವಾಗಿ ಕೋಡಬೇಕು, ಬಡ ಕುಟುಂಬಗಳಿಗೆ ರೂ. ೨೭೦೦೦ ಸಂದಾಯವಾಗುವದರಿಂದ ಹೆಚ್ಚು ಸಹಾಯವಾಗುತ್ತದೆ. ಕ್ಷೇತ್ರದಲ್ಲಿ ನಡೆಯುತ್ತಿರುವ ಕಾಮಗಾರಿಗಳನ್ನು ಗುತ್ತಿಗೆದಾರರು ತ್ವರಿತ ಗತಿಯಲ್ಲಿ ಸಂಪೂರ್ಣಗೊಳಿಸಬೇಕೆಂದು ಹಾಗೂ ಅಧಿಕಾರಿಗಳು ಇಂತಹ ಸಂಕಷ್ಟ ಸಮಯದಲ್ಲಿ ಜನ ಸಾಮನ್ಯರ ಸಮಸ್ಯೆಗಳಿಗೆ ಶೀಘ್ರವೆ ಸ್ಪಂದಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು. ಜನರು ಗುಣಮಟ್ಟದ ಕಾಮಗಾರಿಗಳಿಗೆ ಸಹಕರಿಸಿ ಗ್ರಾಮಗಳ ಅಭಿವೃದ್ಧಿಗೆ ಕೈಜೋಡಿಸಬೇಕೆಂದು ಕರೆ ನೀಡಿ ಜನರಿಂದ ಗ್ರಾಮಗಳಿಗೆ ಅತ್ಯವಶ್ಯಕವಿರುವ ಮೂಲಭೂತ ಸೌಕರ್ಯಗಳ ಕಲ್ಪಿಸುವ ಮನವಿಯನ್ನು ಸ್ವೀಕರಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳುತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದಂರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಾಟನ್ ಪಾಷ, ಎ.ಪಿಎಮ್.ಸಿ ಅಧ್ಯಕ್ಷ ನಾಗರಾಜ ಚಳ್ಳೂಳ್ಳಿ, ಮಾಜಿ ಕೆ.ಎಮ್.ಎಪ್ ಅಧ್ಯಕ್ಷ ವೆಂಕನಗೌಡ್ರ ಹಿರೇಗೌಡ್ರ, ಮಾಜಿ ಎ.ಪಿ.ಎಮ್.ಸಿ ಅಧ್ಯಕ್ಷರುಗಳಾದ ಜಡಿಯಪ್ಪ ಬಂಗಾಳಿ, ಕೃಷ್ಣರೆಡ್ಡಿ ಗಲಬಿ, ನಗರ ಸಭಾ ಸದಸ್ಯ ಅಕ್ಬರ ಪಾಷ ಪಲ್ಟನ್, ಮುಂಖಡರುಗಳಾದ ನವೋದಯ ವೀರುಪಣ್ಣ, ಪ್ರಸನ್ನ ಗಡಾದ್, ಕೇಶವರೆಡ್ಡಿ, ಗಾಳೆಪ್ಪ ಪೂಜರ, ಅಶೋಕ ಅಬ್ಬಿಗೇರಿ, ಹನುಮಂತ ಹಳ್ಳಿಕೇರಿ, ಅಂದಪ್ಪ ಸ್ವಾಮಿ, ಹನುಮಂತಪ್ಪ ಅರಸನಕೇರಿ, ಮೌಲಾಹುಸೇನ್ ಕೋಳೂರು, ಮಾರುತಿ ಬೊಮ್ಮನಾಳ, ತಾಲೂಕ ಕಾರ್ಯನಿರ್ವಾಹಕ ಅಧಿಕಾರಿ ವೆಂಕೋಬ, ಶಿಕ್ಷಣ ಅಧಿಕಾರಿ ಉಮಾದೇವಿ ಸೊನ್ನದ, ಜೆಸ್ಕಾಂ ಅಧಿಕಾರಿಗಳು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿಗಳು ಮತ್ತು ಮಾದ್ಯಮ ವಕ್ತರರಾದ ಕುರಗೋಡ ರವಿ ಯಾದವ್ ಉಪಸ್ಥಿತರಿದ್ದರು.

Please follow and like us:
error